ಹತ್ಯೆಗೀಡಾದ ಯುವಕನ ಮನೆಗೆ ಪ್ರಿಯಾಂಕ್ ಖರ್ಗೆ ಭೇಟಿ, ತಾಯಿಗೆ ಸಾಂತ್ವಾನ

0
53

ಕಲಬುರಗಿ: ಮೊನ್ನೆ ಹತ್ಯೆಗೀಡಾದ ವಾಡಿ ಪಟ್ಟಣದ ಭೀಮನಗರ ನಿವಾಸಿ ವಿಜಯ್ ಕಾಂಬಳೆ ( 25) ಅವರ ನಿವಾಸಕ್ಕೆ ಶಾಸಕರಾದ ಪ್ರಿಯಾಂಕ್ ಖರ್ಗೆ ಇಂದು ಭೇಟಿ ನೀಡಿ ಕುಟುಂಬ ವರ್ಗದವರಿಗೆ ಸಾಂತ್ವನ ಹೇಳಿದರು.

ಸಮಾಜ ಕಲ್ಯಾಣ ಇಲಾಖೆಯಿಂದ ನಿನ್ನೆ ರೂ‌ 4 ಲಕ್ಷ ಪರಿಹಾರ ನೀಡಲಾಗಿದೆ. ಹತ್ಯೆಗೀಡಾದ ಯುವಕ ತನ್ನ ಕುಟುಂಬಕ್ಕೆ ದುಡಿಯುವ ಏಕೈಕ ವ್ಯಕ್ತಿಯಾಗಿದ್ದು ಇಬ್ಬರು ಸಹೋದರಿಯರ ಹಾಗೂ ತಾಯಿಯ ಜವಾಬ್ದಾರಿ ಹೊತ್ತಿದ್ದು ಆತನ ಹತ್ಯೆಯಿಂದಾಗಿ ಇಡೀ ಕುಟುಂಬ ಶಾಕ್ ಗೆ ಒಳಗಾಗಿದೆ ಎಂದು ಸ್ಥಳೀಯರು ಶಾಸಕರ ಗಮನಕ್ಕೆ ತಂದರು.

Contact Your\'s Advertisement; 9902492681

ಕಾಂಬಳೆ ಅವರ ತಾಯಿಗೆ ಸಮಾಧಾನಪಡಿಸಿದ ಶಾಸಕರು ಈ ಘಟನೆ ನಡೆಯಬಾರದಾಗಿತ್ತು. ಇದರಿಂದ ತಮಗೂ ಕೂಡಾ ನೋವಾಗಿದೆ. ಹತ್ಯೆಗೆ ಕಾರಣರಾದವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರಿಗೆ ಭರವಸೆ ನೀಡಿದರು.

ಕುಟುಂಬ ವರ್ಗದವರಿಗೆ ವಾಸಿಸಲು ಮನೆ ಇಲ್ಲದ್ದನ್ನು ಸ್ಥಳೀಯರು ಶಾಸಕರ ಗಮನಕ್ಕೆ ತಂದಾಗ ಈ ಕುರಿತು, ವಾಡಿ ನಗರಸಭೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಮನೆ ಮಂಜೂರು ಮಾಡಿಸುವುದಾಗಿ ಹೇಳಿದರು.

ನಂತರ ರಾಷ್ಟ್ರೀಯ ಚಾನೆಲ್ ವರದಿಗಾರರೊಂದಿಗೆ ಮಾತನಾಡಿದ ಶಾಸಕರು ” ಈ ಘಟನೆ ನಡೆಯಬಾರದಿತ್ತು‌ ನಮಗೂ ಕೂಡಾ ನೋವಿದೆ. ಇಲ್ಲಿ ಎಲ್ಲ ಜಾತಿಯ ಧರ್ಮದ‌ ಜನರು ಒಂದಾಗಿ‌ ಬಾಳುತ್ತಿದ್ದಾರೆ ಹಾಗೂ ಘಟನೆ ಕುರಿತಂತೆ ಶೋಕಿತರಾಗಿದ್ದಾರೆ. ಹಾಗಾಗಿ ಘಟನೆಯನ್ನು ಜಾತಿ ಅಥವಾ ಮತೀಯ ಬಣ್ಣ ಬಳಿಯುವುದು ಬೇಡ. ಇಲ್ಲಿ ಯಾರನ್ನೂ ರಕ್ಷಿಸಲಾಗುವುದಿಲ್ಲ. ಘಟನೆಗೆ ಕಾರಣರಾದವರನ್ನು ಈಗಾಗಲೇ ಬಂಧಿಸಲಾಗಿದ್ದು ಕಾನೂನು ಪ್ರಕಾರ ಶಿಕ್ಷಿಸಲಾಗುವುದು” ಎಂದರು.

ಹತ್ಯೆಯ ಹಿನ್ನೆಲೆಯಲ್ಲಿ ಬಿಜೆಪಿಯವರು ದಲಿತರ ಮೇಲೆ ದೌರ್ಜನ್ಯ ಹೆಚ್ಚುತ್ತಿದೆ ಎಂದು ಹೇಳಿದ್ದಾರಲ್ಲ ಎಂದು ಕೇಳಿದಾಗ ಉತ್ತರಿಸಿದ ಶಾಸಕರು ದಲಿತರ ಮೇಲೆ ದೌರ್ಜನ್ಯ ನಡೆದಾಗೆಲ್ಲ ಬಿಜೆಪಿ ಸರ್ಕಾರ ಏನು ಕ್ರಮ ಕೈಗೊಂಡಿದೆ. ಕಾನೂನು ಸುವ್ಯವಸ್ಥೆ ಯಾರ ಕೈಯಲ್ಲಿದೆ? ರಾಜ್ಯ ಹಾಗೂ ಕೇಂದ್ರದ ಕೈಯಲ್ಲಿ ಇದೆ ಇದನ್ನು ಅವರಿಗೆ ಕೇಳಬೇಕು ಎಂದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here