‘ಬಸವ ಸೇವಾ ರತ್ನ’ ಪ್ರಶಸ್ತಿ ಪ್ರದಾನ

0
15

ಕಲಬುರಗಿ: ಆಧುನಿಕ ಯುಗದಲ್ಲಿ ನಮ್ಮೆಲ್ಲರ ಬದುಕು ವ್ಯವಹಾರಿಕವಾಗಿದೆ. ಮಾನವೀಯ ಮೌಲ್ಯಗಳು ಕುಸಿಯುತ್ತಿವೆ. ಕೇವಲ ಹಣ, ಸಂಪತ್ತು ಗಳಿಕೆಯಿಮದ ಮನುಷ್ಯ ನೆಮ್ಮದಿಯ ಬದುಕು ಹುಡುಕುತ್ತಿದ್ದಾನೆ. ಆದರೆ, ಅದು ಹಣದಿಂದ ಸಿಗಲಾರದು. ಹಾಗಾಗಿ ಸಾಮಾಜಿಕ ಚಿಂತನೆಗಳನ್ನು ಅಳವಡಿಸಿಕೊಂಡು ಸಮಾಜಮುಖಿಗಳಾಗಿ ಬಾಳಿದರೆ ಮಾತ್ರ ನಮ್ಮ ಬದುಕು ಪರಿಪೂರ್ಣತೆತೆಯನ್ನು ಪಡೆಯುತ್ತದೆ ಎಂದು ಹಿರಿಯ ನಿವೃತ್ತ ಶಿಕ್ಷಕ-ಚಿಂತಕ ಶರಣಪ್ಪ ದೇಸಾಯಿ ಹಿರೇಜೇವರ್ಗಿ ಅಭಿಪ್ರಾಯಪಟ್ಟರು.

ಉಡಚಣದ ಶ್ರೀ ನಂದಿ ಬಸವೇಶ್ವರ ದೇವಸ್ಥನ ಕಮಿಟಿಯವರು ಕೊಡಮಾಡಿದ ‘ಬಸವ ಸೇವಾ ರತ್ನ’ಪ್ರಶಸ್ತಿಯನ್ನು ಅನಾರೋಗ್ಯದ ಕಾರಣಕ್ಕಾಗಿ ತಮ್ಮ ಗೃಹದಲ್ಲಿ ಸ್ವೀಕರಿಸಿ ಅವರು ಮಾತನಾಡಿದರು.

Contact Your\'s Advertisement; 9902492681

ಇದನ್ನೂ ಓದಿ: ಕಲಬುರಗಿ ಪೇಟೆ ಧಾರಣೆ

ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ,ಸಮಾಜದಲ್ಲಿ ಸೇವಾ ಮನೋಭಾವವನ್ನು ಹೆಚ್ಚು ಮೈಗೂಡಿಸಿಕೊಂಡು ಪ್ರಾಮಾಣಿಕತೆ ಪ್ರದರ್ಶಿಸಿದರೆ ಮನಸ್ಸಿಗೆ ಸಿಗುವ ಆನಂದವೇ ಬೇರೆ ಆಗಿರುತ್ತದೆ. ಈ ನಿಟ್ಟಿನಲ್ಲಿ ಕಳೆದ ಐದು ದಶಕಗಳ ಕಾಲ ತಮ್ಮ ಶಿಕ್ಷಕ ವೃತ್ತಿಯ ಪಾವಿತ್ರ್ಯತೆ ಉಳಿಸಿಕೊಳ್ಳುವುದರ ಜತೆಗೆ ಸಮಾಜದ ವಿವಿಧ ಕ್ಷೇತ್ರಗಳಲ್ಲಿನ ಪ್ರತಿಭೆಗಳಿಗೆ ಪ್ರೋತ್ಸಾಹಿಸುವ ಕಾರ್ಯ ನಿರಂತರವಾಗಿ ಶರಣಪ್ಪ ದೇಸಾಯಿ ಅವರು ಮಾಡುತ್ತಾ ಬರುತ್ತಿದ್ದಾರೆ.  ಹಾಗಾಗಿ ಶರಣಪ್ಪ ದೇಸಾಯಿ ಅವರ ಸಾಮಾಜಿಕ ಕೊಡುಗೆ ಅಪಾರವಾಗಿದೆ ಎಂದರು.

ಹಿರಿಯ ಮುತ್ಸದ್ದಿ ಗುರಣ್ಣಾ ಪಡಶೆಟ್ಟಿ ಉಡಚಣ, ಜಗದೀಶ ದೇಸಾಯಿ, ಶಿವರಾಜ ಅಂಡಗಿ, ಶಿವಾನಂದ ಮಠಪತಿ, ರವೀಂದ್ರಕುಮಾರ ಭಂಟನಳ್ಳಿ, ಜಗದೀಶ ಮರಪಳ್ಳಿ, ರಾಜೇಂದ್ರ ಮಾಡಬೂಳ, ಯಶವಂತರಾಯ ಅಷ್ಠಗಿ, ಶರಣರಾಜ್ ಛಪ್ಪರಬಂದಿ, ಕಲ್ಯಾಣಕುಮಾರ ಶೀಲವಂತ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಇದನ್ನೂ ಓದಿ: 15ಕ್ಕೆ ಕೆರೆ ಚಂದಮ್ಮನಿಗೆ ಶಾಂತವೇರಿ ಗೋಪಾಲಗೌಡ ಪ್ರಶಸ್ತಿ ಪ್ರದಾನ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here