ಆಳಂದ: ತಾಲೂಕಿನ ಜವಳಿ(ಡಿ) ಗ್ರಾಮದಲ್ಲಿ ೫೦ ಲಕ್ಷ. ರೂ ವೆಚ್ಚದ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಶಾಸಕ ಸುಭಾಷ್ ಆರ್ ಗುದ್ದಲಿ ಪೂಜೆ ನೇರವೇರಿಸಿ ಚಾಲನೆ ನೀಡಿದರು.
ಗುರುವಾರ ಆಳಂದ ತಾಲೂಕಿನ ಜವಳಿ(ಡಿ) ಗ್ರಾಮದಲ್ಲಿ ೨೦೨೦-೨೧ನೆ ಸಾಲಿನ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಮ್ಯಾಕ್ರೋ ಯೋಜನೆಯಡಿ ಮಂಜೂರಾದ ರೂ. ೫೦.೦೦ ಲಕ್ಷಗಳ ಸಿ.ಸಿ ರಸ್ತೆ ನಿರ್ಮಾಣ ಕಾಮಗಾರಿಯ ಭೂಮಿ ಪೂಜೆಯನ್ನು ಶಾಸಕ ಸುಭಾ? ಆರ್ ಗುತ್ತೇದಾರ ನೆರವೇರಿಸಿದರು.
ನಂತರ ಮಾತನಾಡಿದ ಅವರು, ಬಹಳ ಜನರ ನಂಬಿಕೆಯ ಆಧ್ಯಾತ್ಮ ಕೇಂದ್ರಗಳಾದ ಮಠ, ಮಂದಿರ, ಗುಡಿ ಮತ್ತು ಗುಂಡಾರಗಳಿಗೆ ಮತಕ್ಷೇತ್ರದ ಇತಿಹಾಸದಲ್ಲಿಯೇ ಐತಿಹಾಸಿಕ ಎನ್ನುವಂತೆ ೩೦ ಕೋಟಿ ರೂ. ಅನುದಾನ ನೀಡಿ ದೇವಸ್ಥಾನಗಳ ಹಾಗೂ ಮಠ ಮಾನ್ಯಗಳ ಅಭಿವೃದ್ಧಿ ಕಾರ್ಯಕ್ಕೆ ಒತ್ತು ನೀಡಲಾಗಿದೆ. ಈ ಮಠ ಮಾನ್ಯಗಳು ಸಮಾಜದ ಸರ್ವರ ಶಾಂತಿಯ ತೋಟಗಳಾಗಿವೆ.
ಈ ಸಂದರ್ಭದಲ್ಲಿ ಮುಖಂಡರಾದ ರಾಜಶೇಖರ ಮಲಶೆಟ್ಟಿ, ಶರಣಬಸಪ್ಪ ಪಾಟೀಲ, ಶೇಖರ ಸಾಹು, ಆನಂದ ಪಾಟೀಲ, ವೀರೇಶ, ಬಸಲಿಂಗಯ್ಯ ಸ್ವಾಮಿ, ಲೋಕೋಪಯೋಗಿ ಇಲಾಖೆಯ ಕಿರಿಯ ಅಭಿಯಂತರರಾದ ಅರುಣಕುಮಾರ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.