ಸೇಡಂ ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ್ ಹಾಗೂ ರಘುನಾಥ ಮಲ್ಕಾಪುರೆ ನಡುವೆ ನಡೆದ ಸಂಭಾಷಣೆಯ ಆಡಿಯೋ ರಿಲೀಸ್ ಆಗಿದ್ದು, ಈ ಬಗ್ಗೆ ಶಾಸಕ ದತ್ತಾತ್ರೇಯ ಪಾಟೀಲ ಇದು ಫೇಕ್ ಆಡಿಯೋ ಎಂದು ನಿರಾಕರಿಸಿದ್ದಾರೆ. ಒಂದು ವೇಳೆ ಅದು ಸುಳ್ಳಾಗಿದ್ದರೆ ಆಡಿಯೋ ಬಿಡುಗಡೆ ಮಾಡಿದವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಬೇಕು. ಇಲ್ಲವೇ ಪ್ರಕರಣ ದಾಖಲಿಸಬೇಕಿತ್ತು. ಇದರ ಸತ್ಯಾಸತ್ಯತೆ ಹೊರ ಬೀಳಲು ಉನ್ನತ ಮಟ್ಟದ ತನಿಖೆ ನಡೆಸಬೇಕು. ಲಂಚವೊಂದೇ ಈ ಸರ್ಕಾರದ ಮೋಟಿವೇಷನ್ ಆಗಿದೆ. -ಡಾ. ಶರಣಪ್ರಕಾಶ ಪಾಟೀಲ್.
ಕಲಬುರಗಿ: ಜಿಲ್ಲೆಯಲ್ಲಿ ರೈತರಿಗೆ ಬೀಜ ಹಾಗೂ ರಸಗೊಬ್ಬರ ಕೊರತೆ ಎದ್ದು ಕಾಣುತ್ತಿದ್ದು, ಮುಂಗಾರು ಹಂಗಾಮು ಪ್ರಾರಂಭವಾಗಿ ಬಿತ್ತನೆ ಆರಂಭವಾಗಿದ್ದರೂ ಬಿತ್ತನೆಗೆ ಬೇಕಾಗಿರುವ ಬೀಜ ಹಾಗೂ ರಸಗೊಬ್ಬರ ಕೊಡಲು ಆಗುತ್ತಿಲ್ಲ ಎಂದು ಮಾಜಿ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಆರೋಪಿಸಿದರು.
ಇದನ್ನೂ ಓದಿ: ಕಲಬುರಗಿ ಪೇಟೆ ಧಾರಣೆ
ಜಿಲ್ಲೆಯಲ್ಲಿ ಡಿಎಪಿ ಗೊಬ್ಬರ ಲಭ್ಯತೆ ಇಲ್ಲದಿರುವುದರಿಂದ ರೈತರು ಪರದಾಡುವಂತಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ಈ ಸಂಬಂಧ ಕೂಡಲೇ ಅಧಿಕಾರಿಗಳ ಸಭೆ ಕರೆದು ರೈತರಿಗೆ ಅಗತ್ಯವಾಗಿರುವ ಬೀಜ ಹಾಗೂ ರಸಗೊಬ್ಬರ ದಾಸ್ತಾನು ಮಾಡಬೇಕು ಎಂದು ಆಗ್ರಹಿಸಿದರು.
ಮುಂಗಾರು ಹಂಗಾಮಿಗೆ 50 ಸಾವಿರ ಟನ್ ಗೊಬ್ಬರ ಬೇಕಾಗಿದ್ದರೂ ಕೃಷಿ ಇಲಾಖೆಯವರ ಬಳಿ ಅಗತ್ಯ ದಾಸ್ತಾನು ಇಲ್ಲ. ನಮ್ಮ ಸರ್ಕಾರ ಆಡಳಿತದಲ್ಲಿದ್ದಾಗ ಡಿಎಪಿ ದರ 600 ಇತ್ತು. ಈಗ 1350 ಆಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನಕಲಿ ಹೆಸರು ಬೀಜ ಬಿತ್ತನೆಯಿಂದಾಗಿ ಕಳೆದ ಬಾರಿ 2500 ಎಕರೆ ಬಿತ್ತನೆ ಪ್ರದೇಶ ಸಂಪೂರ್ಣ ಹಾಳಾಗಿದ್ದು, ಕಳಪೆ ಬೀಜ ಮಾರಾಟ ಮಾಡಿದ ವ್ಯಕ್ತಿಯ ವಿರುದ್ಧ ನಮ್ಮ ಒತ್ತಾಯದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ ವಿನಃ ಈವರೆಗೆ ಚಾರ್ಜ್ ಶೀಟ್ ಹಾಕಿರುವುದಿಲ್ಲ. ಬಿಜೆಪಿ ಸರ್ಕಾರಕ್ಕೆ ರೈತರ ಬಗೆಗೆ ಕಾಳಜಿಯೇ ಇಲ್ಲ ಎಂದು ಕುಟುಕಿದರು.
ಇದನ್ನೂ ಓದಿ: ಬದುಕಿನ ತಲ್ಲಣಗಳಿಗೆ ಕಾವ್ಯ ಮಿಡಿಯಬೇಕು : ರಾಮೇಶ್ವರ
ರೈತರ ಬಿತ್ತನೆಗೆ ಆಗತ್ಯವಾದ ಬೀಜ ಹಾಗೂ ರಸಗೊಬ್ಬರ ತಕ್ಷಣವೇ ಪೂರೈಸದಿದ್ದರೆ ರೈತರೊಂದಿಗೆ ಸೇರಿ ಕಾಂಗ್ರೆಸ್ ಪಕ್ಷದ ವತಿಯಿಂದ ಬೃಹತ್ ಪ್ರಮಾಣದ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ನೆರೆಯ ಬೀದರ್ ಜಿಲ್ಲೆಯಲ್ಲಿ ಬೇಡಿಕೆಯಿರುವಂತೆ ಸೋಯಾಬಿನ್ ಮತ್ತು ಮೆಕ್ಕೆಜೋಳ ಬೀಜಗಳು ನಮ್ಮಲ್ಲಿಯೂ ಬೇಡಿಕೆಯಿದ್ದು, ಕೂಡಲೇ ಸರ್ಕಾರದ ವತಿಯಿಂದ ದಾಸ್ತಾನು ಮಾಡಬೇಕು. ಸರ್ಕಾರ ವಿಎಸ್ಎಸ್ಎನ್ ಮೂಲಕ ಬೀಜಗಳ ಪೂರೈಕೆ ಮಾಡಬೇಕು ಎಂದರು.
ಮುಂಗಾರು ಹಂಗಾಮಿನ ಬಿತ್ತನೆಗಾಗಿ ತೊಗರಿ, ಹೆಸರು, ಉದ್ದು ಹಾಗೂ ಇನ್ನಿತರ ಬೀಜಗಳನ್ನು ಖರೀದಿಸುವಾಗ ರೈತರು, ಅಧಿಕೃತ ಮಾರಾಟಗಾರಿಂದ ಪಡೆಯಬೇಕು ಇಲ್ಲವೇ ಕೃಷಿ ಇಲಾಖೆ ಅಧಿಕಾರಿಗಳಿಂದ ಸಲಹೆ ಪಡೆಯಬೇಕು ಎಂದು ಮನವಿ ಮಾಡಿದರು. ಪದೇ ಪದೇ ತೊಗರಿ ಬೆಳೆಯುವುದರಿಂದ ಗೊಡ್ಡು, ಚಪ್ಪೆ ರೋಗ ಬಂದು ಬೆಳೆ ಹಾನಿಯಾಗುವುದರಿಂದ ಪರ್ಯಾಯ ಬೆಳೆ ಬೆಳೆಯಲು ಕೃಷಿ ಇಲಾಖೆಯವರು ರೈತರಿಗೆ ತಿಳಿ ಹೇಳಬೇಕು ಎಂದು ಸಲಹೆ ನೀಡಿದರು. ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜಗದೇವ ಗುತ್ತೇದಾರ ಇದ್ದರು.
ಇದನ್ನೂ ಓದಿ: ಗಾಯಾಳು ಯೋಧನ ಚಿಕಿತ್ಸೆಗೆ ಸರ್ಕಾರ ವೆಚ್ಚ ಭರಿಸಿ: ವಡಗಾಂವ
ರೈತರ ಬೆಳೆಗೆ ಬೆಂಬಲ ಬೆಲೆ ನೀಡಬೇಕು. ಪ್ರಧಾನಿ ಮೋದಿಯವರ ರೈತ ಫಸಲ್ ಭೀಮ್ ಯೋಜನೆ ಅತ್ಯಂತ ಫ್ರಾಡ್ ಆದುದ್ದಾಗಿದೆ. ರೈತರು ತುಂಬಿದ ಪ್ರೀಮಿಯಮ್ ಹಣ ನೂರು ಕೋಟಿ ಜಮಾ ಆಗಿದ್ದು, ಇದೆಲ್ಲವೂ ಪ್ರಾವೇಟ್ ಕಂಪನಿಗೆ ಹೋದಂತಾಗಿದೆ ಎಂದು ಲೇವಡಿ ಮಾಡಿದರು.