ಅಂಗನವಾಡಿ ಕಾರ್ಯಕರ್ತರ ತರಬೇತಿ

0
62

ಕಲಬುರಗಿ: ತಾಲ್ಲೂಕಿನ ತಿಳಗೂಳ ಗ್ರಾಮದ ಅಂಗನವಾಡಿ ಕೇಂದ್ರ-೨ರಲ್ಲಿ ಶಾಲಾ ಪೂರ್ವ ಶಿಕ್ಷಣ ಬಲವರ್ಧನೆ ಯೋಜನೆಯಲ್ಲಿ ಕಲ್ಯಾಣ ಕರ್ನಾಟಕ ಪ್ರಾದೇಶಿಕ ಅಭಿವೃದ್ದಿ ಮಂಡಳಿ, ಮೈಕ್ರೋ ಯೋಜನೆ ಹಾಗೂ ಇಂಡಿಯಾ ಲೀಟರಸಿ ಪ್ರಾಜೆಕ್ಟ್ ಇವರ ಸಹಯೋಗದೊಂದಿಗೆ ನಡೆದ ಅಂಗನವಾಡಿ ಕಾರ್ಯಕರ್ತರ ನಾಲ್ಕು ದಿನದ ತರಬೇತಿ ಮಕ್ಕಳಿಗೆ ಗಣಿತ ಚಟುವಟಿಕೆಗಳು ಕಾರ್ಯಕ್ರಮದಲ್ಲಿ ಮಕ್ಕಳ ಬೌದ್ಧಿಕ ಮಟ್ಟ ಹೆಚ್ಚಿಸುವಲ್ಲಿ ಅಂಗನವಾಡಿ ಕಾರ್ಯಕರ್ತರು ಸಫಲವಾಗಿದ್ದಾರೆ.

ಮಕ್ಕಳ ಬೆಳವಣಿಗೆಯಲ್ಲಿ ಅಂಗನವಾಡಿ ಕಾರ್ಯಕರ್ತರ ಬೋದನಾಕಾರ್ಯ ಮಕ್ಕಳಿಗೆ ಅತಿ ಮುಖ್ಯವಾದದ್ದು ಎಂದು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಗುರುಬಸಪ್ಪ ಸಜ್ಜನಶೆಟ್ಟಿ ಹೇಳಿದರು. ಗ್ರಾ.ಪಂ. ಸದಸ್ಯ ವಿಶ್ವನಾಥ ಪಾಟೀಲ ಸಾಹು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಅಜೀಂ ಪ್ರೇಮಜಿ ಫೌಂಡೇಶನ ಸಮೂಹ ಸಂಪನ್ಮೂಲ ಅಧಿಕಾರಿಯಾದ ರವಿಚಂದ್ರನ್ ಮಕ್ಕಳಿಗೆ ಗಣಿತ ಕುರಿತು ಹೇಗೆ ಬೋಧನೆ ಮಾಡಬೇಕೆಂದು ತಿಳಿಸಿದರು.

Contact Your\'s Advertisement; 9902492681

ಗೀತಾ ಚವ್ಹಾಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಹೊನ್ನ ಕಿರಣಗಿ ವಲಯದ ಮಹಿಳಾ ಮೇಲ್ವಿಚಾರಕಿ ಇಂದಿರಾ ಸುನೀಲ ಸರೋದೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹೊನ್ನ ಕಿರಣಗಿ ವಲಯದ ೩೦ ಅಂಗನವಾಡಿ ಕೇಂದ್ರ ಕಾರ್ಯಕರ್ತರು ಈ ತರಬೇತಿಯಲ್ಲಿ ಭಾಗವಹಿಸಿದ್ದರು. ಸಂಗೀತಾ ಎಸ್ ಪಾಟೀಲ್ ನಿರೂಪಿಸಿದರು. ನಾಗಮ್ಮ ಸಿ ಕಾಡಾದಿ ಸ್ವಾಗತಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here