ಶಹಾಬಾದ: ಎಲ್‌ಪಿಜಿ ದರ ಏರಿಕೆಯನ್ನು ವಿರೋಧಿಸಿ ಸೋಮವಾರ ರಾತ್ರಿ ಎಸ್.ಯು.ಸಿ.ಐ (ಸಿ) ವತಿಯಿಂದ ನಗರದ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಎಸ್‌ಯುಸಿಐ (ಕಮ್ಯುನಿಸ್ಟ್)ನ ನಗರದ ಕಾರ್ಯದರ್ಶಿ ಕಾಮ್ರೇಡ್ ಗಣಪತರಾವ. ಕೆ.ಮಾನೆ ಮಾತನಾಡಿ, ಅಚ್ಚೇ ದಿನ್ ಎಂದರೆ ಅದಾನಿ ಅಂಬಾನಿಗಳ ಅಚ್ಚೇ ದಿನ್ ಹೊರತು ಇದು ಜನ ಸಾಮಾನ್ಯರಿಗಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು. ಉಚಿತವಾಗಿ ಸಿಲಿಂಡರ್ ಕೊಡುತ್ತೇವೆ ಎಂದು ಹೇಳಿ ಈಗ ಕೇಂದ್ರ ಸರ್ಕಾರವು ಏಕಾಏಕಿ ರೂ೫೦/- ಏರಿಸಿದೆ. ಈ ಬೆಲೆ ಏರಿಕೆಯ ಪ್ರಹಾರವು ನಿರಂತರವಾಗಿ ನಡೆಯುತ್ತಲೇ ಇದೆ. ಪ್ರತಿಯೊಂದು ಕ್ಷೇತ್ರ ಖಾಸಗೀಕರಣಗೊಳಿಸುತ್ತಿರುವ ಬಿಜೆಪಿ ಸರ್ಕಾರವು ಇತ್ತೀಚೆಗೆ ಕಾರ್ಪೊರೇಟ್ ಧಣಿಗಳ ೬೮,೦೦೦ಕೋಟಿ ಸಾಲವನ್ನು ಮನ್ನಾ ಮಾಡಿದೆ. ಸಾಮಾನ್ಯ ಜನರನ್ನು ವಂಚಿಸಿ ಹಗಲು ದರೋಡೆಗೆ ಸರ್ಕಾರವು ಮುಂದಾಗಿದೆ ಎಂದು ಕಿಡಿಕಾರಿದರು. ಕೋವಿಡ್ ನಂತರ ಜನರಿಗೆ ಆದಾಯ ಇಲ್ಲ. ಕೆಲಸ ಕಳೆದುಕೊಂಡಿದ್ದಾರೆ. ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆಯ ವಿರುದ್ಧ ಧ್ವನಿ ಎತ್ತಿ ಅಧಿಕಾರ ವಹಿಸಿಕೊಂಡಿರುವ ಬಿಜೆಪಿ ಸರ್ಕಾರವು ತಾನು ಅಧಿಕಾರ ವಹಿಸಿಕೊಂಡಾಗ ತೆರಿಗೆಯ ಮೇಲೆ ತೆರಿಗೆ ವಿಧಿಸಿ ಜನರನ್ನು ಲೂಟಿ ಹೊಡೆಯುತ್ತಿದೆ. ಅಗತ್ಯ ವಸ್ತುಗಳ ಬೆಲೆ ಹೆಚ್ಚಾಗಿದೆ. ನಿರೋದ್ಯೋಗ, ವೇತನ ಕಡಿತ ಹೆಚ್ಚಾಗಿರುವ ಪ್ರಸ್ತುತ ಪರಿಸ್ಥಿತಿಯಲ್ಲಿ ಬೆಲೆ ಏರಿಕೆಯು ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದರು.
ಇದನ್ನೂ ಓದಿ: ಫೋಟೋಗ್ರಾಫರ್ಸ್ ಅಸೋಸಿಯೇಶನ್ ವತಿಯಿಂದ ಶಿವಾನಂದ ತಗಡೂರುಗೆ ಸನ್ಮಾನ
ಕಾಮ್ರೇಡ್ ಜಗನ್ನಾಥ.ಎಸ್.ಹೆಚ್ ಮಾತನಾಡಿ, ಡಬಲ್ ಇಂಜಿನ್ ಸರ್ಕಾರವೆಂದು ಹೇಳಿಕೊಂಡು ಡಬಲ್ ದರೋಡೆ ನಡೆಯುತ್ತಿದೆ. ಒಂದೆಡೆ ಜನಸಾಮಾನ್ಯರು ಜೀವನ ನಡೆಸಲು ಹರಸಾಹಸ ಪಡುತ್ತಿದ್ದಾರೆ. ಮತ್ತೊಂದು ಕಡೆ ೧೪೦ ಶತ ಕೋಟ್ಯಾಧಿಪತಿಗಳು ನಮ್ಮ ದೇಶದಲ್ಲಿದ್ದಾರೆ. ರೈತರ ಹೋರಾಟದಿಂದ ಸ್ಪೂರ್ತಿ ಪಡೆದು ಸರ್ಕಾರದ ಕಾರ್ಪೊರೇಟ್ ಪರ ನೀತಿಗಳನ್ನು ಹಿಂಪಡೆಯುವಂತೆ ಮಾಡಬೇಕಾಗಿದೆ. ಬೆಲೆ ಏರಿಕೆಯನ್ನು ಹಿಂಪಡೆಯದೆ ಇದ್ದರೆ ಈ ಹೋರಾಟವನ್ನು ಮತ್ತ? ಬಲಗೊಳಿಸಲಾಗುವುದು ಎಂದು ಎಚ್ಚರಿಕೆಯನ್ನು ನೀಡಿದರು.
ಕಾಮ್ರೇಡ್ ಗುಂಡಮ್ಮ ಮಡಿವಾಳ ಮಾತನಾಡಿದರು. ಕಾಮ್ರೇಡ್ ರಾಜೇಂದ್ರ ಅತನೂರು ಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಸಿದ್ದು ಚೌಧರಿ, ತುಳಜಾರಾಮ್.ಎನ್. ಕೆ, ರಮೇಶ ದೇವಕರ್, ತಿಮ್ಮಯ್ಯ ಮಾನೆ, ನೀಲಕಂಠ. ಎಮ್. ಹುಲಿ, ಪ್ರವೀಣ, ರಘು ಪವಾರ, ಶ್ರೀನಿವಾಸ, ಆನಂದ, ಮಹಾದೇವಿ ಅತನೂರ, ರಾಧಿಕಾ, ಅಜಯ್, ಕಿರಣ, ಮಹಾದೇವ ಸ್ವಾಮಿ, ಮಲ್ಲಣ್ಣ ಗೌಡ ತೊನಸನಳ್ಳಿ, ಬಸಣ್ಣ ರೆಡ್ಡಿ ತೊನಸನಳ್ಳಿ, ಹೊನ್ನಪ್ಪ ಸೇರಿದಂತೆ ಅನೇಕರು ಇದ್ದರು.
ಇದನ್ನೂ ಓದಿ: ರೆಹಮಾನ್ ಪಟೇಲ್ ಗೆ ಹೈದ್ರಾಬಾದ್ ಆರ್ಟ್ ಸೂಸೈಟಿ ರಾಷ್ಟ್ರೀಯ ಪ್ರಶಸ್ತಿ