ಕಲಬುರಗಿ: ನಗರಕ್ಕೆ ಆಗಮಿಸಿದ ಕರ್ನಾಟಕ ಅಲೆಮಾರಿ ಮತ್ತು ಅರೆ-ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ.ರವೀಂದ್ರ ಶೆಟ್ಟಿ ಅವರು ಶುಕ್ರವಾರದಂದು 2021-2022ನೇ ಸಾಲಿನ ಅಲೆಮಾರಿ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಾದ ಪ್ರೇಮಕುಮಾರ ಯಲ್ಲಾಲಿಂಗ (94%), ನಂದಿತಾ ಪ್ರಭು ಯಾಳಗಿ (93.44%), ರಾಜಶ್ರೀ ಮಡಿವಾಳಪ್ಪ (93.44%), ಸಂಗೀತಾ ಸುಭಾಷ್ (84%) ಹಾಗೂ ಅಂಬರೀಶ್ ಸಿದ್ದರಾಮ ಹೆಳವರ (83%) ಅವರಿಗೆ ಪ್ರತಿಭಾ ಪುರಸ್ಕಾರ ಪ್ರಶಸ್ತಿ ನೀಡಿ ಗೌರವಿಸಿದರು.
ಕಾರ್ಯಕ್ರಮ ಉದ್ದೇಶಸಿ ಮಾತನಾಡಿದ ಅಲೆಮಾರಿ ನಿಗಮದ ಅದ್ಯಕ್ಷ ಕೆ. ರವೀಂದ್ರ ಶೆಟ್ಟಿ, ಶಿಕ್ಷಣ ಮಾನವನ ಪ್ರಗತಿಗೆ ಆಧಾರವಾಗಿದೆ. ಇದು ಸಮಾಜದ ಹಾಗೂ ವ್ಯಕ್ತಿಯ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಶಿಕ್ಷಣದಿಂದ ಮಾತ್ರ ಬಡತನ ನಿರ್ಮೂಲನೆ ಮಾಡಲು ಸಾದ್ಯ. ಅಲೆಮಾರಿ ಸಮುದಾಯದ ಎಲ್ಲಾ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಲಿ ಎಂದರು.
ಕಾರ್ಯಕ್ರಮದಲ್ಲಿ ದೇವರಾಜ ಅರಸು ಅಭಿವೃದ್ದಿ ನಿಗಮದ ಪ್ರಧಾನ ವ್ಯವಸ್ಥಾಪಕ (ಹಣಕಾಸು) ಪಂಚಲಿಂಗ ಸ್ವಾಮಿ, ಸಹಾಯಕ ಮುಖ್ಯ ವ್ಯವಸ್ಥಾಪಕ ನಾರಾಯಣ ಮೆರಲಿ, ಅಭಿವೃದ್ಧಿ ಅಧಿಕಾರಿ ಶೇಖರ ಬಾಬು, ಬೀದರ ಜಿಲ್ಲಾ ವ್ಯವಸ್ಥಾಪಕ ಯಡಿಯೂರಪ್ಪ, ರಾಜ್ಯ ನಿರ್ದೇಶಕ ಬಸವರಾಜ ಹೆಳವರ ಯಾಳಗಿ, ಜಿಲ್ಲಾದ್ಯಕ್ಷ ಸಾಯಬಣ್ಣ ಹೆಳವರ, ಪ್ರಭು ಯಾಳಗಿ, ಸಿದ್ದರಾಮ ಬೈರಾಮಡಗಿ, ಯಲ್ಲಾಲಿಂಗ ಹೆಳವರ ಹಾಗೂ ಇನ್ನಿತರ ಸಮಾಜದ ಮುಖಂಡರು ಭಾಗವಹಿಸಿದ್ದರು.