ಅನುಮಾನಾಸ್ಪದ ವ್ಯಕ್ತಿಗಳು ಕಂಡು ಬಂದಲ್ಲಿ ಪೊಲೀಸರಿಗೆ ತಿಳಿಸಿ: ವಡೆಯರ್

0
65
ನಗರದ ಜ್ಞಾನೋದಯ ಪ್ರೌಢ ಶಾಲೆಯಲ್ಲಿ ಪೊಲೀಸ ಇಲಾಖೆಯ ವತಿಯಿಂದ ಗುರುವಾರ ಆಯೋಜಿಸಿದ ಆಪರೇಷನ್ ಮುಸ್ಕಾನ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪಿಎಸ್‌ಐ ಎಸ್.ಡಿ.ವಡೆಯರ್.

ಸುರಪುರ: ಇತ್ತೀಚೆಗೆ ಮಕ್ಕಳು ಕಾಣೆಯಾಗುತ್ತಿರುವ ಬಗ್ಗೆ ದೂರುಗಳು ಕೇಳಿ ಬರುತ್ತಿವೆ.ಆದ್ದರಿಂದ ವಿದ್ಯಾರ್ಥಿಗಳು ಅಥವಾ ಸಾರ್ವಜನಿಕರು ತಮಗೆ ಯಾರಾದರೂ ಅನುಮಾನಾಸ್ಪದ ವ್ಯಕ್ತಿಗಳು ಕಂಡು ಬಂದರೆ ಕೂಡಲೆ ಪೊಲೀಸರಿಗೆ ತಿಳಿಸುವಂತೆ ಪಿಎಸ್‌ಐ ಎಸ್.ಡಿ.ವಡಯರ್ ತಿಳಿಸಿದರು.

ಯದಗಿರಿ ಜಿಲ್ಲಾ ಪೊಲೀಸ್ ಇಲಾಖೆಯ ವತಿಯಿಂದ ಹಮ್ಮಿಕೊಂಡ ಆಪರೇಷನ್ ಮುಸ್ಕಾನ್ ಕುರಿತ ಜಾಗೃತಿ ಅಭಿಯಾನದ ಅಂಗವಾಗಿ ನಗರದ ಜ್ಞಾನೋದಯ ಪ್ರೌಢ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಮಕ್ಕಳನ್ನು ಕಳ್ಳಸಾಗಾಣಿಕೆ ಮಾಡುವುದು,ಮಕ್ಕಳಿಗೆ ಮೋಸದಿಂದ ತಿಂಡಿ ತಿನುಸುಗಳ ತಿನಿಸಿ ಅಪಹರಣ ಮಾಡುವುದು, ಮಕ್ಕಳನ್ನು ಭೀಕ್ಷಾಟನೆಗೆ ತೊಡಗಿಸುವುದು, ಮಕ್ಕಳ ಅಂಗಾಂಗಳ ಮಾರಾಟ ಮಾಡುವುದು, ನಿಧಿಯಾಸೆಗೆ ಬಲಿ ನೀಡುವಂತ ಕೃತ್ಯಗಳಿಗು ಮಕ್ಕಳನ್ನು ದೂಡಲಾಗುತ್ತಿದೆ.ಇವುಗಳಿಂದ ಮಕ್ಕಳನ್ನು ರಕ್ಷಿಸುವುದು ಪೋಷಕರ ಜವಬ್ದಾರಿಯಾಗಿದೆ. ಆದರೆ ಇಂತಹ ಕೃತ್ಯ ಎಸಗುವ ಯಾವುದೆ ವ್ಯಕ್ತಿಗಳು ಕಂಡಲ್ಲಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡುವಂತೆ ಕರೆ ನೀಡಿದರು.

Contact Your\'s Advertisement; 9902492681

ಅಲ್ಲದೆ ಬಾಲ ಕಾರ್ಮಿಕ ನಿಷೇಧ ಕಾಯ್ದೆ ೧೯೮೬, ಬಾಲ್ಯ ವಿವಾಹ ನಿಷೇಧ ಕಾಯ್ದೆ ೨೦೦೬ ಹಾಗು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ೨೦೧೨ರ ಫೋಕ್ಸೊ ಕಾಯ್ದೆಗಳ ಕುರಿತು ಮಾಹಿತಿ ನೀಡಿದರು.
ಪೊಲೀಸ ಸಿಬ್ಬಂದಿಯಾದ ದಯಾನಂದ, ಶಾಲೆಯ ಮುಖ್ಯಗುರು ಲಂಕೆಪ್ಪ ಕವಲಿ, ಚನ್ನಪ್ಪ ನಾಯಕ, ಬೀರೆಶ ಕುಮಾರ, ದೇವು ಹೆಬ್ಬಾಳ, ವಿರೇಶ ಹಳ್ಳಿಮನಿ, ಅಯಮ್ಮ ದರಬಾರಿ, ಪ್ರಕಾಶ ಮಾಳಗಿ, ತಿರುಪತಿ ಮುಷ್ಠಳ್ಳಿ ಸೇರಿದಂತೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here