ಬ್ಲಾಕ್  ಬೆಲ್ಟ್ ಮತ್ತು ಕಲರ್ ಬೆಲ್ಟ್ ಪರೀಕ್ಷೆ

0
32

ಕಲಬುರಗಿ: ನಗರದ ಕನ್ನಡ ಭವನದಲ್ಲಿ ಸೆಲ್ಫ್ ಡಿಫೆನ್ಸ್ ಸ್ಕೂಲ್ ಆಫ್ ಇಂಡಿಯನ್ ಕರಾಟೆ ಹಾಗೂ ಅಜಯಕುಮಾರ್ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಷನ್ ವತಿಯಿಂದ ಒಂದು ದಿನದ ಕ್ಯಾಂಪ್ ಹಾಗೂ ಬ್ಲಾಕ್  ಬೆಲ್ಟ್ ಮತ್ತು ಕಲರ್ ಬೆಲ್ಟ್  ಎಕ್ಸಾಮ್ ನಡೆಯಿತು.

ಈ ಕಾರ್ಯಕ್ರಮದಲ್ಲಿ ಗ್ರಾಂಡ್ ಮಾಸ್ಟರ್ ಬಿ. ಎಂ. ನರಸಿಂಹನ್ ಅವರು ವಿದ್ಯಾರ್ಥಿಗಳ ಪರೀಕ್ಷೆಯನ್ನು ವೀಕ್ಷಿಸಿ ಡಿಸ್ಟ್ರಿಕ್ಟ್ ಚೀಫ್ ಕೋಚ್ ರಾಜವರ್ಧನ್ ಚೌವ್ಹಾಣ ಅವರಿಗೆ ಬ್ಲಾಕ್ ಬೆಲ್ಟ್ ಆರನೇ ಡನ್, ಅಂಬರಿಷ ಜೋಗಿ  ಬ್ಲಾಕ್ ಬೆಲ್ಟ್ ಮೂರನೆ ಡನ್, ದತ್ತಾತ್ರೇಯ ವಡನಕೇರಿ, ಸುಶ್ಮಿತಾ ರೆಡ್ಡಿ  ಬ್ಲಾಕ್ ಬೆಲ್ಟ್ ಎರಡನೆ ಡನ್ ಹಾಗೂ ೧೨ ವಿದ್ಯಾರ್ಥಿಗಳಿಗೆ ಬ್ಲಾಕ್ ಬೆಲ್ಟ್ ಮತ್ತು  ಕಲರ್ ಬೆಲ್ಟ್, ರಾಷ್ಟ್ರೀಯ ಮಟ್ಟದ ತೀರ್ಪುಗಾರರ ಪ್ರಮಾಣಪತ್ರವನ್ನು ಕರಾಟೆ ವಿದ್ಯಾರ್ಥಿಗಳಿಗೆ ವಿತರಿಸಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಪತ್ರಕರ್ತರ ಸಂಘದ ಅಧ್ಯಕ್ಷ ಬಾಬುರಾವ ಯಡ್ರಾಮಿ, ಕಸಾಪ ಅಧ್ಯಕ್ಷ ವಿಜಯಕುಮಾರ ತೆಗಲತಿಪ್ಪಿ, ಐಸಿಐಸಿಐ ಲೊಂಬಾರ್ಡ್ ಮ್ಯಾನೇಜರ್ ಸಂತೋಷ್ ಬೈರಪ್ಪ, ಹಿರಿಯ ಸಾಹಿತಿ ಮುಡಬಿ ಗುಂಡರಾವ್, ಹಾಗೂ ಕರಾಟೆ  ವಿದ್ಯಾರ್ಥಿಗಳು ಪೋಷಕರು ಇದ್ದರು.

 

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here