ರಾಷ್ಟ್ರೀಯ ಹೆದ್ದಾರಿಯಲ್ಲಿ ನಾಮಕೇ ವಾಸ್ತೆ ದುರಸ್ತಿ ಕಾರ್ಯ

0
53

ಶಹಾಬಾದ: ನಗರದಿಂದ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ-೧೫೦ ರಲ್ಲಿ ಹೆದ್ದಾರಿಯಲ್ಲಿ ನೆಲ ಕೆಳಗಿಳಿದ ಪರಿಣಾಮ ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತಿರುವುದನ್ನು ಗಮನಿಸಿ ರಾಷ್ಟ್ರೀಯ ಹೆದ್ದಾರಿ ಇಲಾಖೆ ವತಿಯಿಂದ ರಸ್ತೆ ದುರಸ್ತಿ ಕಾರ್ಯ ನಾಮಕೇ ವಾಸ್ತೆ ನಡೆಯಿತು.

ನಗರದ ಜಿಇ ಕಾಲೋನಿಯ ಮುಭಾಗದ ರಸ್ತೆಯ ಡಿವೈಡರ್ ಎರಡು ಕಡೆಗಳಲ್ಲಿ ನೆಲ ಕೆಳಗಿಳಿದ ಪರಿಣಾಮ ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತಿತ್ತು.ವಾಹನಗಳ ಸಂಚರಿಸುವಾಗ ಜಂಪ್ ಆಗುತ್ತಿರುವುದನ್ನು ಗಮನಿಸಿ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ರಸ್ತೆ ಸಮತಟ್ಟು ಮಾಡಲು ತಗ್ಗಾದ ಪ್ರದೇಶವನ್ನು ಪರಿಶೀಲಿಸಿ ಡಾಂಬರೀಕರಣಗೊಳಿಸಿದರು.

Contact Your\'s Advertisement; 9902492681

ಇದನ್ನೂ ಓದಿ: ದೈಹಿಕ, ಮಾನಸಿಕವಾಗಿ ಸದೃಢವಾಗಿದ್ದರೆ ದೇಶದ ಶೈಕ್ಷಣಿಕ ಪ್ರಗತಿ ಸಾಧ್ಯ

ಆದರೆ ಸರಿಯಾಗಿ ಸಮತಟ್ಟು ಆಗದ ಕಾರಣ ಇನ್ನೂ ವಾಹನ ಸಂಚಾರಕ್ಕೆ ತೊಡಕಾಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.ಈಗಾಗಲೇ ಹಲವಾರು ಬಾರಿ ರಸ್ತೆಯ ಬದಿಯಲ್ಲಿ ಮಣ್ಣು ಸಂಗ್ರಹಣೆಗೊಂಡಿದೆ.ಇದರಿಂದ ವಾಹನ ಸವಾರರು ಜಾರಿ ಬೀಳುತ್ತಿದ್ದಾರೆ.ಡಿವೈಡರ್ ಮಧ್ಯೆ ಮತ್ತು ಫೂಟ್ ಪಾತ್ ಮೇಲೆ ಮುಳ್ಳಿನ ಗಿಡಗಳು ಬೆಳೆದು ವಾಹನ ಸವಾರರಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ.

ಅದನ್ನು ತೆರವುಗೊಳಿಸಿ ಎಂದು ತಿಳಿಸಿದರೂ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ ಎಂದು ಸ್ಥಳದಲ್ಲಿದ್ದ ಜೆಇ ಅವರಿಗೆ ದೂರಿದರು. ವರ್ಷಕೊಮ್ಮೆ ಮಾತ್ರ ಅನುದಾನ ಬರುತ್ತದೆ.ಇದರಿಂದ ಏನು ಮಾಡಲು ಆಗುತ್ತಿಲ್ಲ.ಅಲ್ಲದೇ ಜಾಲಿಗಿಡಗಳು ಹಾಗೂ ಮುಳ್ಳಿನ ಗಿಡಗಳನ್ನು ತೆರವುಗೊಳಿಸಲು ಕಾರ್ಮಿಕರು ಸಿಗುತ್ತಿಲ್ಲ.ಆದ್ದರಿಂದ ನಿವೇ ಏನಾದರೂ ಕಾರ್ಮಿಕರ ವ್ಯವಸ್ಥೆ ಮಾಡಿ ಕೊಟ್ಟರೇ ಅನುಕೂಲವಾಗುತ್ತದೆ ಎಂದು ಅಧಿಕಾರಿಯೊಬ್ಬರೂ ಮಾಧ್ಯಮದವರ ಎದುರೇ ಬೇಜವಾಬ್ದಾರಿಯಾಗಿ ಮಾತನಾಡುತ್ತಿರುವುದು ಕಂಡು ಬಂದಿತು.

ಇದನ್ನೂ ಓದಿ: ವೈದ್ಯರ ಸಲಹೆ ಮೇರೆಗೆ ವಾರದ ಕಾಲ ಹೆಚ್ಡಿಕೆ ವಿಶ್ರಾಂತಿ: ಸಾರ್ವಜನಿಕ ಭೇಟಿ ಇಲ್ಲ

ರಾಷ್ಟ್ರೀಯ ಹೆದ್ದಾರಿ ಎಂದರೆ ಒಳ್ಳೆಯ ಗುಣಮಟ್ಟದ ಸುವ್ಯವಸ್ಥಿತ ರಸ್ತೆ ಇರುತ್ತದೆ.ಆದರೆ ಸರಿಯಾದ ನಿರ್ವಹಣೆ ಕೊರತೆಯಿಂದ ಎಲ್ಲಾ ಹಾಳಾಗುತ್ತಿದೆ.ಅಲ್ಲದೇ ಸರಿಯಾದ ಸಮಯಕ್ಕೆ ರಸ್ತೆ ದುರಸ್ತಿ ಮಾಡುತ್ತಿಲ್ಲ.ಅಲ್ಲದೇ ನಾಮಕೇ ಬಾಸ್ತೆ ಮಾಡುತ್ತಿರುವುದರಿಂದ ಅಪಘಾತಗಳು ಹೆಚ್ಚುತ್ತಿವೆ. ಇದನ್ನು ಮೊದಲು ಸರಿಪಡಿಸಿ ಎಂದು ಸಾರ್ವಜನಿಕರು ಕೇಳಿದರೆ ಇನ್ನೊರ್ವ ಜೆಇ ರಸ್ತೆ ಮೇಲೆಅಪಘಾತಗಳು ಆಗುತ್ತಿದ್ದರೇ ನಾವೇನು ಮಾಡುವುದು ಎಂದು ಹಾರಿಕೆ ಉತ್ತರ ನೀಡಿದ್ದಾರೆ.ಕೂಡಲೇ ಹೆದ್ದಾರಿ ಪ್ರಾಧಿಕಾರದ ಹಿರಿಯ ಅಧಿಕಾರಿಗಳು ಸಂಬಂಧಪಟ್ಟ ಜೆಇಗಳ ವಿರುದ್ಧ ಕ್ರಮಕೈಗೊಳ್ಳಬೇಕು. ರಸ್ತೆ ಮಧ್ಯ ಹಾಗೂ ರಸ್ತೆಯ ಪಕ್ಕದಲ್ಲಿ ಬೆಳೆದಿರುವ ಮುಳ್ಳಿನ ಗಿಡಗಳು, ಜಾಲಿ ಗಿಡಗಳು ಹಾಗೂ ಸಾಕಷ್ಟು ಪ್ರಮಾಣದಲ್ಲಿ ಸಂಗ್ರಹಣೆಗೊಂಡ ಕಸ,ಮಣ್ಣನ್ನು ತೆರವುಗೊಳಿಸಬೇಕು.ಇಲ್ಲದಿದ್ದರೇ ಹೋರಾಟ ಅನಿವಾರ್ಯವಾಗುತ್ತದೆ ಎಂದು ಕಾಂಗ್ರೆಸ್ ಮುಖಂಡ ಕಿರಣ ಚವ್ಹಾಣ ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಮಣ್ಣು ಪರೀಕ್ಷೆ ಪ್ರಯೋಗಾಲಯ ಮತ್ತು ಕಿಸಾನ ಸುವಿಧಾ ಕೇಂದ್ರದ ಉದ್ಘಾಟನೆ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here