ಕಲಬುರಗಿ: ನಗರದ ಚೇಂಬರ್ ಆಫ್ ಕಾಮರ್ಸ್ ಸಭಾಂಗಣದಲ್ಲಿ ಭಾರತೀಯ ಜನತಾ ಪಾರ್ಟಿ ಮಹಾನಗರ ಜಿಲ್ಲೆ ವತಿಯಿಂದ ಆಯೋಜಿಸಿದ ನಗರ ಜಿಲ್ಲಾ ಕಾರ್ಯಕಾರಿಣಿ ಸಭೆಯನ್ನು ದಕ್ಷಿಣ ಮತಕ್ಷೇತ್ರದ ಶಾಸಕರಾದ ದತ್ತಾತ್ರೇಯ ಪಾಟೀಲ್ ರೇವೂರ್ ಅವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ನಗರ ಜಿಲ್ಲಾ ಅಧ್ಯಕ್ಷರಾದ ಸಿದ್ಧಾಜಿ ಪಾಟೀಲ, ಜಿಲ್ಲಾ ಪ್ರಭಾರಿಗಳಾದ ಜಗನಾಥ ಮಗಿಮಠ, ನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮಹದೇವ ಬೆಳಮಗಿ, ಉಮೇಶ ಪಾಟೀಲ, ಶಿಯೋಗಿ ನಾಗನಹಳ್ಳಿ, ನಗರ ಜಿಲ್ಲಾ ಮಹಿಳಾ ಮೂರ್ಚಾ ಅಧ್ಯಕ್ಷ ಶೋಭಾ ಬಾಗೇವಾಡಿ ಇದ್ದರು.