ಕಲಬುರಗಿ : ಕನಾಟಕ ರಾಜ್ಯ ಬರಹಗಾರರ ಬಳಗ ಜಿಲ್ಲಾ ಗಟಕ ಕಲಬುರಗಿ ಆಶ್ರಯದಲ್ಲಿ ರವಿವಾರ ನಡೆದ ಆನ್ ಲೈನ್ ಕವಿಗೋಷ್ಠಿ ಸ್ಪರ್ಧೆಯ ಫಲಿತಾಂಶ ಪ್ರಕಟಿಸಲಾಗಿದೆ.
ಬಳಗದ ಜಿಲ್ಲಾ ಅಧ್ಯಕ್ಷ ಮಹಾಂತೇಶ ಪಾಟೀಲ ಅವರ ಅಧ್ಯಕ್ಷತೆಯಲ್ಲಿ ನಡೆದ ೭೭ನೇ ಕವಿಗೋಷ್ಠಿ ಸ್ಪರ್ಧೆಯಲ್ಲಿ ಮುಂಗಾರು ಮಳೆ ವಿಷಯವಾಗಿ ಹಲವಾರು ಕವಿಗಳು ಭಾಗವಹಿಸಿ ಸ್ವರಚಿತ ಕವನ ರಚಿಸಿದ್ದಾರೆ. ಸಾಹಿತಿ ಧರ್ಮಣ್ಣ ಎಚ್ ಧನ್ನಿ ಅವರು ತೀರ್ಫುಗಾರರಾಗಿದ್ದರು.
ಪ್ರಥಮ : ಭಾರತಿ ಗುತ್ತೇದಾರ, ದ್ವಿತೀಯ ; ರತ್ನಾ ಎಂ ಅಂಗಡಿ, ತೃತೀಯ : ಕವಿತಾ ಪಿ ಮೋರಾ ಹಾಗೂ ಶಿವಪುತ್ರ ಹಾಗರಗಿ ಮತ್ತು ಅನುಸೂಯಾ ನಾಗನಳ್ಳಿ ಅವರ ಕವನಗಳು ಮೆಚ್ಚುಗೆ ಪಡೆದವು. ಮುಂಗಾರು ಮಳೆಯ ನಿರೀಕ್ಷೆಯಲ್ಲಿರುವ ರೈತರಿಗೆ ಖುಷಿಯ ಸಂಭ್ರಮ ಕಳೆ ಕಟ್ಟುತ್ತದೆ. ಈ ನಿಟ್ಟಿನಲ್ಲಿ ಬಳಗದ ಕವಿಗಳು ತಮ್ಮದೇ ಸೊಬಗಿನಲ್ಲಿ ಮುಂಗಾರು ಮಳೆಯ ಕವನಗಳನ್ನು ರಚಿಸಿ ಕವಿಗೋಷ್ಠಿಗೆ ಕಳೆ ತಂದರು