ಮಕ್ಕಳಿಗೆ ತಾಯಿ ಮೊದಲ ಗುರು : ಪ್ರೊ, ವಿ. ಟಿ. ಕಾಂಬಳೆ

0
101

ಕಲಬುರಗಿ: ಮಕ್ಕಳಿಗೆ ತಾಯಿಯೇ ಮೊದಲ ಗುರು ಆದರೆ ಎಲ್ಲವನ್ನೂ ತಾಯಿಂದ ಮಗು ಕಲಿಯುವುದಕ್ಕೆ ಸಾಧ್ಯವಿಲ್ಲ ಅದಕ್ಕೆ ಶಾಲೆ ಅನ್ನುವ ಒಂದು ಶಿಕ್ಷಣ ಕೇಂದ್ರ ಬಹಳ ಮುಖ್ಯ ಇರುತ್ತದೆ ಎಂದು ಗುಲ್ಬರ್ಗ ವಿಶ್ವವಿದ್ಯಾಲಯದ ಸಮಾಜ ವಿಜ್ಞಾನ ನಿಕಾಯದ ಡೀನರಾದ ಪ್ರೊ, ವಿ. ಟಿ. ಕಾಂಬಳೆ ಹೇಳಿದರು.

ಕೃಷ್ಣ ನಗರದ ಮಾತೋಶ್ರೀ ಅಹಲ್ಯಾಬಾಯಿ ಮಹಿಳಾ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಅಡಿಯಲ್ಲಿ ಪ್ರತೀಕ್ ಶಿಶುವಿಹಾರ ಶಾಲೆ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ ಮಕ್ಕಳಿಗೆ ಶಿಶುವಿಹಾರದಲ್ಲಿ ಪಾಠದ ಜೊತೆಗೆ ಆಟವನ್ನು ಆಡುವುದರಿಂದ ಚಿಕ್ಕ ವಯಸ್ಸಿನಲ್ಲೇ ಮಕ್ಕಳು ದೈಹಿಕವಾಗಿ ಬೆಳೆಯುವುದಕ್ಕೆ ಸಾಧ್ಯವಾಗುತ್ತದೆ. ಮಗುವಿಗೆ ಸರಿಯಾದ ವಾತಾವರಣವನ್ನು ಸೃಷ್ಟಿಸುವುದು ಪೋಷಣೆಯ ಮಾಡುವುದು ಬಹು ದೊಡ್ಡ ಭಾಗವಾಗಿದೆ. ನಿಮ್ಮೊಳಗೆ ಹಾಗೂ ನಿಮ್ಮ ಮನೆಯಲ್ಲಿ – ಸಂತೋಷ, ಪ್ರೀತಿ, ಆರೈಕೆ ಮತ್ತು ಒಂದು ಶಿಸ್ತಿನ ವಾತಾವರಣವನ್ನು ನೀವು ಹುಟ್ಟುಹಾಕಲೇ ಬೇಕು. ನಿಮ್ಮ ಮಗುವಿಗೆ ನೀವು ಮಾಡಲಿಕ್ಕಾಗುವುದು ಒಂದೇ – ಪ್ರೀತಿ ಮತ್ತು ಬೆಂಬಲವನ್ನು ಕೊಡುವುದು ಆಗ ಮಗು ಎಲ್ಲ ಮಕ್ಕಳಂತೆ ಪ್ರಭುದ್ಧತೆ ಪಡೆದು ಕೊಳ್ಳುತಾ ಹೋಗುತ್ತದೆ. ಮಗುವಿನ ಬುದ್ದಿವಂತಿಕೆಯು ಸಹಜವಾಗಿ ಅರಳಲು ಸಾಧ್ಯವಾಗುವಂತಹ ಪ್ರೀತಿಯ ವಾತಾವರಣವನ್ನು ಸೃಷ್ಟಿಸಿದರೆ ಸಾಕು ಹಂತ ಹಂತವಾಗಿ ಮಗುವಿನ ಬುದ್ಧಿವಂತಿಕೆ ಬೆಳೆಯುತ್ತಾ ಹೋಗುತ್ತದೆ. ಒಂದು ಅವರು ಹೇಳಿದರು.

Contact Your\'s Advertisement; 9902492681

ಗುಲ್ಬರ್ಗ ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕ ಪ್ರೊ ಜಗನ್ನಾಥ ಸಿಂಧೆ ಮುಖ್ಯ ಅತಿಥಿಯಾಗಿ ಮಾತನಾಡಿ ಒಂದು ಕಾಲದಲ್ಲಿ ಶ್ರೀಮಂತರು ಬಂಡವಾಳ ಶಾಹಿಗಳು ಮಾತ್ರ ಶಿಕ್ಷಣ ಕೇಂದ್ರ ತೆರೆಯುತ್ತಿದ್ದರು ಅವರು ಮಾತ್ರ ಕಟ್ಟಿ ಬೆಳೆಸುತ್ತಿದ್ದರು. ಆದರೆ ಇಂದು ಡಾ. ವಿ. ಟಿ ಕಾಂಬಳೆ ಪ್ರಾಧ್ಯಾಪಕ ವೃತ್ತಿ ಮಾಡುತ್ತ ಶಿಕ್ಷಣ ಸಂಸ್ಥೆ ಕಟ್ಟಿ ಈ ಭಾಗದ ಮಕ್ಕಳಿಗೆ ಅನುಕೂಲ ಆಗುವ ದೃಷ್ಟಿಯಿಂದ ಶಿಕ್ಷಣ ನೀಡುತ್ತಿರುವುದು ಬಹಳ ಸಂತೋಷ ವಿಷಯ. ಶಿಕ್ಷಣ ಕೇಂದ್ರಗಳು ಗಳಿಕೆಯ ಕೇಂದ್ರವಾಗದೆ ದಾನದ ಕೇಂದ್ರ ಆಗಬೇಕು ಎಂದು ಅವರು ಹೇಳಿದರು.

ಕೆಲವು ಪೋಷಕರು, ತಮ್ಮ ಮಕ್ಕಳನ್ನು ಅತ್ಯಂತ ಶಕ್ತಿವಂತರು ಬುದ್ಧಿವಂತರನ್ನಾಗಿ ಮಾಡುವ ಹಂಬಲದಿಂದ ಅನಗತ್ಯವಾಗಿ ತಮ್ಮ ಮಕ್ಕಳನ್ನು ಹೆಚ್ಚು ಕಷ್ಟಕ್ಕೆ ಗುರಿ ಪಡಿಸುತ್ತಾರೆ. ತಮ್ಮಿಂದ ಆಗದೆ ಇದ್ದದ್ದನ್ನು ತಮ್ಮ ಮಕ್ಕಳಾದರೂ ಮಾಡಲಿ ಎಂದು ಬಯಸುತ್ತಾರೆ. ಮಕ್ಕಳ ಮೂಲಕ ತಮ್ಮ ಮಹತ್ವಾಕಾಂಕ್ಷೆಗಳನ್ನು ಪೂರೈಸಲು ಪ್ರಯತ್ನಿಸುತ್ತಾರೆ ಕೆಲವು ಪೋಷಕರು ತಮ್ಮ ಮಕ್ಕಳ ಜೊತೆ ಬಹಳ ಕ್ರೂರವಾಗಿ ವರ್ತಿಸುತ್ತಾರೆ. ಇನ್ನು ಕೆಲವು ಪೋಷಕರು, ತಾವು ತಮ್ಮ ಮಕ್ಕಳನ್ನು ತುಂಬಾ ಪ್ರೀತಿಸುತ್ತಿದ್ದೀವಿ ಎಂದು ನಂಬಿ, ಅತಿಯಾಗಿ ಮುದ್ದುಮಾಡಿ, ಅವರನ್ನು ಬಲಹೀನರಾಗಿ ಮಾಡುತ್ತಾರೆ ಎಂದು ಅವರು ಹೇಳಿದರು.

ಕಾರ್ಯಕ್ರಮವನ್ನು ಗುಲ್ಬರ್ಗ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವೆ ಡಾ. ಮೇಧಾವಿನಿ ಕಟ್ಟಿ ಉದ್ಘಾಟಿಸಿದರು, ಅತಿಥಿಗಳಾಗಿ ಕುಸನೂರ ಗ್ರಾಮ ಪಂಚಾಯತ್ ಸದಸ್ಯರಾದ ಆತ್ಮನಂದ ಶಿವಕೇರಿ, ಶ್ರೀಮತಿ ವಿಜಯಾ ಗುರುಮಿಠ್ಠಕಲ್. ದಾದಾ ಸಾಹೇಬ್ ಕಾನ್ಛೀರಾಮ ಪದವಿ ಕಾಲೇಜಿನ ಪ್ರಾಂಶುಪಾಲ ಸುನೀತಾ ಕಾಂಬಳೆ. ಪತ್ರಿಕೋದ್ಯಮ ವಿಭಾಗದ ಸಂಯೋಜನಾಧಿಕಾರಿ ಡಾ. ಡಿ.ಬಿ ಪಾಟೀಲ್, ಡಾ. ರಾಜಕುಮಾರ ಎಂ. ದಣ್ಣೂರ, ಡಾ. ಸಂಜೀವ್ ಕುಮಾರ್ ನಿರ್ಮಲಕರ್ ಇತರರು ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here