ಸುರಪುರ:ಅವಿಷ್ಕಾರ ಉದ್ಯಮಶೀಲತೆಯ ಅವಕಾಶಗಳ ಕಾರ್ಯಾಗಾರ

0
7

ಸುರಪುರ: ನಗರದ ವೀರಪ್ಪ ನಿಷ್ಠಿ ತಾಂತ್ರಿಕ ಮಹವಿದ್ಯಾಲಯದಲ್ಲಿ ಲಘು ಉದ್ಯೋಗ ಭಾರತಿ ಕರ್ನಾಟಕ ಹಾಗೂ ಅತಿ ಸಣ್ಣ, ಸಣ್ಣ ಮತ್ತು ಮದ್ಯಮ ಉದ್ಯಮಗಳ ಸಂಯೋಗದಲ್ಲಿ ಮಹಾವಿದ್ಯಾಲಯದ ಜಂಟಿ ಕಾರ್ಯದರ್ಶಿಗಳಾದ ದೋಡ್ಡಪ್ಪ ಎಸ್. ನಿಷ್ಠಿ ರವರ ನಿರ್ದೇಶನದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಅವಿಷ್ಕಾರ ಮತ್ತು ಉದ್ಯಮಶೀಲತೆಯ ಅವಕಾಶಗಳ ಕುರಿತು ಒಂದು ದಿನದ ಕಾರ್ಯಾಗಾರವನ್ನು ನಡೆಸಲಾಯಿತು.

ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ನಾರಾಯಣ ಪ್ರಸನ್ನ ಕೆ ಪ್ರಧಾನ ಕಾರ್ಯದರ್ಶಿ ಲಘು ಉದ್ಯೋಗ ಭಾರತಿ ಕರ್ನಾಟಕ ಇವರು ಮಾತನಾಡಿ, ಅವಿಷ್ಕಾರಗಳು ಹುಟ್ಟುವುದು ಹೊಸ ತಂತ್ರಜ್ಞಾನದಿಂದಲ್ಲದೇ, ಮೂಲ ಅಂದರೆ ಹಳೇಯ ಅವಿಷ್ಕಾರಗಳಿಂದ ಹೋಸ ತಂತ್ರಜ್ಞಾನವನ್ನು ಅಳವಡಿಸಿಕೊಂಡಾಗ ಮಾತ್ರ ಅವಿಷ್ಕಾರಗಳಿಗೆ ಮುನ್ನುಡಿ ಮತ್ತು ಜಯಸಿಗಲು ಸಾದ್ಯವಾಗುತ್ತದೆ ಎಂದು ಹೇಳಿದರು.

Contact Your\'s Advertisement; 9902492681

ವಿಶೇಷ ಅಹ್ಹಾನಿತರಾಗಿದ್ದ ರವಿಕುಮಾರ ಜಂಟಿ ಕಾರ್ಯದರ್ಶಿಗಳು, ಲಘು ಉದ್ಯೋಗ ಭಾರತಿ ಕರ್ನಾಟಕ ಇವರು ಮಾತನಾಡಿ, ವಿದ್ಯಾರ್ಥಿಗಳಿಗೆ ಮುಂದಿನ ದಿನಗಳಲ್ಲಿ ಉದ್ಯಮಶೀಲತೆ ಹೆಚ್ಚಿಸುವುದರ ಜೋತೆಗೆ ನಮ್ಮ ಸುತ್ತಮುತ್ತಲಿನ ಜನರನ್ನು ಹಾಗೂ ಸಮುದಾಯವನ್ನು ವ್ಯವಸ್ಥಿತವಾಗಿ ಬೇಳೆಸಲು ಕಿವಿ ಮಾತು ಹೇಳಿದರು.

ಅತಿಥಿಗಳಾಗಿದ್ದ ನಿಕಿಟ್ ಕಂಪನಿಯ ಮಾಲೀಕ ನಿರಂಜನಕುಮಾರ ಮಾತನಾಡಿ, ತಮ್ಮ ಜೀವನದಲ್ಲಿ ನಡೆದ ಘಟನೆಗಳನ್ನು ವಿದ್ಯಾರ್ಥಿಗಳ ಜೋತೆ ಹಂಚಿಕೊಳ್ಳುವುದರ ಮೂಲಕ ಭವಿಷ್ಯದಲ್ಲಿ ದಕ್ಷ ಉದ್ಯಮಿಯಾಗಲು ಪ್ರೇರೆಪಿಸಿದರು. ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರದ ಡಾ. ಶರಣಬಸಪ್ಪ ಸಾಲಿ ಅವರು ಮಾತನಾಡಿ, ಈ ಭಾಗಕ್ಕೆ ಮಹಾವಿದ್ಯಾಲಯದ ಕೊಡುಗೆಗಳು ಅಪಾರ ಎಂದು ಬಣ್ಣಿಸುತ್ತಾ ನಮ್ಮ ವಿದ್ಯಾರ್ಥಿಗಳಿಗೆ ಅವಿಷ್ಕಾರಗಳು ಹಾಗೂ ಉದ್ಯಲಶೀಲರಾಗಲು ಅವಶ್ಯಕತೆಗಳನ್ನು ಪೂರೈಸುವ ಮೂಲಕ ಅನುಕೂಲ ಮಾಡಿಲಾಗುವುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಎಲ್ಲಾ ವಿಭಾಗದ ಮುಖ್ಯಸ್ಥರುಗಳು, ಬೋಧಕ, ಬೋಧಕೇತರ ಸಿಬ್ಬಂದಿ ವರ್ಗದವರು ಮತ್ತು ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು ಕಾರ್ಯಕ್ರಮದ ಯಶಸ್ವಿಗೆ ಸಾಕ್ಷಿಯಾದರು. ಕಾರ್ಯಾಗಾರವನ್ನು ಪ್ರೋ. ಗಂಗಾಧರ ಹೂಗಾರ ರವರು ನೀರೂಪಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here