ಬೈಕಗೆ ಹಿಟಾಚಿ ಡಿಕ್ಕಿ ಎಫ್.ಐ.ಆರ್ ದಾಖಲಿಸದಿರುವುದಕ್ಕೆ ಆಕ್ರೋಶ

3
99

ಶಹಾಬಾದ: ಕಲಬುರಗಿಯಿಂದ ಶಹಾಬಾದಗೆ ಬೈಕ್ ಮೇಲೆ ಬರುತ್ತಿರುವಾಗ ಮಾರ್ಗ ಮಧ್ಯದ ತರನಳ್ಳಿ ಗ್ರಾಮದ ಕ್ರಾಸ್ ಬಳಿ ಹಿಟಾಚಿಯ ಬಕೆಟ್ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಯುವಕನ ಕಾಲಿಗೆ ಗಂಭೀರ ಗಾಯವಾದರೆ ಮತ್ತೊಬ್ಬ ಯುವಕನ ತಲೆಗೆ ಪೆಟ್ಟಾಗಿದ್ದು ಪ್ರಜ್ಞೆ ಕಳೆದುಕೊಂಡ ಘಟನೆ ಭಾನುವಾರ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.ನಗರ ಪೊಲೀಸ್ ಠಾಣೆಗೆ ತಿಳಿಸದರೂ ಇಲ್ಲಿಯವರೆಗೆ ಪೊಲೀಸರು ಎಫ್.ಐ.ಆರ್ ದಾಖಲಿಸಿಲ್ಲ.ಅಲ್ಲದೇ ಹಿಟಾಚಿಯವರ ಕುರಿತು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಪೋಷಕರು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗಂಭೀರ ಗಾಯಕೊಳಗಾದ ಯುವಕರಾದ ಶಾಂತಕುಮಾರ ತಂದೆ ಬಸವರಾಜ ಇಂಗಳಗಿ, ಮುಸ್ತಫಾ ಇಂಗಳಗಿ.ಈ ಇಬ್ಬರು ಬೈಕ್ ಮೇಲೆ ಕಲಬುರಗಿಯಿಂದ ಬರುವಾಗ ತರನಳ್ಳಿ ಕ್ರಾಸ್ ಬಳಿ ಜಮೀನಲ್ಲಿ ಹಿಟಾಚಿಯಿಂದ ಮಣ್ಣು ಅಗೆಯುತ್ತಿದ್ದ ಸಂದರ್ಭದಲ್ಲಿ ಚಾಲಕ ಹಿಟಾಚಿಯ ಬಕೆಟ್ ಏಕಾಎಕಿ ರಸ್ತೆ ಮೇಲೆ ತಿರುಗಿಸಿದ್ದಾನೆ. ರಸ್ತೆ ಮೇಲೆ ಬರುತ್ತಿದ್ದ ಯುವಕರ ಬೈಕ್‌ಗೆ ಇಟಾಚಿ ಬಕೆಟ್ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬೈಕ್ ನುಜ್ಜುಗುಜ್ಜಾಗಿದೆ.

Contact Your\'s Advertisement; 9902492681

ಇದನ್ನೂ ಓದಿ: ಕೋವಿಡ್ ಮುಂಚೆ ನಿಲ್ಲುತ್ತಿದ್ದ ರೈಲುಗಳನ್ನು ನಿಲ್ಲಿಸಬೇಕೆಂದು ಮನವಿ

ಶಾಂತಕುಮಾರ ತಲೆಯ ಹಿಂದಿನ ಭಾಗಕ್ಕೆ ಬಲವಾಗಿ ಪೆಟ್ಟು ಬಿದ್ದಿದೆ. ಇದರಿಂದ ಯುವಕನ ಒಂದು ದಿನದ ಮೆಮೊರಿ ಲಾಸ್ ಆಗಿದೆ.
ಮುಸ್ತಫಾ ಎಂಬ ಯುವಕನ ಕಾಲು ಮುರಿದಿದೆ. ಇದರಿಂದ ಜಮೀನಿನ ಮಾಲೀಕ ತನ್ನ ಬುಲೆರೋ ವಾಹನದಲ್ಲಿ ಇಬ್ಬರನ್ನು ಶಹಾಬಾದ ಸಮುದಾಯ ಆಸ್ಪತ್ರೆ ಹೊರಗಡೆ ಹಾಕಿ, ಅಲ್ಲಿಂದ ಪರಾರಿ ಆಗಿದ್ದಾನೆ. ನಂತರ ಅರೆ ಪ್ರಜ್ಞೆಯಲ್ಲಿದ್ದ ಯುವಕರು ಪ್ರಾಥಮಿಕ ಚಿಕಿತ್ಸೆ ಪಡೆದು, ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಕುರಿತು ಶಹಾಬಾದ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ ಎಂದು ಸಂಬಂಧಿಕರು ತಿಳಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಸೋರುತ್ತಿರುವ ನಲ್ಲಿ ಮತ್ತು ಶವರ್‌ಗಳನ್ನು ಉಚಿತವಾಗಿ ಸರಿಪಡಿಸುವ ಅಭಿಯಾನ

ಈಗಾಗಲೇ ಗಾಯಕ್ಕೊಳಗಾದ ಯುವಕರು ನಾವೇ ಬಿದ್ದಿದ್ದೆವೆ ಎಂದು ಹೇಳಿದ್ದಾರೆ.ಅದಕ್ಕಾಗಿ ಎಫ್.ಐ.ಆರ್ ದಾಖಲಿಸಿಲ್ಲ.ಹಿಟಾಚಿಯಿಂದ ಅಪಘಾತವಾಗಿದ್ದರೇ ಪೊಲೀಸರಿಗೆ ವಿಚಾರಣೆ ಮಾಡಿ ಕ್ರಮಕೈಗೊಳ್ಳುತ್ತೆನೆ- ಸಂತೋಷ ಹಳ್ಳೂರ್ ಪಿಐ ನಗರ ಪೊಲೀಸ್ ಠಾಣೆ ಶಹಾಬಾದ.
ಸಮುದಾಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವ ಸಂದರ್ಭದಲ್ಲಿ ನಾನೇ ಖುದ್ದಾಗಿ ಹೇಳಿಕೆ ನೀಡಿರುವೆ.ಆದರೂ ಪೊಲೀಸರು ಎಫ್.ಐ.ಆರ್ ದಾಖಲಿಸಿಲ್ಲ.ಹಿಟಾಚಿಯ ಮಾಲೀಕರನ್ನು ಬಚಾವ್ ಮಾಡಲು ಕಸರತ್ತು ನಡೆಸಿದ್ದಾರೆ.ಈಗಾಗಲೇ ಎಸ್‌ಪಿ ಇಶಾ ಪಂತ್ ಅವರಿಗೂ ತಿಳಿಸಿರುವೆ.ಅಲ್ಲದೇ ಪಿಐ ಅವರಿಗೂ ತಿಳಿಸಿದ್ದೆನೆ. ಎಫ್.ಐ.ಆರ್ ದಾಖಲಿಸದಿದ್ದರೇ ನನಗೆ ತಿಳಿಸಿ ಎಂದು ಎಸ್‌ಪಿಯವರು ತಿಳಿಸಿದ್ದಾರೆ- ಸಾಯಿಬಣ್ಣ ಗುಡುಬಾ ಗಾಯಕ್ಕೊಳಗಾದ ಯುವಕನ ಚಿಕ್ಕಪ್ಪ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here