ಕಲಬುರಗಿ: ನಗರದ ಚುನ್ನಾ ಭಟ್ಟಿಯ ಫಿರದೋಸ್ ಕಾಲೋನಿಯ ಎರಡು ವರ್ಷದ ಮಗು ಮುಜಮ್ಮಿಲ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಅಪ್ರಪ್ತ ಬಾಲಕ ಸೇರಿದಂತೆ ಐವರು ಆರೋಪಿಗಳನ್ನು ಸೋಮವಾರ ವಿಶ್ವ ವಿದ್ಯಾಲಯದ ಪೊಲೀಸರು ಬಂಧಿಸಿದ್ದಾರೆ.
ಫಿರದೋಸ್ ಕಾಲೋನಿಯ ನಿವಾಸಿ ನವಾಜ್ ಕೊಲೆ ಮಾಡಿರುವ ಪ್ರಮುಖ ಆರೋಪಿ, ಇತನ್ನೊಂದಿಗೆ ಸಾಥ್ ನೀಡಿದ ಚಿಕನ್ ಶಾಪ್ ನಲ್ಲಿ ಕೆಲಸ ಮಾಡುತ್ತಿದ್ದ ಸದ್ದಾಮ್, ಅನಿಸ್ ಸೊಹೆಲ್, ಜಹಿರೊದ್ಧೀನ್ ಹಾಗೂ ಅಪ್ರಪ್ತ ಬಾಲಕ ಒರ್ವನನ್ನು ಎಸಿಪಿ ಇನಾಮ್ದಾರ್ ಅವರ ಮಾರ್ಗದರ್ಶನದಲ್ಲಿ ರಚಿಸಿದ ವಿಶೇಷ ತನಿಖಾದಳದ ತನಿಖಾಧಿಕಾರಿ ಅರುಣ್ ಮುರಗನ್ ನೇತೃತ್ವದಲ್ಲಿ ಆರೋಪಿಗಳೆಲ್ಲರನ್ನು ಬಂಧಿಸಿ ನ್ಯಾಯಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಪ್ರಕರಣದ ಹಿನ್ನೆಲೆ: ಕೊಲೆಯಾದ ಮುಜಮ್ಮಿಲ್ ತಂದೆ ಪ್ರಮುಖ ಆರೋಪಿ ಕಿರಾಣಿ ಅಂಗಡಿಯಲ್ಲಿ ಶಾಲದ ರೂಪದಲ್ಲಿ ಸಾಮಗ್ರಿ ಪಡೆದು ನಂತರ ಹಣ ಪಾವತಿ ಮಾಡುತ್ತಿದರು, ಈ ಕುರಿತು ಇಬ್ಬರ ನಡುವೆ ವಾಗ್ವಾದ ಉಂಟಾಗಿದ ಪರಿಣಮ ಇದರ ಸೇಡು ತೀರಿಸಿಕೊಳ್ಳಲು ನವಾಜ್ ಮತ್ತು ಅವನ ಸಹಚರರು ಡಿಸೆಂಬರ್ 7 ರಂದು ಎರಡು ವರ್ಷದ ಮಗುವಾಗಿರುವ ಮುಜಮ್ಮಿಲ್ ನನ್ನು ಅಪಹರಿಸಿ ರಾತ್ರಿಯಡಿ ಹಿಂಸೆ ನೀಡಿ ನಂತರ ಕಟ್ಟಡ ನಿರ್ಮಾಣಕ್ಕೆ ತಂದಿರುವ ಮರಳಲ್ಲಿ ಮಗುವಿನ ಮೃತದೇಹವನ್ನು ಹುತಿಟ್ಟಿದರು.
ಕಳೆದ ತಲೆ ಮರಿಸಿಕೊಂಡ ಆರೋಪಿಗಳ ಶೋಧ ಕಾರ್ಯಚರಣೆ ನಡೆದಿತ್ತು. ಐದು ತಿಂಗಳಿಂದ ಮುಂಬೈಯಲ್ಲಿ ಇದಿದ ಆರೋಪಿಗಳು ಪ್ರಕರಣ ತಣ್ಣಗಾಗಿರುವುದನ್ನು ತಿಳಿದು ಕೆಲವು ದಿನಗಳ ಹಿಂದೆ ಮರಳಿ ಮನೆಗೆ ಬಂದಿದ್ದಾರೆ. ಕೊಲೆ ಪ್ರಕರಣದ ತನಿಖೆಗೆ ಒತ್ತಾಯಿಸಿ ನಗರದಲ್ಲಿ ಪ್ರತಿಭಟನೆ, ಧರಣಿ ಸತ್ಯಗ್ರಹ ನಡೆಯುತಿರುವುದರಿಂದ ತನಿಖೆ ಚುರುಕುಗೊಳಿಸಲಾಗಿತ್ತು ಎಂದು ಡಿ.ಸಿ.ಪಿ ಅಡ್ಡೂರು ಶ್ರೀನಿವಾಸಲು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.