ಪೌರಕಾರ್ಮಿಕರನ್ನು ಮೂಲಸ್ಥಾನಕ್ಕೆ ವರ್ಗಾಯಿಸಲು ಕೆಡಿಎಸ್‌ಎಸ್ ಪ್ರತಿಭಟನೆ

0
13

ಸುರಪುರ: ನಗರಸಭೆಯಲ್ಲಿ ಕಳೆದ ಅನೇಕ ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರನ್ನು ಮೂಲಸ್ಥಾನಕ್ಕೆ ವರ್ಗಾಯಿಸಲು ಆಗ್ರಹಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಕ್ರಾಂತಿಕಾರಿ ಬಣ) ಸದಸ್ಯರು ನಗರದ ತಹಸೀಲ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಸಂಘಟನೆಯ ಜಿಲ್ಲಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ, ನಗರಸಭೆಯಲ್ಲಿ ಕಳೆದ ಹತ್ತು ವರ್ಷಕ್ಕಿಂತಲೂ ಹೆಚ್ಚು ವರ್ಷಗಳಿಂದ ವಿವಿಧ ಇಲಾಖೆಗೆಳಲ್ಲಿ ಒಂದೇ ಸ್ಥಳದಲ್ಲಿ ಹಲವು ಸಿಬ್ಬಂದಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ ಪೌರಕಾರ್ಮಿಕರು ಸರಕಾರಿ ನೌಕರರೆಂದು ಪರಿಗಣಿಸಲ್ಪಟ್ಟ ತಕ್ಷಣವೇ ಸುರಪುರದಿಂದ ಕಕ್ಕೇರಾ, ಕೆಂಭಾವಿ, ಹುಣಸಗಿ, ಶಹಾಪುರಕ್ಕೆ ವರ್ಗಾವಣೆ ಮಾಡಿ ದಲಿತರಿಗೆ ಅನ್ಯಾಯ ಮಾಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

Contact Your\'s Advertisement; 9902492681

ಪೌರಕಾರ್ಮಿಕರು ಸುರಪುರ ದಿಂದ ತಾವು ಮಾಡುವ ಪ್ರದೇಶಗಳಿಗೆ ಮುಂಜಾನೆ ತಲುಪುವ ಉದ್ದೇಶದಿಂದ ಆಟೋ ಮಾಡಿಕೊಂಡು ಹೋಗಿ ಬರುವ ಸಂಬಳ ಅಲ್ಲಿಗೆ ಆಗುವಂತಾಗಿದೆ. ಕೂಡಲೇ ಜಿಲ್ಲಾಡಳಿತ ಸುರಪುರ ನಗರಸಭೆಯಿಂದ ಬೇರೆಡೆಗೆ ವರ್ಗಾವಣೆ ಮಾಡಿದವರನ್ನು ಮೂಲಸ್ಥಾನಕ್ಕೆ ನೇಮಿಸಿ ಕುಟುಂಬಗಳು ನೆಮ್ಮದಿ ಜೀವನ ನಡೆಸಲು ಅನುಕೂಲ ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಿದರು.

ನಂತರ ತಹಸೀಲ್ದಾರರಿಗೆ ಬರೆದ ಮನವಿಯನ್ನು ಗ್ರೇಡ-೨ ತಹಸೀಲ್ದಾರ್ ಮಲ್ಲಯ್ಯ ದಂಡು ಮೂಲಕ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಮಾನಪ್ಪ ಬಿಜಾಸಪುರ, ಜೆಟ್ಟಪ್ಪ ನಾಗರಾಳ, ಮೂರ್ತಿ ಬೊಮ್ಮನಳ್ಳಿ, ಮುತ್ತುರಾಜ ಹುಲಿಕೇರಿ, ಖಾಜಾ ಹುಸೇನ್, ಹುಲಗಪ್ಪ ಜಾಂಗೀರ, ರಾಮಣ್ಣ ಬಬಲಾದ, ಹಣಮಂತ ನರಸಿಂಗಪೇಟ, ಮಲ್ಲಪ್ಪ ಬಡಗೇರ, ಭೀಮಣ್ಣ ಮಾಲಗತ್ತಿ ಸೇರಿದಂತೆ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here