ಸದೃಡ ದೇಹಕ್ಕೆ ಯೋಗವೆ ಸರ್ವಸ್ಪ: ಬಡಿಗೇರ

0
29

ಕಲಬುರಗಿ: ಮಾನಸಿಕ ಮತ್ತು ದೈಹಿಕ ಸಾಮರ್ಥಕ್ಕೆ ಯೋಗವೆ ಮದ್ದು,ಯೋಗ ಬಲ್ಲವನು ಸರ್ವಕಾಲಕ್ಕೂ ನೀರೋಗಿಯಾಗಿರುತ್ತಾನೆ. ಪ್ರತಿದಿನ 40ನಿಮಿಷ ಬೆಳಗ್ಗೆ ವಾಯು ವಿಹಾರದ ಜೊತೆಗೆ ಒಂದು ಬಾರಿ ಯೋಗ ಮಾಡಿದ್ದರೆ ಯಾವ ರೋಗವು ಮನುಷ್ಯನ ಹತ್ತಿರ ಸುಳಿಯುವದಿಲ್ಲ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸುರೇಶ ಬಡಿಗೇರ ಹೇಳಿದರು.

ಭಾರತ ಸರಕಾರದ ನೆಹರು ಯುವ ಕೇಂದ್ರ ಹಾಗೂ ಕಿರಣ ಗ್ರಾಮೀಣ ಅಭಿವೃದ್ಧಿ ಸೇವಾ ಸಂಘ (ರಿ) ಕಲಬುರಗಿ ಆಶ್ರಯದಲ್ಲಿ ನಗರದ ಆರಾಧನಾ ಶಿಕ್ಷಣ ಸಂಸ್ಥೆಯಲ್ಲಿ ಹಮ್ಮಿಕೋಂಡ ರಾಷ್ಟ್ರೀಯ ಯೋಗ ದಿನದ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು,

Contact Your\'s Advertisement; 9902492681

ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ.ಆರಾಧನಾ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಚೇತನಕುಮಾರ ಗಾಂಗಜಿ ,ಯೋಗವು ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಸಮೃದ್ಧ ಮತ್ತು ಸದೃಡ ದೇಹಕ್ಕೆ ಯೋಗವು ರಾಮಬಾಣವೆಂದು ಹೇಳಿದರು

ಪ್ರಾಸ್ತಾವಿಕವಾಗಿ ಮಾತನಾಡಿದ ಕಿರಣ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಮಂಜುನಾಥ,ಶ ನಾಲವಾರಕರ್ ಸರಕಾರ ಪ್ರತಿ ಶಾಲೆಗೆ ಯೋಗ ಶಿಕ್ಷಕರನ್ನು ನೇಮಿಸಬೇಕು,ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣದಲ್ಲಿ ಯೋಗದ ಬಗ್ಗೆ ಕಡ್ಡಾಯವಾಗಿ ಯೋಗ ಕುರಿತಾದ ಪಠ್ಯ ನಿರ್ಮಾಣವಾಗಬೇಕು ಹೇಳಿದರು
.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಕಲಬುರಗಿ ವಿಮಾನ ನಿಲ್ದಾಣ ಸಲಹಾ ಸಮಿತಿ ಸದಸ್ಯ ನರಸಿಂಹ ಮೆಂಡನ್,ನೆಹರು ಯುವ ಕೇಂದ್ರದ ಸಮನ್ವಯಾಧಿಕಾರಿ ಹರ್ಷಲ್ ಸಿದ್ದಾರ್ ತಲಸ್ಕರ್ ,ಜೆ,ಡಿ,ಎಸ್ ಜಿಲ್ಲಾ ಹಿರಿಯ ಉಪಾಧ್ಯಕ್ಷ ಬಸವರಾಜ ಬಿರಬಿಟ್ಟಿ, ದೈಹಿಕ ಶಿಕ್ಷಕ ಚಿದಾನಂದ ಬಿಸನಾಳ ಆಗಮಿಸಿದರು,

ನಂತರ ಸುಮಾರು 200 ಮಕ್ಕಳಿಯಿಂದ ಏಕಕಾಲಕ್ಕೆ ಯೋಗ ತರಬೇತಿ ನಡೆಸಿಕೊಂಡಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here