ಕೋವಿಡ್ ಮುಂಚೆ ನಿಲ್ಲುತ್ತಿದ್ದ ರೈಲುಗಳನ್ನು ನಿಲ್ಲಿಸಬೇಕೆಂದು ಮನವಿ

1
47

ಶಹಾಬಾದ:ನಗರದ ರೈಲ್ವೆ ನಿಲ್ದಾಣದಲ್ಲಿ ಈ ಮೊದಲು ಓಡಾಡುತ್ತಿದ್ದ, ನಿಲ್ಲುತ್ತಿದ್ದ ರೈಲುಗಳನ್ನು ನಿಲ್ಲಿಸಬೇಕು ಹಾಗೂ ರೇಲ್ವೆ ನಿಲ್ದಾಣದಲ್ಲಿ ಮೂಲ ಸೌಲಭ್ಯಗಳನ್ನು ಒದಗಿಸಬೇಕೆಂದು ಆಗ್ರಹಿಸಿ ಮಂಗಳವಾರ ಶಹಾಬಾದ ಅಭಿವೃದ್ಧಿ ಹೋರಾಟ ಸಮಿತಿಯಿಂದ ರೇಲ್ವೆ ಸಾರ್ವಜನಿಕ ಸೇವಾ ಸಮಿತಿ ತಂಡದವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಇದನ್ನೂ ಓದಿ: ಬೆಂಗಳೂರಿನಲ್ಲಿ ಸೋರುತ್ತಿರುವ ನಲ್ಲಿ ಮತ್ತು ಶವರ್‌ಗಳನ್ನು ಉಚಿತವಾಗಿ ಸರಿಪಡಿಸುವ ಅಭಿಯಾನ

Contact Your\'s Advertisement; 9902492681

ಕೋವಿಡ್-೧೯ ಮುಂಚೆ ನಗರದ ರೇಲ್ವೆ ನಿಲ್ದಾಣ ಓಡಾಡುತ್ತಿದ್ದ ಹಾಗೂ ನಿಲ್ಲುತ್ತಿದ್ದ ಎಲ್ಲಾ ರೇಲ್ವೆಗಳನ್ನು ಮತ್ತೆ ಯಥಾ ರೀತಿ ನಡೆಯಬೇಕು. ದೇಶದಿಂದ ಕೊರೊನಾ ಹೋದರೂ ಕೂಡ ಶಹಾಬಾದ ರೈಲ್ವೆ ನಿಲ್ದಾಣದಲ್ಲಿ ರೈಲು ನಿಲ್ಲುತ್ತಿಲ್ಲ. ಶಹಾಬಾದ ಅಬಿವೃದ್ಧಿ ಹೋರಾಟ ಸಮಿತಿ ವತಿಯಿಂದ ಹಲವಾರು ಬಾರಿ ಮನವಿ ಸಲ್ಲಿಸಿಲಾಗಿದೆ. ೨೪ನೇ ನವೆಂಬರ್ ೨೦೨೧ರಂದು ರೈಲ್ ರೋಕೋ ಮನವಿ ಪತ್ರವನ್ನು ಸಲ್ಲಿಸಲಾಗಿತ್ತು. ಡಿ.ಆರ್.ಎಮ್ ಮತ್ತು ಲೋಕ ಸಭೆಯ ಸದಸ್ಯರಾದ ಡಾ. ಉಮೇಶ್ ಜಾಧವ್ ಮತ್ತು ಶಾಸಕರಾದ ಬಸವರಾಜ ಮತ್ತಿಮೂಡ ರವರ ಮನವಿ ಮೇರೆಗೆ ಹೋರಾಟವನ್ನು ಕೈಬಿಡಲಾಯಿತು.

ಇದನ್ನೂ ಓದಿ: ಕೇಂದ್ರದ ನಿರ್ಲಕ್ಷ್ಯದಿಂದ ಬೆಂಗಳೂರಿನಲ್ಲಿ ನೀರಿಗೆ ಹಾಹಾಕಾರ: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ

ಆದರೆ ಇಲ್ಲಿಯವರೆಗೂ ಯಾವುದೇ ರೈಲು ನಿಲ್ಲುತ್ತಿಲ್ಲ. ಚನೈ ಎಕ್ಸಪ್ರೆಸ್, ಹೈದ್ರಾಬಾದ್ ಮುಂಬೈ ಎಕ್ಸಪ್ರೆಸ್, ನಗರಕೋಯಿಲ್ ಎಕ್ಸಪ್ರೆಸ್ ಕೇವಲ ೪ದಿನ ನಿಲುಗಡೆ ಇದೆ. ಸೋಲಾಪುರ-ರಾಯಚೂರ ಪ್ಯಾಸೆಂಜರ್ ನಲ್ಲಿ ಶೌಚಾಲಯವಂತು ಇಲ್ಲವೆ ಇಲ್ಲ..? ಮಹಿಳೆಯರು, ಸಕ್ಕರೆ ಕಾಯಿಲೆ ಇದ್ದ ಜನ ಸಾಮಾನ್ಯರ ಪಾಡೆನು..? ಯಾವಾಗ ಸಾರ್ವಜನಿಕರಿಗೆ ಸೌಲಭ್ಯಗಳನ್ನು ಒದಗಿಸಲಾಗುತ್ತದೆ ಎಂದು ಕಲಬುರಗಿ ನಗರಕ್ಕೆ ಆಗಮಿಸಿದ ಸಾರ್ವಜನಿಕ ಸೇವಾ ಸಮಿತಿ ರೈಲ್ವೆ ಸದಸ್ಯರಿಗೆ ಶಹಾಬಾದ ಅಭಿವೃದ್ಧಿ ಹೋರಾಟ ಸಮಿತಿಯ ಅಧ್ಯಕ್ಷ ಮಹ್ಮದ್ ಒಬೆದುಲ್ಲಾ ಮತ್ತು ಉಪಾಧ್ಯಕ್ಷ ಲೋಹಿತ್ ಕಟ್ಟಿ ಇವರು ಶಹಾಬಾದ ಜನತೆಯ ಹಲವಾರು ರೈಲ್ವೆ ಸಮಸ್ಯೆ ಗಳನ್ನ ಕಮಿಟಿ ಎದುರು ಸವಿಸ್ತಾರವಾಗಿ ತಂದು ಮನವಿ ಪತ್ರ ಸಲ್ಲಿಸಲಾಯಿತು.

ಇದನ್ನೂ ಓದಿ: ಗುತ್ತಿಗೆ ಪದ್ಧತಿ ಕೈಬಿಟ್ಟು, ಪೌರ ಕಾರ್ಮಿಕರ ಖಾಯಂ ನೇಮಕಾತಿ ಮಾಡಬೇಕು:ಹೆಚ್.ಹನುಮಂತಪ್ಪ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here