ಬೇಡ ಜಂಗಮ ಸಮಾಜದ ಮುಖಂಡರ ಬಂಧನ ಸಂವಿಧಾನ ವಿರೋಧಿಯಾಗಿದೆ: ಕಂಬಳೇಶ್ವರ ಶ್ರೀ

0
41

ಚಿತ್ತಾಪುರ: ಬೆಂಗಳೂರನ ಪ್ರಿಡಂ ಪಾರ್ಕನಲ್ಲಿ ಹಮ್ಮಿಕೊಂಡ ಬೇಡ ಜಂಗಮ ಸಮಾಜ ಬೃಹತ್ ಪ್ರತಿಭಟನೆಯಲ್ಲಿ ಬಾಗವಹಿಸಲು ಆಗಮಿಸುತ್ತಿರುವ ಜಂಗಮ ಸಮಾಜದ ಮುಖಂಡರನ್ನು ತಡೆದು ಬಂಧಿಸಿರುವದು ಸಂವಿಧಾನ ವಿರೋಧಿಯಾಗಿದೆ ಎಂದು ಕಂಬಳೇಶ್ವರ ಮಠದ ಶ್ರೀ ಸೋಮಶೇಖರ ಶಿವಾಚಾರ್ಯರು ತ್ರಿವವಾಗಿ ಖಂಡಿಸಿದರು.

ಇಲ್ಲಿಯ ತಹಸೀಲ್ದಾರ ಕಚೇರಿಯಲ್ಲಿ ತಾಲೂಕ ಹೈದ್ರಾಬಾಕ ಕರ್ನಾಟಕ ಬೇಡ ಜಂಗಮ ಸಮಾಜ ಸಂಸ್ಥೆ ವತಿಯಿಂದ ಹಮ್ಮಿಕೊಂಡ ಮನವಿ ಪತ್ರಸಲ್ಲಿಸುವ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿ ರಾಜ್ಯದಲ್ಲಿ ಬೇಡ ಜಂಗಮ ಸಮಾಜದವರು ಆರ್ಥಿಕವಾಗಿ ಬಡವರಾಗಿದ್ದಾರೆ. ಸಂವಿಧಾನ ಬದ್ದ ಹಕ್ಕಿಗಾಗಿ ಬಹುದಿನಗಳಿಂದ ಹೋರಾಟ ಮಾಡಲಾಗುತ್ತದೆ. ಆದರೆ ಶಾಂತಿಯುತವಾಗಿ ಹೋರಾಟ ಮೂಲಕ ಸಿ.ಎಂ.ಬಸವರಾಜ ಬೋಮ್ಮಾಯಿಗೆ ಮನವಿ ಪತ್ರಸಲ್ಲಿಸುವ ಹೊರಾಟದ ಹಮ್ಮಿಕೊಳ್ಳಲಾಗಿತ್ತು.

Contact Your\'s Advertisement; 9902492681

ಹೊರಾಟದಲ್ಲಿ ಭಾಗವಹಿಸಲು ರಾಜ್ಯದ ವಿವಿಧ ಜಿಲ್ಲೆಗಳಿಂದ ಬರುತ್ತಿದುವ ಮುಖಂಡರನ್ನು ಬಂಧಿಸಿರುವದು ಕಾನೂನು ವಿರೋದಿಯಾಗಿದೆ ಎಂದು ಖಂಡಿಸಿದ ಅವರು ಸರಕಾರ ಕೂಡಲೆ ವಿಳಂಬ ನೀತಿ ಅನುಸರಿಸದೆ ಸಂಬಂದ ಪಟ್ಟ ಇಲಾಖೆ ಮೂಲಕ ಬೇಡ ಜಂಗಮ ಸಮಾಜಕ್ಕೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡುವಂತೆ ಆದೇಶಿಸಬೇಕು ಎಂದು ಒತ್ತಾಯಿಸಿದರು.

ರಾಜ್ಯಧ್ಯಕ್ಷ ಬಿ.ಡಿ. ಹಿರೇಮಠ ಅವರು ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲು ಅವಕಾಶ ಕೊಡೆದೆ ಬೇಗನೆ ಆದೇಶ ಮಾಡಬೇಕು ಎಂದು ಆಗ್ರಹಿಸಿದರು. ಮನವಿ ಪತ್ರವನ್ನು ತೋಟಯ್ಯ ಓದಿದರು ತಾಲೂಕ ಅಧ್ಯಕ್ಷ ವೀರುಪಾಕ್ಷಿಯ್ಯ ಮಠಪತಿ ತಹಸೀಲದ್ದಾರರಿಗೆ ಮನವಿ ಪತ್ರ ಸಲ್ಲಿಸಿಸಿದರು.

ಈ ಸಂರ್ಭದಲ್ಲಿ ಹಲಕರ್ಟಿಸಿದ್ದಶ್ರೀ ಧಾನ್ಯಾಶ್ರಮಾದ ರಾಜಶೇಖರ ಸ್ವಾಮಿಗಳು, ಶಿವಪುತ್ರಯ್ಯ ಸ್ವಾಮಿ ನಾಲವಾರ, ಬಸಯ್ಯ ಸ್ವಾಮಿ ಹಿರೇಮಠ, ವೀರಭದ್ರಯ್ಯ ಸ್ವಾಮಿ, ತೋಟ್ಟಯ್ಯ ಹಂಪಯ್ಯ, ರಾಜಶೇಖರ ಸ್ವಾಮಿ ಕೊಲ್ಲೂರ, ಬಸಯ್ಯ ಸ್ವಾಮಿ ನಂದಿಕೋಲ ಮಠ ರಾವೂರ, ಕರಬಸ್ಸಯ್ಯಶಾಸ್ತ್ರಿ, ಮಂಜುನಾಥ ಶಾಸ್ತ್ರೀಗಳು, ವಿರೂಪಾಕ್ಷಿ ಸ್ವಾಮಿ ದಿಗ್ಗಾಂವ ಸೇರಿದಂತೆ ನೂರಾರು ಜನರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here