ಕಲಬುರಗಿ: ಇತ್ತೀಚೆಗೆ ಕೇಂದ್ರ ಸರ್ಕಾರವು ಪೆಟ್ರೋಲ್-ಡಿಸೇಲ್ ಮೇಲಿನ ತೆರಿಗೆಯನ್ನು ಕಡಿಮೆ ಮಾಡಿರುವುದಾಗಿ ಘೋಷಿಸಿದ್ದು ಸಂತೋಷ. ಆದರೆ ಕಳೆದ ಹಲವು ವರ್ಷಗಳಲ್ಲಿ ಅಸಾಧಾರಣ ಹೋಲಿಕೆಗೆ ಹೋಲಿಸಿದರೆ ಕಡಿತ ಅತ್ಯಲ್ಪ. ಪೆಟ್ರೋಲ್-ಡೆಇಸೇಲ್ ಹಾಗೂ ಎಲ್.ಪಿ.ಜಿ ಸಿಲೆಂಡರ್ ಅಸಲಿ ಬೆಲೆಯಲ್ಲಿ ದೊರೆಯಲಿ ಎಂದು ಎಸ್‌ಯುಸಿಐ (ಕಮ್ಯೂನಿಸ್ಟ್) ಜಿಲ್ಲಾ ಸಮಿತಿ ಆಗ್ರಹಿಸಿದೆ.
ಈ ಕುರಿತು ಎಸ್.ಯು.ಸಿ.ಐ (ಸಿ) ಜಿಲ್ಲಾ ಕಾರ್ಯದರ್ಶಿ ಎಚ್.ವಿ. ದಿವಾಕರ ಪತ್ರಿಕಾ ಹೇಳಿಕೆ ನೀಡಿ ಇದು ಸರ್ಕಾರದ ಮುಖ ಮರೆಸಿಕೊಳ್ಳುವ ಯತ್ನವಲ್ಲದೆ ಬೇರೇನೂ ಅಲ್ಲ. ಇಂಧನದ ಮೇಲಿನ ಎಲ್ಲಾ ತೆರಿಗೆಗಳು ಮತ್ತು ಸೆಸ್ ಅನ್ನು ಹಿಂಪಡೆಯುವುದರ ಜೊತೆಗೆ, ನಿಯತಕಾಲಿಕವಾಗಿ ಏರಿಕೆಯಾಗುತ್ತಿರುವ ಅಂತಾರಾಷ್ಟ್ರೀಯ ಕಚ್ಚಾ ತೈಲದ ಬೆಲೆ ಏರಿಕೆಯ ವಿರುದ್ಧವೂ ಸಹ ವಿಶ್ವ ಸಾರ್ವಜನಿಕ ಅಭಿಪ್ರಾಯವನ್ನು ಬೆಳೆಸುವ ಪ್ರಯತ್ನವನ್ನು ಭಾರತ ಸರ್ಕಾರ ಮಾಡಬೇಕು ಎಂದು ತಿಳಿಸಿದ್ದಾರೆ.