ಮಕ್ಕಳಿಗೆ ಸರಿಯಾದ ಹಾಕಬೇಕಾಗಿರುವುದು ಶಿಕ್ಷಕರ ಕರ್ತವ್ಯ: ಕರಣಿಕ್

0
10

ಶಹಾಬಾದ: ಕಲಿಕಾ ದೃಷ್ಠಿಯಿಂದ ಹದಿನೈದು ದಿನಗಳ ಮುಂಚಿತವಾಗಿ ಶಾಲೆ ಪ್ರಾರಂಭಿಸಿದ್ದು, ಈ ಅವಧಿಯಲ್ಲಿ ಮಕ್ಕಳಿಗೆ ಸರಿಯಾದ ಅಡಿಪಾಯ ಹಾಕಬೇಕಾಗಿರುವುದು ಶಿಕ್ಷಕರ ಕರ್ತವ್ಯ ಎಂದು ಕ.ರಾ.ಪ್ರಾ.ಶಾ.ಶಿ ಸಂಘದ ತಾಲೂಕಾಧ್ಯಕ್ಷ ಶಿವಪುತ್ರ ಕರಣಿಕ್ ಹೇಳಿದರು.
ಅವರು ಸೋಮವಾರ ನಗರದ ಬಸವೇಶ್ವರ ನಗರದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾದ ಶಾಲಾ ಪ್ರಾರಂಭೋತ್ಸವ ಹಾಗೂ ಕಲಿಕಾ ಚೇತರಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕೊರೊನಾ ಸೋಂಕಿನ ನಾಲ್ಕನೇ ಅಲೆಯ ಭೀತಿಯ ನಡುವೆ ರಾಜ್ಯಾದ್ಯಂತ ಶಾಲೆಗಳು ಇಂದಿನಿಂದ ಆರಂಭವಾಗಿವೆ. ಬಿಸಿಲಿನ ತಾಪಮಾನದಿಂದಾಗಿ ಶಾಲೆಗಳ ಪುನರಾರಂಭ ಮುಂದೂಡುವಂತೆ ಸಾಕ? ಒತ್ತಡಗಳು ಬಂದಿದ್ದರೂ ಕಲಿಕಾ ದೃಷ್ಟಿಯಿಂದ ಬೇಸಿಗೆ ರಜೆಯನ್ನು ಮೊಟಕುಗೊಳಿಸಿ ಇಂದಿನಿಂದ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಶೈಕ್ಷಣಿಕ ವ? ಆರಂಭವಾಗಿವೆ.ಮಕ್ಕಳು ಇದರ ಸದುಪಯೋಗಪಡಿಸಿಕೊಳ್ಳಬೇಕು ಹಾಗೂ ಶಿಕ್ಷಕರ ಮಕ್ಕಳು ಕಲಿಕೆ ದೃಷ್ಟಿಯಿಂದ ಹೆಚ್ಚು ಹೆಚ್ಚು ಕಲಿಸಬೇಕೆಂದು ಹೇಳಿದರು.

Contact Your\'s Advertisement; 9902492681

ಇದನ್ನೂ ಓದಿ: ‘ಬುದ್ಧ ಪೂರ್ಣಿಮೆ ದಿನದಂದು ಕಾವ್ಯ ಪೂರ್ಣಿಮೆ’

ಶಿಕ್ಷಣ ಸಂಯೋಜಕ ಶ್ರೀಧರ್ ಮಾತನಾಡಿ, ಮಕ್ಕಳು ಬೇಸಿಗೆ ರಜೆಯ ಮಜಾ ಸವಿದು ಅತ್ಯಂತ ಹುರುಪು, ಉತ್ಸಾಹದಿಂದ ಚಿಣ್ಣರು ಶಾಲೆಗಳತ್ತ ಹೆಜ್ಜೆ ಹಾಕಿದ್ದಾರೆ.ಕೊರೊನಾ ಮಹಾಮಾರಿಯಿಂದ ಕಳೆದು ಎರಡು ವ?ಗಳಿಂದ ಮಕ್ಕಳ ಶೈಕ್ಷಣಿಕ ಚಟುವಟಿಕೆಗಳಿಗೆ ತೀವ್ರ ಅಡ್ಡಿಯುಂಟಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರಸಕ್ತ ಸಾಲಿನ ಶೈಕ್ಷಣಿಕ ವ? ವನ್ನು ಈ ಬಾರಿ ಸಮಯಕ್ಕೆ ಸರಿಯಾಗಿ ಆರಂಭಿಸಿದ್ದು, ಅಕ್ಷರ ದೇಗುಲಗಳಲ್ಲಿ ೧೫ ದಿನಗಳ ಮುಂಚಿತವಾಗಿ ಶಾಲೆಗಳನ್ನು ಆರಂಭಿಸಲು ಶೈಕ್ಷಣಿಕ ಇಲಾಖೆ ನಿರ್ಧಾರ ಸ್ವಾಗತಾರ್ಹ.ಈ ೧೫ ದಿನಗಳ ಅವಧಿಯಲ್ಲಿ ಮಕ್ಕಳ ಕಲಿಕಾ ಚೇತರಿಕೆ ಕಾರ್ಯಕ್ರಮ ಮುಂದಿನ ತಿಂಗಳಿನಿಂದ ಪಾಠಪ್ರವಚನಗಳಿಗೆ ಚಾಲನೆ ದೊರೆಯಲಿದೆ ಎಂದರು.

ಸಿಆರ್‌ಪಿ ಸತ್ಯನಾರಾಯಣ ಮಾತನಾಡಿ, ಮಕ್ಕಳ ಸ್ವಾಗತಿಸಲು ಶಾಲೆಗಳ ಆವರಣವನ್ನು ತಳಿರುತೋರಣಗಳಿಂದ, ಬಣ್ಣ ಬಣ್ಣದ ಹೂವುಗಳಿಂದ ಸಿಂಗರಿಸಲಾಗಿತ್ತು. ಮಕ್ಕಳಿಗೆ ಇ?ವಾದ ಚಾಕೊಲೇಟ್ ಸಿಹಿ ತಿಂಡಿ ನೀಡಿ, ಆತ್ಮೀಯವಾಗಿ ಬರಮಾಡಿಕೊಂಡಿರುವ ಹಾಗೇ ಮಕ್ಕಳಿಗೆ ಶಿಕ್ಷಕರು ಉತ್ಸಾಹದಿಂದ ಕಲಿಕೆಯಲ್ಲಿ ತೊಡಗುವಂತೆ ಮಾಡಬೇಕೆಂದು ಹೇಳಿದರು.

ಇದನ್ನೂ ಓದಿ: ರಾಜು ವಾಡೇಕರ್ ಗೆ ವಿಧಾನ ಪರಿಷತ್ತಿಗೆ ನಾಮನಿರ್ದೇಶನ ಮಾಡುವಂತೆ ಕಟೀಲಗೆ ಮನವಿ

ಇದೇ ಸಂದರ್ಭದಲ್ಲಿ ಹೊನಗುಂಟಾ ಸಿಆರ್‌ಪಿ ಶರಣಬಸಪ್ಪ ಪಾಟೀಲ, ಶಾಲೆಯ ಶಿಕ್ಷಕ ವರ್ಗದವರು, ಮಕ್ಕಳು, ಪೋಷಕರು ಹಾಗೂ ಎಸ್‌ಡಿಎಂಸಿ ಸದಸ್ಯರು ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here