ಆರೋಪಿಗಳಿಗೆ ಗಡಿಪಾರು ಮಾಡುವಂತೆ ಒತ್ತಾಯಿಸಿ ವೀರಶೈವ ಲಿಂಗಾಯತ ಯುವ ವೇದಿಕೆ ಪ್ರತಿಭಟನೆ, ರಸ್ತೆ ತಡೆ

0
175

ಚಿತ್ತಾಪುರ: ಪಟ್ಟಣದಲ್ಲಿ ಬಸವೇಶ್ವ ಪುತ್ಥಳಿಗೆ ಅವಮಾನ ಮಾಡಿರುವ ಆರೋಪಿಗಳನ್ನು ಗಡಿ ಪಾರು ಮಾಡಬೇಕೆಂದು ವೀರಶೈವ ಲಿಂಗಾಯತ ಯುವ ವೇದಿಕೆ ಜಿಲ್ಲಾಧ್ಯಕ್ಷ ದಯಾನಂದ ಪಾಟೀಲ್ ಒತ್ತಾಯಿಸಿದರು.

ಪಟ್ಟಣದ ಲಾಡ್ಜಿಂಗ್ ಕ್ರಾಸ್ ಬಳಿ ವೀರಶೈವ ಲಿಂಗಾಯತ ಯುವ ವೇದಿಕೆವತಿಯಿಂದ ಶುಕ್ರವಾರ ಹಮ್ಮಿಕೊಂಡ ಪ್ರತಿಭಟನೆ ಹಾಗೂ ರಸ್ತೆ ತಡೆ ಕಾರ್ಯಕ್ರಮದ ನೇತೃತ್ವವಹಿಸಿ ಮಾತನಾಡಿದ ಅವರು, ಕೆಲ ಕಿಡಿಗೇಡಿಗಳು ಬಸವೇಶ್ವರ ಪುತ್ಥಳಿಗೆ ಕೆಂಪು ಬಟ್ಟೆ ಹಾಕಿ ಅವಮಾನ ಮಾಡಿರುವುದನ್ನು ಖಂಡಿಸುತ್ತೇವೆ ಎಂದರು.

Contact Your\'s Advertisement; 9902492681

ಇನ್ನೂಳಿದ ಆರೋಪಿಗಳನ್ನು ಕೂಡಲೇ ಬಂಧಿಸಿ ದಂಡ ಹಾಕಿ, ಗಡಿಪಾರು ಮಾಡಬೇಕು. ಉತ್ತರ ಪ್ರದೇಶ ಮಾದರಿಯಲ್ಲಿ ಕಾನೂನು ಕ್ರಮಕೈಗೊಳ್ಳಬೇಕು. ನಿರ್ಲಕ್ಷವಹಿಸಿದರೇ ರಾಜ್ಯಾದ್ಯಾಂತ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು. ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆ ನಡೆಸಿದರು. ರಸ್ತೆತಡೆಯಿಂದಾಗಿ ವಾಹನ ಸಂಚಾರ ಕೆಲಹೊತ್ತು ಸ್ಥಗೀತಗೊಂಡಿತ್ತು.

ಯುವ ವೇದಿಕೆ ರಾಜ್ಯ ಸಮಿತಿ ಸದಸ್ಯ ಶ್ರೀಧರ ನಾಗನಹಳ್ಳಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನೀಲ್ ಮಹಾಗಾಂವಕರ್, ಜಿಲ್ಲಾ ಸಂಚಾಲಕರಾದ ಅವಿನಾಶ ಅರಳಿ, ಗುರುರಾಜ ಅಂಬಾಡಿ, ಮಲ್ಲಿಕಾರ್ಜುನ ಕೊಂಡೆದ್, ಗುರುರಾಜ ಸುಂಟನೂರ್, ಸತೀಶ ಮಾವೂರ್, ತಾಲೂಕು ಅಧ್ಯಕ್ಷ ಮಹೇಶ ಬಾಳಿ, ಪ್ರಮುಖರಾದ ಮಲ್ಲಿನಾಥ ಅವಂಟಿ, ಶಂಭು ಭಂಗಿ, ಜಗದೀಶ ಪಾಟೀಲ್, ವಿಶ್ವನಾಥ ಭೈರಾಮಡಗಿ, ಈರಣ್ಣ ಕಲ್ಯಾಣಿ, ಮಲ್ಲಿಕಾರ್ಜುನ, ಆನಂದ ಅಳ್ಳೋಳ್ಳಿ, ಮಹೇಸ ಕುಡ್ಡಿ ಚಿತ್ತಾಪುರ ತಾಲೂಕಿನ ಅನೇಕ ಯುವಕರು ಇದ್ದರು.

ಪೋಲಿಸರ-ಪ್ರತಿಭಟನೆಗಾರರ ಮದ್ಯೆ ವಾಗ್ವಾದ. ಟ್ಯರ್‌ಗೆ ಬೆಂಕಿ ಹಚ್ಚಲು ಪ್ರತಿಭಟನೆಕಾರರು ಮುಂದಾಗ ಕೆಲ ಹೊತ್ತು ಪೋಲಿಸರ-ಪ್ರತಿಭಟನೆಕಾರರ ಮಧ್ಯೆ ವಾಗ್ವಾದ ನಡೆಯಿತು.

ಟೈರ್‌ಗೆ ಬೆಂಕಿ ಹಚ್ಚಲು ಅವಕಾಶ ನೀಡುವುದಿಲ್ಲ ಎಂದು ಪೋಲಿಸರು ಹೇಳಿದಾಗ, ನಾವು ಟೈರ್‌ಗೆ ಬೆಂಕಿ ಹಚ್ಚುತ್ತೇವೆ ಎಂದು ಪ್ರತಿಭಟನೆಕಾರರು ಪಟ್ಟು ಹಿಡಿದರು. ಆಷ್ಟರಲ್ಲಿ ಪೋಲಿಸರು ಟೈರ್ ಹಾಗೂ ಪೆಟ್ರೋಲ್ ಬಾಟಲನ್ನು ವಶಪಡಿಸಿಕೊಂಡ ನಂತರ ವಾತಾವರಣ ತಿಳಿಯಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here