ಮಾನವೀಯತೆಯ ಮಹಾಪೂರ ಬುದ್ಧ, ಬಸವ, ಅಂಬೇಡ್ಕರ್

0
108

ಭಗವಾನ್ ಬುದ್ಧ ೨೫೦೦ ವರ್ಷಗಳ ಹಿಂದೆ ಶಾಂತಿ, ಸಮಾನತೆ ಎಂಬ ಬೀಜ ಬಿತ್ತಿದ, ಬಸವಣ್ಣ ೧೨ನೇ ಶತಮಾನದಲ್ಲಿ ಆ ಮರವನ್ನು ಪಾಲನೆ-ಪೋಷಣೆ ಮಾಡಿ ಹೆಮ್ಮರವನ್ನಾಗಿ ಬೆಳೆಸಿದ. ಡಾ. ಬಿ.ಆರ್. ಅಂಬೇಡ್ಕರ್ ಅವರು ೧೯ನೇ ಶತಮಾನದಲ್ಲಿ ಆ ಹೆಮ್ಮರದ ಫಲವನ್ನು ಸಂವಿಧಾನದ ಮೂಲಕ ಒದಗಿಸಿದರು. -ಡಾ. ಶಿವರಂಜನ ಸತ್ಯಂಪೇಟೆ. 

ಕಲಬುರಗಿ: ಬುದ್ಧ, ಬಸವ ಮತ್ತು ಅಂಬೇಡ್ಕರ್ ವಿಭಿನ್ನ ಕಾಲಮಾನ, ವಿಭಿನ್ನ ಸಾಮಾಜಿಕ, ವಿಭಿನ್ನ ಸಾಂಸ್ಕೃತಿಕ ಪರಿಸರದಲ್ಲಿ ಬಂದವರಾಗಿದ್ದರೂ ಸಮತೆಯ ಸೂತ್ರದಲ್ಲಿ ಈ ಮೂವರನ್ನು ಹಿಡಿದಿಡಬಹುದು ಎಂದು ಪತ್ರಕರ್ತ-ಲೇಖಕ ಡಾ. ಶಿವರಂಜನ ಸತ್ಯಂಪೇಟೆ ಅಭಿಪ್ರಾಯಪಟ್ಟರು.

Contact Your\'s Advertisement; 9902492681

ಅಫಜಲಪುರ ತಾಲ್ಲೂಕಿನ ಗುಡ್ಡೇವಾಡಿ ಗ್ರಾಮದ ಲಿಂ. ಚಂದಮ್ಮ ಚಂದಪ್ಪ ಹೂಗಾರ ಅವರ ೫ನೆಯ ಸ್ಮರಣೋತ್ಸವ ನಿಮಿತ್ತ ಹಮ್ಮಿಕೊಂಡಿದ್ದ ಬುದ್ಧ, ಬಸವ, ಅಂಬೇಡ್ಕರ್ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ಮಾನವರೆಲ್ಲ ಒಂದೇ, ಎಲ್ಲರೂ ಸಮಾನರು, ಅಹಿಂಸೆ, ವಿಷಮತೆ, ಶೋಷಣಾರಹಿತ ಸಮಾಜ ಕಟ್ಟ ಬಯಸಿದ್ದ ಇವರುಗಳು ಜೀವಪರ ಮತ್ತು ಜನಪರ ಚಳವಳಿಗಳನ್ನು ಹುಟ್ಟು ಹಾಕಿದ್ದರು ಎಂದು ತಿಳಿಸಿದರು.

ಆಸೆಯೇ ದುಃಖಕ್ಕೆ ಮೂಲ ಎಂದು ಹೇಳಿದ ಬುದ್ಧ, ಸಕಲ ಜೀವಾತ್ಮರಿಗೆ ಲೇಸು ಬಯಸಿದ ಬಸವಣ್ಣ, ಸಂವಿಧಾನದ ಮೂಲಕ ಸಮಾನತೆ ತಂದುಕೊಟ್ಟ ಡಾ. ಬಿ.ಆರ್. ಅಂಬೇಡ್ಕರ್ ಅವರುಗಳು ಮಾನವ ನಿರ್ಮಿತ ಸಮಾಜಿಕ ವ್ಯವಸ್ಥೆಯಲ್ಲಿನ ಅನೇಕ ಲೋಪದೋಷಗಳನ್ನು ಎತ್ತಿ ಹೇಳಿದರು ಮಾತ್ರವಲ್ಲ, ಶಾಂತಿ, ಅಹಿಂಸೆ, ಕಾಯಕ, ದಾಸೋಹ ಹಾಗೂ ಸಮಾನತೆ ತಂದುಕೊಟ್ಟರು ಎಂದು ಹೇಳಿದರು.

ವರ್ಣಾಶ್ರಮ, ಯುದ್ಧ, ಯಜ್ಞ-ಯಾಗ, ಸ್ವಚ್ಛಂದ ಲೈಂಗಿಕತೆ ಈ ಮುಂತಾದ ಸಮಾಜ ವಿರೋಧಿ ಗುಣಗಳನ್ನು ಬುದ್ಧ ನಿವಾರಣೆ ಮಾಡಿದರೆ,ಏಕದೇವೋಪಾಸನೆ, ಕರ್ಮಸಿದ್ಧಾಂತ, ಪುನರ್ಜನ್ಮ, ಜಾತಿ ಪದ್ಧತಿ, ಅಶ್ಪೃಶ್ಯತೆ ನಿವಾರಣೆಗಾಗಿ ಬಸವಣ್ಣ ಅಹರ್ನಿಶಿ ದುಡಿದರು. ದಲಿತ, ಶೋಷಿತ ಸಮುದಾಯವನ್ನು ಹಸಿವು, ಸಮಾನತೆ, ಅಸ್ಪೃಶ್ಯತೆ, ಅವಮಾನದಿಂದ ಪಾರು ಮಾಡಿದರು ಎಂದು ವಿವರಿಸಿದರು.

ಕರಜಗಿಯ ಸ್ವಾವಲಂಬನಾ ರೈತ ಉತ್ಪಾದಕ ಕೇಂದ್ರದ ಅಧ್ಯಕ್ಷ ಭೀಮರಾಯ ಗೌರ ನೇತೃತ್ವ ವಹಿಸಿದ್ದರು. ಹಿರಿಯ ರಾಜಕೀಯ ಧೂರೀಣ ಎಸ್.ವೈ. ಪಾಟೀಲ ಉದ್ಘಾಟಿಸಿದರು. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ. ಮಲ್ಲಿಕಾರ್ಜುನ ವಡ್ಡನಕೇರಿ ಅಧ್ಯಕ್ಷತೆ ವಹಿಸಿದ್ದರು. ಜಲ ಸಮಿತಿ ಅಧಕ್ಷ ಸಿದ್ದು ದನ್ನೂರ ಪಂಚಶೀಲ ಧ್ವಜಾರೋಹಣ ನೆರವೇರಿಸಿದರು. ಟೋಕರೆ ಕೋಲಿ ಕಬ್ಬಲಿಗ ಬುಡಕಟ್ಟು ಸಮಿತಿ ರಾಜ್ಯಾಧ್ಯಕ್ಷ ಲಚ್ಚಪ್ಪ ಜಮಾದಾರ ಬಸವ ಧ್ವಜಾರೋಹಣ ನೆರವೇರಿಸಿದರು.

ಮಲ್ಲಿಕಾರ್ಜುನ ಸಿಂಗೆ, ನಾಗೇಶ ಕೊಳ್ಳಿ, ಸಿದ್ದು ಶಿವಣಗಿ, ಅಶೋಕ ಗುಡ್ಡಡಗಿ, ರಮೇಶ ಹೂಗಾರ ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದರು. ಇದೇ ವೇಳೆಯಲ್ಲಿ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿ ಹಾಗೂ ತಾಲ್ಲೂಕು ಪತ್ರಕರ್ತರ ಸಂಘದ ನೂತನ ಅಧ್ಯಕ್ಷ ಶಕೀಲ್ ಚೌಧರಿ ಹಾಗೂ ಪದಾಧಿಕಾರಿಗಳನ್ನು ಸ್ಮಾನಿಸಲಾಯಿತು. ಅಮರಸಿಂಗ್ ರಜಪೂತ ನಿರೂಪಿಸಿದರು. ಬಸವರಾಜ ಹೂಗಾರ ಪ್ರಾರ್ಥಿಸಿದರು. ಉಮೇಶ ಹೂಗಾರ ಸ್ವಾಗತಿಸಿದರು. ಬಸವರಾಜ ಚಾಂದಕವಟೆ ಪ್ರಾಸ್ತಾವಿಕ ಮಾತನಾಡಿದರು. ಅಶೋಕ ಹೂಗಾರ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here