ರಂಗಾವರಣದಲ್ಲಿ ಪರಿಸರ ನಿರ್ಮಾಣಕ್ಕೆ ಬೆಂಬಲ

0
103
  • ರಂಗಾಯಣದಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವದ ನೆನಪಿಗೆ ೭೫ ಸಸಿಗಳು ನೆಡುವ ಕಾರ್ಯಕ್ರಮದಲ್ಲಿ ಕಾಸೋಜು ಹೇಳಿಕೆ

ಕಲಬುರಗಿ: ಇಲ್ಲಿನ ರಂಗಾಯಣವನ್ನು ಹಸಿರು ಮಯಗೊಳಿಸಲು ಉತ್ತಮ ಪರಿಸರ ನಿರ್ಮಾಣಕ್ಕೆ ಸಹಯೋಗ ನೀಡುವುದಾಗಿ ಸೇಡಂನ ಕಾಸೋಜು ಪ್ರತಿಷ್ಠಾನದ ಸಂಸ್ಥಾಪಕ ಶ್ರೀನಿವಾಸ ಕಾಸೋಜು ಹೇಳಿದರು.

ರಂಗಾಯಣದಲ್ಲಿ ಶನಿವಾರ ಆಯೋಜಿಸಿದ್ದ ಸ್ವಾತಂತ್ರ್ಯ ಅಮೃತ ಮಹೋತ್ಸವ ಸವಿನೆನಪಿಗಾಗಿ ೭೫ ಸಸಿಗಳನ್ನು ನೆಡುವ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ರಂಗಾಯಣ ದ ಆವರಣಕ್ಕೆ ಅಗತ್ಯ ಇರುವಷ್ಟು ಸಸಿಗಳನ್ನು ಕಾಸೋಜು ಪ್ರತಿಷ್ಠಾನದಿಂದ ಒದಗಿಸಲಾಗುವುದು. ಪ್ರತಿಯೊಬ್ಬರೂ ತಮ್ಮ ಜನ್ಮದಿನದಂದು ಒಂದು ಗಿಡ ನೆಡುವ ಮೂಲಕ ಮುಂದಿನ ಪೀಳಿಗೆಗೆ ಕೊಡುಗೆ ನೀಡಬಹುದು ಎಂದರು.

Contact Your\'s Advertisement; 9902492681

ಉದ್ಘಾಟಿಸಿದ ಹಿರಿಯ ಸಾಹಿತಿ ಪ.ಮಾನು ಸಗರ ಮಾತಾಡಿ, ಪ್ರಕೃತಿ ಸೊಬಗನ್ನು ಸವಿಯಲು ದೂರದ ಊರುಗಳಿಗೆ ಹೋಗುತ್ತೇವೆ. ಅಂತಹದ್ದೇ ನಿಸರ್ಗವನ್ನು ನಿರ್ಮಿಸುವ ಮೂಲಕ ನಾವಿರುವ ಪ್ರದೇಶವನ್ನೇ ಪರಿಸರ ತಾಣವನ್ನಾಗಿ ಮಾಡಿಕೊಳ್ಳಬಹುದು. ಮರಗಳನ್ನು ಮಕ್ಕಳಂತೆ ನೋಡಿಕೊಳ್ಳುವ ಮೂಲಕ ಇದನ್ನು ಸಾಧ್ಯವಾಗಿಸಬಹುದು ಎಂದರು.

ಅಧ್ಯಕ್ಷತೆ ವಹಿಸಿದ್ದ ರಂಗಾಯಣ ನಿರ್ದೇಶಕ ಪ್ರಭಾಕರ ಜೋಷಿ ಮಾತನಾಡಿ, ವನಮಹೋತ್ಸವ ಆಚರಿಸುವ ದಿಸೆಯಲ್ಲಿ ಇಲ್ಲಿನ ಪರಿಸರ ನಿರ್ಮಾಣವಾಗಬೇಕಿದೆ. ಇದು ತೋರಿಕೆಗೆ ಮಾಡಿದ ಕಾರ್ಯಕ್ರಮವಲ್ಲ. ಮುಂದಿನ ದಿನಗಳಲ್ಲಿ ಇಲ್ಲಿರುವ ಕಲಾವಿದರು, ಸಿಬ್ಬಂದಿ ಹಾಗೂ ಪ್ರೇಕ್ಷಕ ಸಮೂಹಕ್ಕೆ ಅನುಕೂಲವಾಗಲು ಇದನ್ನು ಮಾಡಲಾಗುತ್ತಿದೆ ಎಂದರು.

ಆಡಳಿತಾಧಿಕಾರಿ ಜಗದೀಶ್ವರಿ ನಾಸಿ ಸ್ವಾಗತಿಸಿದರು. ಅಕ್ಷತಾ ಕುಲಕರ್ಣಿ ನಿರೂಪಿಸಿದರು. ಸಗರನಾಡು ಸಂಸ್ಥೆಯ ವೆಂಕಟೇಶ ನೀರಟಗಿ, ಕಲ್ಯಾಣಿ ಬಜಂತ್ರಿ, ಸ್ವಾತಿ ಶಂಕರ ಜೋಶಿ ಕಲಾವಿದರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here