ಸುರಪುರ: ಇದೇ ಜು೧೩ ರಂದು ನಗರದ ತಹಶೀಲ್ ಕಚೇರಿ ಬಳಿ ಇರುವ ಶ್ರೀ ಮಹರ್ಷಿ ವಾಲ್ಮೀಕಿ ಭವನದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ಅಧ್ಯಕ್ಷ ವೆಂಕಟೇಶ ನಾಯಕ ಭೈರಿಮಡ್ಡಿ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ,ಇದೇ ೧೩ ರಂದು ನನ್ ಜನುಮ ದಿನವಿದ್ದು ಜೊತೆಗೆ ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆಯವರು ಕೆಲ ದಿನಗಳ ಹಿಂದೆ ಕರೆ ಮಾಡಿ ಆರೋಗ್ಯ ತಪಾಸಣಾ ಶಿಬಿರ ನಡೆಸಲು ವೇದಿಕೆ ಕಲ್ಪಿಸಿಕೊಡುವಂತೆ ತಿಳಿಸಿದ್ದರಿಂದಾಗಿ ನಮ್ಮೆಲ್ಲ ಮುಖಂಡರ ಸಲಹೆಯಂತೆ ನನ್ನ ಜನ್ಮ ದಿನಾಚರಣೆ ಸಂದರ್ಭದಲ್ಲಿ ಆರೋಗ್ಯ ತಪಾಸಣಾ ಶಿಬಿರ ನಡೆಸಲಾಗುತ್ತಿದೆ ಎಂದರು.
ಮೊದನಿಂದ ವಿವಿಧ ಜನಪರ ಕಾಳಜಿವುಳ್ಳ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದ್ದು ಈಗ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದ್ದು ಶಿಬಿರದಲ್ಲಿ ಹೃದಯ, ನರಗಳು, ಮೂತ್ರಪಿಂಡ , ಬಿಪಿ, ಸಕ್ಕರೆ ಕಾಯಿಲೆ, ಕ್ಯಾನ್ಸರ್ ಹಾಗೂ ಸಾಮಾನ್ಯ ರೋಗಗಳ ತಪಾಸಣಾ ಕೈಗೊಳ್ಳಲಾಗುವುದು ಶಿಬಿರದಲ್ಲಿ ನುರಿತ ವೈದ್ಯರು, ಸ್ಥಳೀಯ ವೈದ್ಯರು ಸೇರಿದಂತೆ ಸಿಬ್ಬಂದಿಗಳು ಪಾಲ್ಗೊಳ್ಳಲಿದ್ದಾರೆ. ರೋಗ ತಪಾಸಣೆಯಲ್ಲಿ ಹೆಚ್ಚಿನ ಚಿಕಿತ್ಸೆ ಗುರುತಿಸಲ್ಪಟ್ಟವರು ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ನೀಡಲಾಗುವುದು ಎಂದು ತಿಳಿಸಿದರು, ಶಿಬಿರಕ್ಕೆ ಆಗಮಿಸುವವರು ಅಂತ್ಯೋದಯ, ಬಿಪಿಎಲ್ ಕಾರ್ಡ್, ಆಧಾರ್ ಕಾರ್ಡ್ ತರತಕ್ಕದ್ದು. ತಜ್ಞ ವೈದ್ಯರ ಸಲಹೆ ಮೇರೆಗೆ ಉಚಿತವಾಗಿ ಇಸಿಜಿ ೨ಡಿ ಕೋ ಸ್ಕ್ಯಾನಿಂಗ್ ಮಾಡಲಾಗುವುದು ತಾಲೂಕಿನ ಸಾರ್ವಜನಿಕರು ಶಿಬಿರದ ಸದುಪಯೋಗ ಪಡೆಯಬೇಕು ಎಂದು ಮನವಿ ಮಾಡಿದರು.
ಶಿಬಿರದ ಉದ್ಘಾಟನಾ ಕಾರ್ಯಕ್ರಮದ ಸಾನಿಧ್ಯವನ್ನು ದೇವಾಪುರ ಜಡಿಶಾಂತಲಿಂಗೇಶ್ವರ ಮಠದ ಶಿವಮೂರ್ತಿ ಶಿವಾಚಾರ್ಯರು ಹಾಗೂ ಲಕ್ಷ್ಮೀಪುರದ ಶ್ರೀಗಿರಿಮಠದ ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು ವಹಿಸುವರು. ಭುವನೇಶ್ವರಿ ದೇವಿ ಭಾವಚಿತ್ರಕ್ಕೆ ಸುರಪುರ ಸಂಸ್ಥಾನದ ರಾಜಾ ಕೃಷ್ಣಪ್ಪ ನಾಯಕ ಪೂಜೆ ನೆರವೇರಿಸುವರು. ಶಾಸಕ ನರಸಿಂಹಕ ನಾಯಕ (ರಾಜೂಗೌಡ) ಉದ್ಘಾಟಿಸುವರು. ಕರವೇ ರಾಜ್ಯ ಪ್ರಧಾನ ಸಂಚಾಲಕ ಬಸವರಾಜ ಪಡುಕೋಟೆ ಅಧ್ಯಕ್ಷತೆ ವಹಿಸುವರು. ಕರವೇ ಜಿಲ್ಲಾಧ್ಯಕ್ಷ ಟಿ.ಎನ್. ಭೀಮು ನಾಯಕ ಸೇರಿದಂತೆ ಇತರರು ಪಾಲ್ಗೊಳ್ಳುವರು ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು, ಸಂಘಟನೆಯ ಪದಾಧಿಕಾರಿಗಳಾದ ಹಣಮಗೌಡ ಶಖಾಪುರ, ಶ್ರೀನಿವಾಸ, ಆನಂದ, ಶ್ರೀನಿವಾಸ ಲಕ್ಷ್ಮೀಪುರ, ಹಾಲಗೇರಿ ಹಣಮಂತ, ಮರಿಲಿಂಗಪ್ಪ, ರಂಗನಾಥ ಬಿರಾದಾರ, ಭೀಮನಗೌಡ, ಪ್ರಕಾಶ ಇತರರಿದ್ದರು.