ಕಲಬುರಗಿ : ಡಿ ದೇವರಾಜ್ ಅರಸ್ ಅವರ 40ನೇ ಪುಣ್ಯತಿಥಿ ನಿಮಿತ್ಯ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಕಲಬುರಗಿ ಅಧ್ಯಕ್ಷರಾದ ಶಿವಲಿಂಗಪ್ಪ ಕನ್ನೂರ್ ಅರಸುರವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡುತ್ತ ಮಾಜಿ ಮುಖ್ಯಮಂತ್ರಿ ಹಿಂದುಳಿದ ವರ್ಗಗಳ ಹರಿಕಾರ ಡಿ ದೇವರಾಜ ಅರಸು ಅವರ ಹಿಂದುಳಿದ ವರ್ಗಗಳಿಗೆ ರಾಜಕೀಯ ಪ್ರಾರ್ಥನೆಯನ್ನು ನೀಡಿರುವುದು ರಾಜಕೀಯ ಫಲಾನುಭವಿಗಳು ಸಮಾಜಕ್ಕೆ ಪ್ರಗತಿಗೆ, ನ್ಯಾಯಕ್ಕಾಗಿ, ಹೋರಾಡುವುದು ನಮ್ಮೆಲ್ಲರ ಜವಾಬ್ದಾರಿ ಅವರು ಹೇಳಿದರು.
ಕಲಬುರಗಿ ನಗರದ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ (ರಿ) ಕಚೇರಿಯಲ್ಲಿ ಡಿ ದೇವರಾಜ ಅರಸು ರವರ 40ನೇ ಪುಣ್ಯತಿಥಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಾ ನ್ಯಾಯಮೂರ್ತಿ ಕೆ ಭಕ್ತವತ್ಸಲಂ ಅವರ ನೇತೃತ್ವದಲ್ಲಿ ಹಿಂದುಳಿದ ವರ್ಗಗಳ ರಾಜಕೀಯ ಪ್ರಾತಿನಿಧ್ಯ ವಿಚಾರಣೆ ಆಯೋಗವನ್ನು ಮನವಿಗಳನ್ನು ಸ್ವೀಕರಿಸುತ್ತಿರುವುದು ಉತ್ತಮ ಬೆಳವಣಿಗೆ ಈ ಸಮಯದಲ್ಲಿ ವಿದ್ಯಾವಂತರು, ರಾಜಕೀಯ ಪಕ್ಷಗಳು ಹಿಂದುಳಿದ ವರ್ಗಗಳಿಗೆ ರಾಜಕೀಯ ಸ್ಥಾನಮಾನವನ್ನು ನೀಡಲು ವಿಧಾನಸೌಧದಲ್ಲಿ ಕಾನೂನು ರೂಪಿಸಬೇಕಾಗಿದೆ ಎಂದು ಹೇಳಿದರು.
ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ಕಾರ್ಯದರ್ಶಿ ಬಿ. ಎಂ ರಾವೂರ ಮಾತನಾಡಿ, ಡಿ. ದೇವರಾಜ ಅರಸು ಕಾಲದಲ್ಲಿ ವಿದ್ಯಾರ್ಥಿ ವಸತಿ ನಿಲಯಗಳನ್ನು ಆರಂಭಿಸಿದರು ಹಿಂದುಳಿದ ವರ್ಗಗಳ ವಿದ್ಯಾರ್ಥಿ ವಿದ್ಯಾರ್ಥಿನಿಯರು ವಸತಿ ನಿಲಯಗಳಲ್ಲಿ ಪ್ರವೇಶ ದೊರಕಿತು ಈ ಫಲಾನುಭವಿಗಳು ಡಿ ದೇವರಾಜ ಅರಸರ ತತ್ವ ಸಿದ್ಧಾಂತ ಅಳವಡಿಸಿಕೊಂಡು ಇಂದಿನ ವಿದ್ಯಾರ್ಥಿಗಳಿಗೆ ಮಾಹಿತಿ ಮಾರ್ಗದರ್ಶನ ಮಾಡುವ ಮೂಲಕ ಸಾಮಾಜಿಕ ಸೇವೆ ನೀಡಬೇಕೆಂದು ಬಿ. ಎಂ. ರಾವೂರ ಕರೆ ನೀಡಿದರು.
ಈ ಸಂದರ್ಭದಲ್ಲಿ ಮೈಲಾರಿ ಶಳಿಗಿ,ರಾಜೇಂದ್ರ ರಾಜವಾಳ, ಜಟ್ಟಪ್ಪ ಟೂಣಿ, ದೇವೇಂದ್ರಪ್ಪ ಶಹಪುರ್, ಚಂದ್ರಕಾಂತ್ ಕಿರಣಗಿ, ಶ್ರೀಶೈಲ್ ಘೋಡಕೆ, ವೆಂಕಟೇಶ್ ದೊರೆಪಲ್ಲಿ ಇತರರು ಉಪಸ್ಥಿತರಿದ್ದರು.