ಕಲಬುರಗಿ: ಯುವಕನನ್ನು ಮಾರಾಕಾಸ್ತ್ರಗಳಿಂದ ಕೊಚ್ಚಿ ಭಯಾನಕ ರೀತಿಯಲ್ಲಿ ಕೊಲೆಗೈದು ಪರಾರಿಯಾಗಿದ್ದ ಅಫಜಲಪುರ ತಾಲೂಕಿನ ಅಕ್ಷಯಕುಮಾರ ಕ್ಷತ್ರಿಯ ಕೊಲೆ ಪ್ರಕರಣದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಅಫಜಲಪುರ ತಾಲೂಕು ಗೌರ್ (ಕೆ) ಗ್ರಾಮದ ನಿಲ್ಲಪ್ಪ ಬಂಡೆ, ಮಲ್ಲಿಕಾರ್ಜುನ ಬಂಡೆ, ಹನುಮಂತ ಬಂಡೆ ಬಂಧಿತರು. ತೆಲೆ ಮರೆಸಿಕೊಂಡಿರುವ ಇನ್ನೋರ್ವ ಆರೋಪಿಯನ್ನು ಶೀಘ್ರವೇ ಬಂಧಿಸುವದಾಗಿ ಎಸ್ಪಿ ಇಶಾ ಪಂತ್ ತಿಳಿಸಿದ್ದಾರೆ.
ಜೂನ್ ೧೬ ರಂದು ಅಫಜಲಪುರ ತಾಲೂಕಿನ ಗೌರ್ (ಕೆ) ಗ್ರಾಮದಲ್ಲಿ ಜಮೀನಿನ ವಿಚಾರಕ್ಕೆ ಸಂಭಂಧಿಸಿದಂತೆ ೨೫ ವರ್ಷದ ಅಕ್ಷಯಕುಮಾರ ಕ್ಷತ್ರಿಯ ಎಂಬ ಯುವಕ ರುಂಡ ಮುಂಡ ಬೇರ್ಪಡಿಸಿ ಭಯಾನಕ ರೀತಿಯಲ್ಲಿ ಕೊಚ್ಚಿ ಕೊಲೆ ಮಾಡಲಾಗಿತ್ತು. ಕೊಲೆ ಆರೋಪಿಗಳಾದ ನೀಲಪ್ಪ ಬಂಡೆ, ಮಲ್ಲಿಕಾರ್ಜುನ ಬಂಡೆ ಇವರಿಗೆ ಸೇರಿದ ಜಮೀನನ್ನು ಸಂಜೀವಕುಮಾರ ಉಕ್ಕಲಿ ಎಂಬಾತ ಖರೀದಿ ಮಾಡಿದ್ದ, ಆದ್ರೆ ಹೊಲ ಬಿಟ್ಟುಕೊಡಲು ಆರೋಪಿಗಳು ತಗಾದೆ ತೆಗೆದಿದ್ದರು.
ಈ ನಡುವೆ ಸಂಜೀವ್ ಕುಮಾರ ತಾನು ಖರೀದಿ ಮಾಡಿದ್ದ ಹೊಲದಲ್ಲಿದ್ದ ಸೆಡ್ ತೆರವು ಮಾಡಲು ರಮೇಶ ಎಂಬಾತನಿಗೆ ಹತ್ತು ಸಾವಿರ ರೂಪಾಯಿ ಕೊಟ್ಟಿದ್ದ, ಹಣ ಪಡೆದ ರಮೇಶ ಸೆಡ್ ತೆರವುಗೊಳಿಸಲು ಸ್ನೇಹಿತ ಅಕ್ಷಯನನ್ನ ಕರೆದುಕೊಂಡು ಹೋಗಿದ್ದ, ಹೊಲದಲ್ಲಿ ಸೆಡ್ ತೆರವು ಮಾಡಲೆಂದು ಹೋಗಿದ್ದ ರಮೇಶ ಹಾಗೂ ಅಕ್ಷಯ ಇಬ್ಬರ ಮೇಲೆ ಆರೋಪಿಗಳು ಏರಗಿದ್ದರು. ರಮೇಶ ಓಡೋಗಿ ತಪ್ಪಿಸಿಕೊಂಡರೆ ಅಕ್ಷಯ ಅವರ ಕೈಯಲ್ಲಿ ಸಿಕ್ಕು ಬಿದ್ದಿದ್ದ, ಆರೋಪಿಗಳು ಅತನನ್ನ ಭಯಾನಕ ರೀತಿಯಲ್ಲಿ ಕೊಚ್ಚಿ ಕೊಲೆಗೈದಿದ್ದರು.
ಘಟನಾ ಸ್ಥಳಕ್ಕೆ SP ಇಶಾ ಪಂತ್ ಸೇರಿ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಕೊಲೆಯ ನಂತರ ಸ್ಥಳ ಬದಲಾಯಿಸುತ್ತ ತೆಲೆ ಮರೆಸಿಕೊಂಡು ಓಡಾಡುತ್ತಿದ್ದ ಆರೋಪಿಗಳು ಧರ್ಮಾಪುರ ಗ್ರಾಮದಲ್ಲಿ ಇರೋದನ್ನು ಪತ್ತೆ ಮಾಡಿದ ಪೊಲೀಸರು ಕಡೆಗೂ ಬಂಧಿಸಿ ಜೈಲಿಗಟ್ಟಿದ್ದಾರೆ.