ಉದ್ಯೋಗ ಕಳೆದುಕೊಂಡವರಲ್ಲಿ ಉದ್ಯೋಗ ಪಡೆಯುವ ಆತ್ಮವಿಶ್ವಾಸ ನೀಡಿದ ಗುರುದಕ್ಷಿಣಾ

0
9
  • – 50 ಕ್ಕೂ ಹೆಚ್ಚು ನಿರುದ್ಯೋಗಿಗಳಲ್ಲಿ ಮತ್ತೊಮ್ಮೆ ಉದ್ಯೋಗ ಪಡೆದುಕೊಳ್ಳುವ ಆತ್ಮವಿಶ್ವಾಸ ಮೂಡಿಸಿದ ರಿಬಆನ್‌ ಗಮ್‌
  • – ಕಂಪನಿಗಳು ಹಾಗೂ ಉದ್ಯೋಗಾಕಾಂಕ್ಷಿಗಳ ಮಧ್ಯೆ ವೇದಿಕೆ ನಿರ್ಮಾಣ

ಬೆಂಗಳೂರು: ಕೋವಿಡ್‌ ಕಾಲದಲ್ಲಿ ಹಾಗೂ ಕೋವಿಡ್‌ ನಂತರ ಉದ್ಯೋಗ ಕಳೆದುಕೊಳ್ಳುತ್ತಿರುವರ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ಉದ್ಯೋಗ ಬಿಡುವ ಮಹಿಳೆಯರು ಮತ್ತೊಮ್ಮೆ ಉದ್ಯೋಗ ಪಡೆದುಕೊಳ್ಳುವುದು ಬಹಳ ಕಷ್ಟವೇ ಸರಿ. ಇಂತಹವರು ಮತ್ತೊಮ್ಮೆ ಉದ್ಯೋಗ ಪಡೆದುಕೊಳ್ಳುವ ನಿಟ್ಟಿನಲ್ಲಿ ಕೌಶಲ್ಯ ಹೆಚ್ಚಿಸುವ ಹಾಗೂ ಉತ್ತಮ ತರಬೇತಿ ನೀಡುವ ಉದ್ದೇಶದ ಗುರುದಕ್ಷಿಣಾ – 11 ರೂಪಾಯಿ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.

ಕೇವಲ 11 ರೂಪಾಯಿಗಳ ಗುರುದಕ್ಷಿಣೆಯನ್ನು ಪಡೆದುಕೊಳ್ಳುವ ಮೂಲಕ ಉದ್ಯೋಗ ಕಳೆದುಕೊಂಡಿರುವವರಿಗೆ ಮರು ಉದ್ಯೋಗ ಪಡೆದುಕೊಳ್ಳುವತ್ತ ಹಾಗೂ ಕಾರ್ಪೋರೇಟ್‌ ಕೌಶಲ್ಯಗಳನ್ನು ಕಲಿಸಿಕೊಡುವ ಉದ್ದೇಶ ನಮ್ಮದಾಗಿದೆ. ಇಂದು 50 ಕ್ಕೂ ಹೆಚ್ಚು ಜನರಿಗೆ ನಾವು ನಮ್ಮ ಸಂಸ್ಥೆಯಾದ ರಿಬ್‌ಆನ್‌ ಗಮ್‌ ಮೂಲಕ ಉತ್ತಮ ತರಬೇತಿಯನ್ನು ನೀಡಿದ್ದೇವೆ.

Contact Your\'s Advertisement; 9902492681

ಇದರಲ್ಲಿ ಕಳೆದ ಐದಾರು ತಿಂಗಳಿನಿಂದಲೂ ಹೆಚ್ಚು ಸಮಯದಿಂದ ಉದ್ಯೋಗ ಕಳೆದುಕೊಂಡು ಉದ್ಯೋಗ ಹುಡುಕುತ್ತಿದ್ದವರು ಪಾಲ್ಗೊಂಡು ತರಬೇತಿಯ ಪ್ರಯೋಜನ ಪಡೆದುಕೊಂಡಿದ್ದು ಸಂತಸ ತಂದಿತು. ಅಲ್ಲದೇ, ಉದ್ಯೋಗ ನೀಡುವಂತಹ ಕಂಪನಿಗಳು ಇಲ್ಲಿದ್ದು ತಮಗೆ ಬೇಕಾದ ಕೌಶಲ್ಯ ಹಾಗೂ ಅರ್ಹತೆ ಹೊಂದಿರುವ ಉದ್ಯೋಗಿಗಳನ್ನು ಆಯ್ಕೆ ಮಾಡಿದ್ದು ವಿಶೇಷವಾಗಿತ್ತು ಎಂದು ರಿಬ್‌ಆನ್‌ ಗಮ್‌ ಸಂಸ್ಥೆಯ ಸಂಸ್ಥಾಪಕರಾದ ಕೃಷ್ಣಾ ಭಾಕಾರ್‌ ತಿಳಿಸಿದರು.

ರಿಬ್‌ಆನ್‌ ಗಮ್‌ ಸಂಸ್ಥೆಯ ಸಹ ಸಂಸ್ಥಾಪಕರಾದ ಸುಧೀರ್‌ ಉದಯಕಾಂತ್‌ ಮಾತನಾಡಿ, ಉತ್ತಮ ಅರ್ಹತೆ ಮತ್ತು ಕೌಶಲ್ಯ ಹೊಂದಿರುವ ಆದರೆ ಹಲವಾರು ತಿಂಗಳನಿಂದ ಉದ್ಯೋಗ ಕಳೆದುಕೊಂಡಿರುವಂತಹ ಮಾನವ ಸಂಪನ್ಮೂಲಕ್ಕೆ ಪ್ರಾಮುಖ್ಯತೆ ಕೊಡುವುದು ನಮ್ಮ ಉದ್ದೇಶವಾಗಿದೆ. ಒಬ್ಬ ವ್ಯಕ್ತಿ ಉದ್ಯೋಗ ಕಳೆದುಕೊಂಡ ನಂತರ ಎರಡು ಮೂರು ತಿಂಗಳುಗಳ ಕಾಲ ಉದ್ಯೋಗ ಹುಡುವುದು ಬಹಳ ಶ್ರಮದಾಯಕ ಸಂಗತಿಯಾಗಿ ಬಿಡುತ್ತದೆ. ಇದರಿಂದ ಅವರು ಉದ್ಯೋಗ ಹುಡುಕುವ ಆಸಕ್ತಿಯನ್ನು ಕಳೆದುಕೊಂಡು ಸಣ್ಣ ನಗರಗಳಿಗೆ ವಲಸೆ ಹೋಗುತ್ತಾರೆ. ಆದರೆ, ಒಮ್ಮೆ ಕಣ್ಣಿನಿಂದ ಮರೆಯಾದ ನಂತರ ಅವರ ಬಗ್ಗೆಯೂ ಮರೆತು ಹೋಗುವ ರೀತಿಯಲ್ಲಿ ಹಾಗೂ 6 ತಿಂಗಳ ನಂತರ ಹೊಸ ಉದ್ಯೋಗ ಪಡೆದುಕೊಳ್ಳುವುದು ಬಹಳ ಕಷ್ಟವಾಗಿ ಪರಿಣಮಿಸುತ್ತದೆ.

ನಮ್ಮ ಉದ್ಯೋಗ ನೀಡುವ ಸಂಸ್ಥೆಗಳೂ ಕೂಡಾ ಉದ್ಯೋಗದಲ್ಲಿರುವ ವ್ಯಕ್ತಿಗಳಿಗೇ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಉದ್ಯೋಗ ಕಳೆದುಕೊಂಡು ತೊಂದರೆ ಅನುಭವಿಸುತ್ತಿರುವ ಜನರಿಗೆ ಉತ್ತಮ ಉದ್ಯೋಗಾವಕಾಶ ಪಡೆದುಕೊಳ್ಳುವಲ್ಲಿ ಸಹಾಯ ಮಾಡುವುದು ನಮ್ಮ ಗುರಿಯಾಗಿದೆ. ಕೇವಲ 11 ರೂಪಾಯಿಗಳ ಗುರುದಕ್ಷೀಣಿ ಪಡೆದುಕೊಳ್ಳುವ ಮೂಲಕ ಇಂದಿನ ಕಾರ್ಪೋರೇಟ್‌ ಅಗತ್ಯದ ತರಬೇತಿಯನ್ನು ನೀಡುತ್ತಿದ್ದೇವೆ. ಈ ಮೂಲಕ ಉದ್ಯೋಗ ದೊರಕಿಸಿಕೊಡುವುದು ನಮ್ಮ ಉದ್ದೇಶವಾಗಿದೆ ಎಂದರು.

ತರಬೇತಿಯಲ್ಲಿ ಭಾಗವಹಿಸಿದ್ದ ಸ್ಮಿತಾ ಮಾತನಾಡಿ, ಕಳೆದ 8 ತಿಂಗಳ ಹಿಂದೆ ನನ್ನ ವೈಯಕ್ತಿಯ ಕಾರಣಕ್ಕಾಗಿ ಉದ್ಯೋಗವನ್ನು ತೊರೆದಿದ್ದೆ. ಆ ನಂತರ ಉದ್ಯೋಗಾವಕಾಶವನ್ನು ಹುಡುಕುವುದು ಬಹಳ ಕಷ್ಟಕರ ಸಂಗತಿಯಾಗಿ ಪರಿಣಮಿಸಿತ್ತು. ಇಂದು ರಿಬ್‌ಆನ್‌ ಗಮ್‌ ಸಂಸ್ಥೆ ನಡೆಸಿದ ತರಬೇತಿಯಿಂದ ನನ್ನಲ್ಲಿ ಆತ್ಮವಿಶ್ವಾಸ ಹೆಚ್ಚಾಗಿದೆ. ಈಗಾಗಲೇ ಇಲ್ಲಿರುವ ಹಲವಾರು ಸಂಸ್ಥೇಗಳ ಜೊತೆ ಸಂದರ್ಶನ ನಡೆಸಿದ್ದು ಮತ್ತೊಮ್ಮೆ ಉದ್ಯೋಗಿಯಾಗುವ ನಿರೀಕ್ಷೆಯಿದೆ ಎಂದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here