ಪ್ರೊಫೆಸರ್ ಕೃಷ್ಣಪ್ಪ ಅವರ ಜನ್ಮದಿನೋತ್ಸವ ಆಚರಣೆ

0
17

ಬಾಗಲಕೋಟ: ಶೋಷಿತರ ಸಮುದಾಯಕ್ಕೆ ಪ್ರೊಫೆಸರ್ ಕೃಷ್ಣಪ್ಪ ಅವರ ಕೊಡುಗೆ ಅಪಾರ…ಪೀರಪ್ಪ ಮ್ಯಾಗೇರಿ ಡ್ರಿಮ್ಸ್ ಹೋಟೆಲನಲ್ಲಿ ದಲಿತ ಸಮುದಾಯದ ಅಪರೂಪದ ನಾಯಕ್ ದಲಿತ್ ಸಂಘರ್ಷ ಸಮಿತಿಯ ಜನಕ ಪ್ರೊಫೆಸರ್ ಕೃಷ್ಣಪ್ಪ ಅವರ ಜನ್ಮದಿನೋತ್ಸವನ್ನು ಆಚರಿಸಲಾಯಿತು.

ದಲಿತ ಮುಖಂಡ ಪೀರಪ್ಪ ಮ್ಯಾಗೇರಿ ಅವರು ಕಾರ್ಯಕ್ರಮ ವನ್ನು ಉದ್ದೇಶಿಸಿ ಪ್ರೊಫೆಸರ್ ಕೃಷ್ಣಪ್ಪ ಅವರು ಹೋರಾಟ ಚಳುವಳಿ ಮಾಡಿದಷ್ಟೇ ಅಲ್ಲದೆ ಅವರು ದಲಿತ ಸಮುದಾಯಗಳ ಸಮಸ್ಯೆಗಳನ್ನು ಆಳವಾಗಿ ಅಧ್ಯಯನ ಮಾಡಿ ಅವುಗಳನ್ನು ಪರಿಹರಿಸುವಲ್ಲಿ ಯಶಸ್ವಿಯಾಗಿದ್ದರು.

Contact Your\'s Advertisement; 9902492681

ಅವರ ಅನತಿಯಂತೆ ನಾವು ಎಲ್ಲ ದಲಿತ ಸಂಘಟನೆ ಗಳು ಒಂದು ಆಗಿ ಹೋದರೆ ರಾಜಾಧಿಕಾರ ಪಾಡಿಯುವದು ಕಷ್ಟವಲ್ಲ ಅಂತ ಅಭಿಪ್ರಾಯ ವ್ಯಕ್ತಪಡಿಸಿದರು.

ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ನಾಗರಾಜ್ ಮನ್ನಿಕೇರಿ ಮಾತನಾಡಿ ಅತಿ ಶೀಘ್ರದಲ್ಲಿ ದಲಿ ಸಂಘಟನೆಗಳು ಮತ್ತು ಎಲ್ಲ ಮುಖಂಡರನ್ನು ಬಾಗಲಕೋಟ ಜಿಲ್ಲೆಯಲ್ಲಿ ಸೇರಿಸಿ ದಲಿತ ಸಮುದಾಯಗಳ ವಿಷಯವಾಗಿ ಕಾರ್ಯಕ್ರಮ ಆಯೋಜಿಸಲಾಗುವುದು ಈ ಸಂದರ್ಭದಲ್ಲಿ ಪ್ರೊಫೆಸರ್ ಕೃಷ್ಣಪ್ಪ ಅವರ ಸೇವೆಯನ್ನು ಸ್ಮರಣಿಸಲಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಮುಖಂಡರಾದ ಉದ್ಯಮಿ ಎಂ ಆರ್ ಶಿಂದೆ, ಕೇಳುಡೆಪ್ಪ ಭೈರಮಟ್ಟಿ,ಚೇತನ್ ದೊಡ್ಡಮನಿ ಅಭಿಷೇಕ್ ತಳ್ಳಿಕೇರಿ,ವಿಠ್ಠಲ್ ಬೆವೂರ್,ಪ್ರಕಾಶ್ ಮ್ಯಾಗೇರಿ,ದುರಗಪ್ಪ ನಾಯಕ್, ಮಂಜುಕುಮಾರ್ ಮಲಘಾಣ,ಸುರೇಶ ಮಾದರ್ ಇನ್ನು ಅನೇಕರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here