ವಿಕಲಚೇತನರ ಮನೆ ಬಾಗಿಲಿಗೆ ಯು.ಡಿ.ಐ.ಡಿ ಕಾರ್ಡ್: ಇಲಾಖೆಯಿಂದ ವಿನೂತನ ಕಾರ್ಯಕ್ರಮ

0
125

ಕಲಬುರಗಿ: ಸರ್ಕಾರದ ಯೋಜನೆಗಳು ಹಾಗೂ ಸೌಲಭ್ಯಗಳು ಅರ್ಹ ವಿಶೇಷಚೇತನರಿಗೆ ಸಿಗಬೇಕೆಂಬ ಉದ್ದೇಶದಿಂದ ಯುಡಿಐಡಿ (ವಿಶೇಷ ಗುರುತಿನ ಚೀಟಿ) ಯನ್ನು ನೀಡಲಾಗುತ್ತಿದೆ. ಜಿಲ್ಲೆಯ ವಿಕಲಚೇತನರ ಮನೆ ಬಾಗಿಲಿಗೆ ಯು.ಡಿ.ಐ.ಡಿ. ಕಾರ್ಡ್‌ನ್ನು ತಲುಪಿಸುವ ವಿನೂತನ ಕಾರ್ಯಕ್ರಮವನ್ನು ಜಿಲ್ಲಾ ಅಂಗವಿಕಲರ ಕಲ್ಯಾಣ ಇಲಾಖೆಯಿಂದ ಹಮ್ಮಿಕೊಳ್ಳಲಾಗಿದೆ ಎಂದು ಕಲಬುರಗಿ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳಾದ ಸಾದಿಕ್ ಹುಸೇನ್ ಖಾನ್ ಅವರು ತಿಳಿಸಿದ್ದಾರೆ.

ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಿಂದ ವಿಶೇಷಚೇತನರಿಗೆ ನೀಡುವಂತಹ ಸೌಲಭ್ಯಗಳನ್ನು ಪಡೆಯಲು ಯು.ಡಿ.ಐ.ಡಿ ಕಾರ್ಡ್ ಅತ್ಯವಶ್ಯಕ ದಾಖಲೆಯಾಗಿದೆ. ಅದರಂತೆ ವಿಶೇಷಚೇತನರ ಇಲಾಖೆಯಿಂದ ನೀಡುವ ಸೌಲಭ್ಯಗಳಾದ ಮಾಶಾಸನ, ಬಸ್‌ಪಾಸ್, ರೈಲ್ವೆ ಪಾಸ್, ಇನ್ನಿತರೆ ಸೌಲಭ್ಯಗಳನ್ನು ಪಡೆಯಲು ಯುಡಿಐಡಿ ಕಾರ್ಡ್ ಕಡ್ಡಾಯವಾಗಿದೆ.

Contact Your\'s Advertisement; 9902492681

ವಿಕಲಚೇತನರು ಎಲ್ಲಾ ರೀತಿಯ ಸರ್ಕಾರಿ ಸೌಲಭ್ಯ ಪಡೆಯಲು ಯು.ಡಿ.ಐ.ಡಿ. (ವಿಕಲಚೇತನರ ವಿಶಿಷ್ಟ ಗುರುತಿನ ಚೀಟಿ) ಕಡ್ಡಾಯವಾಗಿದ್ದು, ಇನ್ನು ಮುಂದೆ ವಿಕಲಚೇತನರು ಯು.ಡಿ.ಐ.ಡಿ ಸ್ಮಾರ್ಟ್ ಕಾರ್ಡ್‌ಗಾಗಿ ಕಚೇರಿ ಅಲೆದಾಡಬೇಕಿಲ್ಲ.

ಕಾರ್ಯಕರ್ತರಿಂದ ಯು.ಡಿ.ಐ.ಡಿ. ಕಾರ್ಡ್ ವಿತರಣೆ: ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು, ನಗರ ಪ್ರದೇಶಗಳಲ್ಲಿ ನಗರ ಪುನರ್ವಸತಿ ಕಾರ್ಯಕರ್ತರು, ತಾಲೂಕು ವಿವಿದ್ದೋದ್ದೇಶ ಪುನರ್ವಸತಿ ಕಾರ್ಯಕರ್ತರು ಹೊಸ ಯುಡಿಐಡಿ ಕುರಿತು ವಿಶೇಷಚೇತನರ ಮನೆಗಳಿಗೆ ಭೇಟಿ ನೀಡಿ ಮಾಹಿತಿ ನೀಡಿ, ಅರ್ಹ ವಿಶೇಷಚೇತನರಿಂದ ಕಾರ್ಡ್ ಪಡೆಯಲು ಅರ್ಜಿ ಹಾಕಿಸುತ್ತಾರೆ. ನಂತರ ವಿಶೇಷಚೇತನರನ್ನು ತಾಲೂಕು ಹಾಗೂ ಜಿಲ್ಲಾ ವೈದ್ಯಕೀಯ ಮಂಡಳಿಯ ಎದುರು ವೈದ್ಯಕೀಯ ಪರೀಕ್ಷೆಗೆ ಹಾಜರುಪಡಿಸುತ್ತಾರೆ.

ಅಂಗವೈಕಲ್ಯ ಪರೀಕ್ಷೆ ನಡೆಸುವಂತಹ ತಜ್ಞ ವೈದ್ಯರು ಅವರ ವಿಕಲತೆ ಪ್ರಮಾಣ ದೃಢೀಕರಿಸಿ ಆನ್‌ಲೈನ್ ಪೋರ್ಟಲ್‌ನಲ್ಲಿ ವಿಶೇಷಚೇತನರ ಮಾಹಿತಿಯನ್ನು ಅಪ್‌ಲೋಡ್ ಮಾಡಿ ಅನುಮೋದನೆ ನೀಡಿದ ಬಳಿಕ ಯುಡಿಐಡಿ ಸ್ಮಾರ್ಟ ಕಾರ್ಡ್‌ನ್ನು ಜಿಲ್ಲಾ ಅಂಗವಿಕಲರ ಕಲ್ಯಾಣ ಇಲಾಖೆಗೆ ಬರುತ್ತದೆ. ಅಲ್ಲಿಂದ ಸದರಿ ಕಾರ್ಡ್‌ನ್ನು ನಗರ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರಿಗೆ ಕಳುಹಿಸಲಾಗುತ್ತದೆ. ಅವರಿಂದ ನೇರವಾಗಿ ಅರ್ಹ ಫಲಾನುಭವಿಗಳ ಮನೆ ಬಾಗಿಲಿಗೆ ಕಾರ್ಡ್‌ಗಳನ್ನು ವಿತರಿಸಲಾಗುತ್ತದೆ.

ಜಿಲ್ಲೆಯ ವಿಕಲಚೇತನರು ಹೆಚ್ಚಿನ ಸಂಖ್ಯೆಯಲ್ಲಿ ಇದರ ಸದುಪಯೋಗ ಪಡೆಯಲು ಖುದ್ದಾಗಿ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಜಿಲ್ಲಾ ಕಚೇರಿಯನ್ನು, ತಾಲೂಕಾ ಸ್ಥಳಗಳಿಗೆ ಭೇಟಿ ನೀಡಿ ಜನನಿಭಿಡ ಪ್ರದೇಶಗಳಲ್ಲಿ ವ್ಯಾಪಕವಾಗಿ ಪ್ರಚಾರ ಮಾಡಲಾಗುತ್ತಿದೆ.
ಯುಡಿಐಡಿ ಕಾರ್ಡ್ ವಿವರ ಇಂತಿದೆ. ಕಲಬುರಗಿ ಜಿಲ್ಲೆಯಲ್ಲಿ ಯುಡಿಐಡಿ ಕಾರ್ಡ್‌ಗಾಗಿ ೨೯,೫೯೯ ಅರ್ಜಿ ಸಲ್ಲಿಸಿದ್ದು, ಇದರಲ್ಲಿ ೧೯,೪೦೬ ವಿಕಲಚೇತನರು ಕಾರ್ಡ್ ಪಡೆದಿದ್ದಾರೆ. ೫,೭೭೨ ಅರ್ಜಿಗಳು ತಿರಸ್ಕೃತಗೊಂಡಿವೆ ಎಂದು ಅವರು ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here