ನಡೆ-ನುಡಿಗಳಲ್ಲಿ ಎಚ್ಚರವಾಗಿರುವವನೆ ಶರಣ: ಡಾ. ಈಶ್ವರ ಮಂಟೂರ

0
216

ಕಲಬುರಗಿ: ವಚನಗಳನ್ನು ಕೇವಲ ಪಠಿಸಿದರೆ ಸಾಲದು. ಅವುಗಳನ್ನು ಅನುಷ್ಠಾನಕ್ಕೆ ತರಬೇಕು ಎಂದು ಯುಎಸ್ಎ ಬಸವ ಸಂಘಟನೆಗಳ ಅಧ್ಯಕ್ಷ ಶ್ರೀಶೈಲ ಹಾದಿಮನಿ ಹೇಳಿದರು.

ನಗರದ ಬಸವೇಶ್ವರ ವೃತ್ತದ ಬಳಿ ಇರುವ ಬಸವ ಸಾಂಸ್ಕೃತಿಕ ಮಂಟಪದಲ್ಲಿ ಬಸವ ಸೇವಾ ಪ್ರತಿಷ್ಠಾನ, ನೀಲಮ್ಮನ ಬಳಗ ಇಂದು ಸಂಜೆ ಹಮ್ಮಿಕೊಂಡ 51ನೇ ಬಸವ ಜ್ಯೋತಿ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿ ಗಳಾಗಿ ಆಗಮಿಸಿ ಮಾತನಾಡಿದರು.

Contact Your\'s Advertisement; 9902492681

ಶರಣ: ಅನುಭಾವ ಚಿಂತನ ವಿಷಯ ಕುರಿತು ಮದರಖಂಡಿ- ಹುನ್ನೂರ ಬಸವ ಗುರುಕುಲದ ಡಾ. ಈಶ್ವರ ಮಂಟೂರ ಮಾತನಾಡಿ, ಬಸವ ಜ್ಯೋತಿ ಒಮ್ಮೆ ಹತ್ತಿದರೆ ಅದು ಆರುವುದಿಲ್ಲ. ಆಷಾಡದ ಗಾಳಿಯಲ್ಲಿ ಆರದ ದೀಪ ಹಚ್ಷಿದವರು ಬಸವಣ್ಣನವರು ಎಂದು ತಿಳಿಸಿದರು.

ಸಾಯದ ಮುನ್ನ ತನ್ನನ್ನು ತಾ ಅರಿತುಕೊಂಡವ ಶರಣ. ಇದ್ದುದರಲ್ಲಿಯೇ ತೃಪ್ತನಾಗಿ ಇರಬಲ್ಲವನೇ ಶರಣ. ಇರದುದನ್ನು ಬಿಟ್ಟು ಇರುವ ಕಡೆ ಸಾಗುವವನೇ ಶರಣ. ನಡೆ-ನುಡಿಗಳಲ್ಲಿ ಎಚ್ಚರವಾಗಿರುವವನೇ ಶರಣ.
ಕಲ್ಪವೃಕ್ಷದ ರಾಶಿ ಶರಣನ ಹಸ್ತವಿರಬೇಕು, ಪಾರಮಾರ್ಥದ ಅನುಭಾವ ಪಡೆದಿರುವನೆ ಶರಣ ಎಂದು ತಿಳಿಸಿದರು.

ಬಸವ ಸೇವಾ ಪ್ರತಿಷ್ಠಾನ ಹಾಗೂ ಲಿಂಗಾಯತ ಮಹಾ ಮಠದ ಅಕ್ಕ ಅನ್ನಪೂರ್ಣ ತಾಯಿ ಸಾನ್ನಿಧ್ಯ ವಹಿಸಿದ್ದರು.
ಬಸವರಾಜ ನಾಗೂರ, ವಿಶ್ವನಾಥ ಮಂಗಲಗಿ, ವಿಜಯಕುಮಾರ ತೇಗಲತಿಪ್ಪಿ ವೇದಿಕೆಯಲ್ಲಿದ್ದರು.

ಸಿದ್ರಾಮಪ್ಪ ಧುಲಂಗೆ ಅವರನ್ನು ಸನ್ಮಾನಿಸಲಾಯಿತು. ದಾಸೋಹಸೇವೆಗೈದ ವಿಶ್ವನಾಥ ಮಲಕೂಡ ದಂಪತಿ, ಅರ್ಜುನ ಎಸ್. ಖಂಡೋಜಿ ಅವರನ್ನು ಕೂಡ ಸನ್ಮಾನಿಸಲಾಯಿತು.

ಬಸವ ಸೇವಾ ಪ್ರತಿಷ್ಠಾನ ಕಲಬುರಗಿ ಘಟಕದ ಅದ್ಯಕ್ಷ ರಾಜಶೇಖರ ಯಂಕಂಚಿ, ಶರಣ ಬಸವ ಕಲ್ಲಾ, ಸಂತೋಷ ಹೂಗಾರ, ರವೀಂದ್ರ ಶಾಬಾದಿ, ಸತೀಶ ಸಜ್ಜನ್, ಬಿ.ಎಂ. ಪಾಟೀಲ ಕಲ್ಲೂರ, ಶರಣಬಸವ ಮಂಗಲಗಿ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here