ಕಲಬುರಗಿ: ಅಂಗವಿಕಲ ಮತ್ತು ಹಿರಿಯ ಸಬಲೀಕರಣ ಇಲಾಖೆಯಿಂದ ಕೆಳಕಂಡ ವಿವಿಧ ಯೋಜನೆಗಳಡಿ ಸೌಲಭ್ಯ ಪಡೆಯಲು ಅರ್ಹ ವಿಕಲಚೇತನ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಕಲಬುರಗಿ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು ತಿಳಿಸಿದ್ದಾರೆ.
ಆಧಾರ ಯೋಜನೆ, ತ್ರಿಚಕ್ರ ಪೆಟ್ರೋಲ್ ವಾಹನ, ವಿದ್ಯಾರ್ಥಿ ವೇತನ, ಶುಲ್ಕ ಮರುಪಾವತಿ, ಪ್ರೋತ್ಸಾಹಧನ, ಅಂಧ ವಿದ್ಯಾರ್ಥಿಗಳಿಗೆ ಮಾತ್ರ ಲ್ಯಾಪಟಾಪ್, ಅಂಧ ಮಹಿಳೆಯ ಮಗುವಿನ ಪೋಷಣಾ ಭತ್ಯೆ, ಮದುವೆ ಪ್ರೋತ್ಸಾಹಧನ ಹಾಗೂ ಸಾಧನ ಸಲಕರಣೆಗಳು ಸೇರಿದಂತೆ ಇತರೆ ಯೋಜನೆಗಳಡಿ ವಿಕಲಚೇತನ ಫಲಾನುಭವಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಹ ವಿಕಲಚೇತನ ಫಲಾನುಭವಿಗಳು ನಿಗದಿತ ಅರ್ಜಿ ನಮೂನೆಯನ್ನು ಆಯಾ ತಾಲೂಕು ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತರನ್ನು (ಎಂ.ಆರ್.ಡಬ್ಲ್ಯೂ.), ನಗರ ಪುನರ್ವಸತಿ ಕಾರ್ಯಕರ್ತರನ್ನು (ಯು.ಆರ್.ಡಬ್ಲ್ಯೂ.) ಹಾಗೂ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರಿಂದ (ವಿ.ಆರ್.ಡಬ್ಲ್ಯೂ) ಪಡೆದು ಭರ್ತಿ ಮಾಡಿ ಅವಶ್ಯಕ ದಾಖಲಾತಿಗಳೊಂದಿಗೆ ಸಲ್ಲಿಸಬೇಕು. ನಂತರ ಎಂ.ಆರ್.ಡಬ್ಲ್ಯೂ., ಯು.ಆರ್.ಡಬ್ಲ್ಯೂ. ಹಾಗೂ ವಿ.ಆರ್.ಡಬ್ಲ್ಯೂ. ಗಳು ಕಲಬುರಗಿ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಕಚೇರಿಯಲ್ಲಿ ೨೦೧೯ ರ ಆಗಸ್ಟ್ ೧೦ ರೊಳಗಾಗಿ ಸಲ್ಲಿಸಬೇಕು. ಕೊನೆಯ ದಿನಾಂಕದ ನಂತರ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಅವರು ತಿಳಿಸಿದ್ದಾರೆ.