ಸುರಪುರ: ಪೋಲಿಸ್ ಇಲಾಖೆಯ ಸಿಬ್ಬಂದಿಗಳಿಂದ ಕೊಲೆ,ಅತ್ಯಾಚಾರ,ಹಲೆಲಯಂತಹ ಗಂಭೀರ ಪ್ರಕರಣಗಳ ಕುರಿತು ದೂರು ಪಡೆಯಲು ನಿರ್ಲಕ್ಷಿಸಿದರೆ ಅಥವಾ ತೊಂದರೆ ನೀಡಿದರೆ ಅಂತಹ ಸಿಬ್ಬಂದಿಯವರ ವಿರುದ್ಧ ಪೋಲಿಸ್ ಪ್ರಾಧಿಕಾರಕ್ಕೆ ದೂರು ಸಲ್ಲಿಸಲು ಅವಕಾಶವಿದೆ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶ ಚಿದಾನಂದ ಬಡಗೇರ ಹೇಳಿದರು.
ನಗರದ ಪೋಲಿಸ್ ಠಾಣೆಯಲ್ಲಿ ಶುಕ್ರವಾರ ತಾಲೂಕು ಕಾನೂನು ನೆರವು ಸಮೀತಿ ಹಾಗೂ ಪೋಲಿಸ್ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಇಂದಿನ ದಿನಗಳಲ್ಲಿ ಕಾನೂನುಗಳನ್ನು ಕೈಗೆತ್ತುಕೊಂಡು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುವುದು ಬಹಳಷ್ಟು ಜನರಲ್ಲಿ ರಕ್ತಗತವಾಗಿದೆ ಇದರಿಂದ ಸಮಾಜಕ್ಕೆ ಕೇಡುಕು ಉಂಟಾಗುತ್ತಿದೆ ಅತಂಹವರು ತಮ್ಮ ಮನಸ್ಸುಗಳನ್ನು ನಿಗೃಹಿಸಿ ಸ್ವಸ್ಥ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದರು.
ನಂತರ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಅಮರನಾಥ ಬಿ.ಎನ್ ಮಾತನಾಡಿ ಈ ಪೋಲಿಸ ದೂರು ಪ್ರಾಧಿಕಾರವನ್ನು ೨೦೦೬ ರಲ್ಲಿ ಉಚ್ಛ ನ್ಯಾಯಾಲಯದ ಆದೇಶದ ಮೇರೆಗೆ ದೇಶದ ಎಲ್ಲಾ ರಾಜ್ಯಗಳಲ್ಲಿ ಕಾನೂನು ರೋಪಿಸಿ ಜಾರಿಗೊಳಿಸಲಾಗಿದೆ ಈ ಕಾನೂನಿಂದ ಪೋಲಿಸ್ ಸಿಬ್ಬಂದಿಗಳು ದೂರು ತೆಗದುಕೊಳ್ಳುವ ಸಮಯದಲ್ಲಾಗುವ ತಪ್ಪುಗಳನ್ನು ನಿಗೃಹಿಸುವ ನಿಟ್ಟಿನಲ್ಲಿ ಈ ಕಾನೂನುಗಳನ್ನು ಜಾರಿಗೆ ತರಲಾಗಿದೆ ಪೋಲೀಸರಿಂದ ಅನ್ಯಾವಾದವರು ಈ ಕಾನೂನಿನ ಸದುಪಯೋಗ ಪಡೆಸಿಕೊಳ್ಳಬೇಕು ಎಂದರು.
ಡಿವೈಎಸ್‌ಪಿ ಶಿವನಗೌಡ ಪಾಟೀಲ ಅಧ್ಯಕ್ಷತೆ ವಹಿಸಿ, ಮಾತನಾಡಿ ಕಾನೂನುನನ್ನು ನಾವು ಗೌರವಿಸಿದರೆ ಅದು ನಮ್ಮನ್ನು ಗೌರವಿಸುತ್ತದೆ. ಜಿಲ್ಲಾಮಟ್ಟದಲ್ಲಿಯೊ ಕೂಡಾ ಪೋಲಿಸ್ ದೂರು ಪ್ರಾಧಿಕಾರ ವಿರುತ್ತದೆ ಪ್ರಾದೇಶಿಕ ಆಯುಕ್ತರು ಇದರ ಅಧ್ಯಕ್ಷರಾಗಿರುತ್ತಾರೆ ಮತ್ತು ಜಿಲ್ಲಾ ಪೋಲಿಸ ವರಿಷ್ಠಾಧಿಕಾರಿಗಳು ಮತ್ತು ಇನ್ನಿತರ ಅಧಿಕಾರಿಗಳು ಪೋಲಿಸರ ವಿರುದ್ಧ ಬಂದಂತ ದೂರುಗಳನ್ನು ವಿಚಾರಣೆ ನಡೆಸಿ ಕ್ರಮಕ್ಕಾಗಿ ಸರಕಾರಕ್ಕೆ ಶೀಫಾರಸ್ಸು ಮಾಡುತ್ತಾರೆ ಎಂದು ಪ್ರಾಧಿಕಾರದ ಕಾರ್ಯವೈಖರಿಯ ಕುರಿತು ಸವಿಸ್ತಾರವಾಗಿ ತಿಳಿಸಿದರು.
ಸಂಪನ್ಮೂಲ ವ್ಯಕ್ತಿ ಹಾಗೂ ವಕೀಲ ಶಿವಾನಂದ ಅವಂಟಿ ಪೋಲಿಸ ದೂರು ಪ್ರಾಧಿಕಾರದ ಕುರಿತು ಉಪನ್ಯಾಸ ನೀಡಿದರು ಮತ್ತು ವಕೀಲರ ಸಂಘದ ಅಧ್ಯಕ್ಷ ಮಹ್ಮದ್ ಹುಸೇನ ಮಾತನಾಡಿದರು ಎಪಿಪಿ ಮಹಂತೇಶ ಮಸೂಳಿ ವೇದಿಕೆಯಲ್ಲಿದ್ದರು, ಪಿಸ್‌ಐ ಎಸ್.ಡಿ.ವಡೆಯರ್, ವಕೀಲರಾದ ದೇವಿಂದ್ರಪ್ಪ ಬೇವಿನಕಟ್ಟಿ, ಮಂಜುನಾಥ ಹುದ್ದಾರ, ವೆಂಕೋಬ ದೊರೆ, ಶ್ರೀನಿವಾಸ ನಾಯಕ ದೊರೆ, ರವಿನಾಯಕ ಬೈರಿಮರಡಿ, ರಾಹುಲ ಹುಲಿಮನಿ,ಭೀಮಾಶಂಕರ ಬಿಲ್ಲವ,ತಿಪ್ಪಣ್ಣ ಶೆಳ್ಳಿಗಿ,ಮಲ್ಲು ಬಿಲ್ಲವ್ ಸೇರಿದಂತೆ ಅನೇಕರಿದ್ದರು.