ಕಾರ್ಗಿಲ್ ವಿಜಯ ದಿವಸ:ಪ್ರಾಣ ಪಣಕ್ಕಿಟ್ಟು ಕಾರ್ಗಿಲ್ ಗೆದ್ದವರಿಗೆ ಸಲಾಂ

0
47
ವಾಡಿ: ಪಟ್ಟಣದ ಎಸಿಸಿ ಉದ್ಯಾನವನದಲ್ಲಿ ವಾಯುವಿಹಾರದ ಗೆಳೆಯರು ಹೂ ಎಲೆಗಳಿಂದ ರಾಷ್ಟ್ರಧ್ವಜ ನಿರ್ಮಿಸುವ ಮೂಲಕ ವಿಶಿಷ್ಠವಾಗಿ ಕಾರ್ಗಿಲ್ ವಿಜಯೋತ್ಸವ ಆಚರಿಸಿದರು.

ವಾಡಿ: ದೇಶದ ಗಡಿರೇಖೆಯ ಭದ್ರತೆಗಾಗಿ ಪ್ರಾಣ ಪಣಕ್ಕಿಟ್ಟು ಕಾರ್ಗಿಲ್ ಯುದ್ಧ ಗೆದ್ದುಕೊಟ್ಟ ದಿಟ್ಟ ಯೋಧರಿಗೆ ಪ್ರತಿಯೊಬ್ಬ ಭಾರತೀಯನೂ ಗೌರವದ ಸಲಾಂ ಸಲ್ಲಿಸಲೇಬೇಕು ಎಂದು ಪುರಸಭೆ ಸದಸ್ಯ, ಬರಹಗಾರ ದೇವಿಂದ್ರ ಕರದಳ್ಳಿ ಹೇಳಿದರು.

ಪಟ್ಟಣದ ಎಸಿಸಿ ಕಾಲೋನಿಯ ಉದ್ಯಾನವನದಲ್ಲಿ ವಾಯುವಿಹಾರ ಗೆಳೆಯರ ಬಳಗ ಏರ್ಪಡಿಸಿದ್ದ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು. ಸ್ವಾತಂತ್ರ್ಯಕ್ಕೂ ಮುಂಚೆ ಭಾರತದ ಭಾಗವಾಗಿದ್ದ ಪಾಕಿಸ್ತಾನ, ಪ್ರತ್ಯೇಕ ರಾಷ್ಟ್ರವಾದಂದಿನಿಂದ ಕಾಲು ಕೆದರಿ ಕದನಕ್ಕೆ ಕಾಯುವ ಶತ್ರು ರಾಷ್ಟ್ರವಾಗಿ ಬದಲಾಯಿತು. ಭಾರತ ಮತ್ತು ಪಾಕಿಸ್ತಾನದ ನಡುವೆ ಸ್ನೇಹ ಸೇತುವೆ ಕಟ್ಟಲು ಮುಂದಾದ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಹೃದಯ ವೈಶಾಲ್ಯೆತೆಗೂ ಪಾಕ್ ಪರಿವರ್ತನೆಯಾಗಲಿಲ್ಲ ಎಂದು ವಿಷಾಧಿಸಿದ ಕರದಳ್ಳಿ, ಪಾಕ್ ದೇಶದ ಸೈನಿಕರು ಭಾರತದ ಗಡಿ ಭೂಮಿ ಕಬಳಿಕೆಗೆ ಮುಂದಾದರೆ ಅದಕ್ಕೆ ತಕ್ಕ ಉತ್ತರ ಕೊಡುವ ಮೂಲಕ ಭಾರತೀಯ ಯೋಧರು ನೈಜ ದೇಶಪ್ರೇಮ ಮೆರೆದಿದ್ದಾರೆ. ಕಾರ್ಗಿಲ್ ಯುದ್ಧದಲ್ಲಿ ವಿಜಯದ ಪತಾಕೆ ಹಾರುವಲ್ಲಿ ಯಶಸ್ವಿಯಾದ ಅನೇಕ ಯೋಧರು ಹುತಾತ್ಮರಾದರು ಎಂದು ಸ್ಮರಿಸಿದರು.

Contact Your\'s Advertisement; 9902492681

ಪತಂಜಲಿ ಯೋಗ ಶಿಕ್ಷಕ ವೀರಣ್ಣ ಯಾರಿ ಮಾತನಾಡಿ, ದೇಹಕ್ಕಾದ ಗಾಯವನ್ನು ಲೆಕ್ಕಿಸದೆ ದೇಶದ ಗಾಯಕ್ಕೆ ಮುಲಾಮು ಹಚ್ಚಿದ ನಮ್ಮ ಭಾರತೀಯ ವೀರ ಯೋಧರ ತ್ಯಾಗ ಬಲಿದಾನವನ್ನು ನಾವು ಎಂದಿಗೂ ಮರೆಯುವಂತಿಲ್ಲ. ಕಾರ್ಗಿಲ್ ಯುದ್ಧದ ಗೆಲುವಿನ ಹಿಂದೆ ಅನೇಕ ಯೋಧರ ಪ್ರಾಣತ್ಯಾಗದ ಬಲಿದಾನವಿದೆ. ಕುಟುಂಬ ಸದಸ್ಯರ ಕಣ್ಣೀರಿದೆ. ಹೆತ್ತ ಕರುಳುಗಳ ನೋವಿದೆ. ಹಲವು ಸಂಕಟಗಳ ಮಧ್ಯೆ ಯುದ್ಧ ವಿಜಯದ ಹೆಮ್ಮೆಯ ನಗೆಯಿದೆ ಎಂದು ಹೇಳಿದರು.

ಭೀಮರಾವ ದೊರೆ, ವಿ.ಕೆ.ಕೇದಿಲಾಯ, ಅರ್ಜುನ ಕಾಳೇಕರ, ಕಾಶಿನಾಥ ಶೆಟಗಾರ, ಮಲ್ಲಿಕಾರ್ಜುನ ಬಳವಡಗಿ, ಜಯದೇವ ಮಠಪತಿ, ಪರಮೇಶ್ವರ ಬಿಲಗುಂದಿ, ಪವನಕುಮಾರ ಕುಲಕರ್ಣಿ, ಶ್ರೀಧರ ಕುಲಕರ್ಣಿ, ನಾಸೀರ್ ಹುಸೇನ, ಇಮಾನವೆಲ್, ರಾಮಚಂದ್ರ, ಶಾಂತವೀರಪ್ಪ ಸಾಹು, ಸತೀಶ ಸಾವಳಗಿ, ಗೋವಿಂದ ರಾಠೋಡ, ರಾಜು ಕೊಲ್ಲೂರ ಪಾಲ್ಗೊಂಡಿದ್ದರು. ಉದ್ಯಾನವನದಲ್ಲಿ ಬೆಳೆದಿದ್ದ ಶ್ವೇತವರ್ಣ, ಕೇಸರಿ ಹೂಗಳು ಮತ್ತು ಹಸಿರೆಲೆಗಳನ್ನು ಸಂಗ್ರಹಿಸಿ ಹುಲ್ಲಿನ ಹಾಸಿಗೆ ಮೇಲೆ ತ್ರೀರ್ವಣ ಧ್ವಜವನ್ನು ಸೃಷ್ಠಿಸುವ ಮೂಲಕ ಕಾರ್ಗಿಲ್ ವಿಜಯೋತ್ಸವ ವಿಶಿಷ್ಠವಾಗಿ ಆಚರಿಸಿದ್ದು ಗಮನ ಸೆಳೆಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here