ಕಲಬುರಗಿ,ಜು.೨೬.(ಕ.ವಾ)-ತೀವ್ರತರವಾದ ಮಾನಸಿಕ ಖಾಯಿಲೆಗಳಿಂದ ಗುಣ ಹೊಂದಿದ ರೋಗಿಗಳಿಗೆ ಜಿಲ್ಲಾ ಆಸ್ಪತ್ರೆ, ಮೆಡಿಕಲ್ ಕಾಲೇಜು ಆಸ್ಪತ್ರೆ, ಇನ್ಯಾವುದೇ ಸರ್ಕಾರಿ ಕಟ್ಟಡಗಳಲ್ಲಿ ಅಥವಾ ಸರ್ಕಾರಿ ಕಟ್ಟಡ ಲಭ್ಯವಿಲ್ಲದ ಪಕ್ಷದಲ್ಲಿ ಜಿಲ್ಲಾ ಆಸ್ಪತ್ರೆ ಹತ್ತಿರದಲ್ಲಿ ಬಾಡಿಗೆ ಕಟ್ಟಡದಲ್ಲಿ ಸಮುದಾಯ ಮಾನಸಿಕ ಆರೋಗ್ಯ ಕೇಂದ್ರ (ಡೇ ಕೇರ್ ಸೆಂಟರ್), ಪುನರ್ವಸತಿ ಕೇಂದ್ರವನ್ನು ಸ್ಥಾಪಿಸಿ ಕಾರ್ಯನಿರ್ವಹಿಸಲು ಆಸಕ್ತಿಯಿರುವ ಸರ್ಕಾರೇತರ ಸಂಸ್ಥೆ (ಎನ್.ಜಿ.ಓ.) ಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಕಲಬುರಗಿ ಜಿಲ್ಲಾ ಮಾನಸಿಕ ಕಾರ್ಯಕ್ರಮ ಅಧಿಕಾರಿಗಳು ತಿಳಿಸಿದ್ದಾರೆ.
ಸರ್ಕಾರೇತರ ಸಂಸ್ಥೆಯಾಗಿ ಅಧೀಕೃತ ನೋಂದಣಿ ಮಾಡಿಸಿದ ಪ್ರಮಾಣ ಪತ್ರ ಹೊಂದಿರಬೇಕು. ಸಂಸ್ಥೆಯು ಕನಿಷ್ಠ ಮೂರು ವರ್ಷದಿಂದ ಕಾರ್ಯನಿರ್ವಹಿಸುತ್ತಿರಬೇಕು. ಮುಖ್ಯವಾಗಿ ಮಾನಸಿಕ ರೋಗಿಗಳಿಗೆ ಸೇವೆ ಗೈಯುವ ಉದ್ದೇಶ ಮತ್ತು ಆಸಕ್ತಿ ಹೊಂದಿರಬೇಕು. ಆರೋಗ್ಯ ಕ್ಷೇತ್ರದಲ್ಲಿ ಹಾಗೂ ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿರಬೇಕು. ಆಡಳಿತ ಮಂಡಳಿ ಹೊಂದಿರಬೇಕು. ಸಂಸ್ಥೆ ಲಾಭಕ್ಕಾಗಲಿ ಅಥವಾ ಮಂಡಳಿಯ ಸದಸ್ಯರ ಲಾಭಕ್ಕಾಗಲಿ ನಡೆಸಿಸಬಾರದು. ಸಂಸ್ಥೆಯು ಮಾನಸಿಕ ಆರೋಗ್ಯ ವೃತ್ತಿಪರ ಕೌಶಲ್ಯ ಹೊಂದಿದ ಸಿಬ್ಬಂದಿಗಳಾದ ಮನೋವೈದ್ಯರು, ಮನಶಾಸ್ತ್ರಜ್ಞರು, ಮನೋವೈದ್ಯಕೀಯ ಸಮಾಜ ಕಾರ್ಯಕರ್ತರ ಪೈಕಿ ಒಬ್ಬ ಸಿಬ್ಬಂದಿ ಲಭ್ಯವಿರಬೇಕು.
ಅರ್ಹ ಸ್ವಯಂ ಸೇವಾ ಸಂಸ್ಥೆಗಳು (ಎನ್.ಜಿ.ಓ.) ಕಾರ್ಯನಿರ್ವಹಣೆಯ ಪೋಟೋ ಸಹಿತ ಬುಕ್‌ಲೇಟ್‌ದೊಂದಿಗೆ ೨೦೧೯ರ ಆಗಸ್ಟ್ ೨ರ ಸಂಜೆ ೪.೩೦ ಗಂಟೆಯೊಳಗಾಗಿ ಕಲಬುರಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳವರ ಕಾರ್ಯಾಲಯದಲ್ಲಿ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಸದರಿ ಕಚೇರಿಯನ್ನು ಸಂಪರ್ಕಿಸಲು ಕೋರಲಾಗಿದೆ.