ವಿವಿಧ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ಪ್ರದಾನ

0
99

ಕಲಬುರಗಿ: ಇಂದಿನ ಆಧುನಿಕತೆಯಲ್ಲಿ ನಶಿಸುತ್ತಿರುವ ಜಾನಪದ ಕಲೆಗಳನ್ನು ಹಾಗೂ ಕಲಾವಿದರನ್ನು ಉಳಿಸಿ, ಬೆಳೆಸುವ ಜವಾಬ್ದಾರಿ ಜನತೆಯ ಮೇಲಿದೆ. ಯುವಕರು ತಮ್ಮ ಹಿರಿಯರಿಂದ ಇವುಗಳನ್ನು ಕಲಿತು ಭವಿಷತ್ತಿನ ಜನತೆಗೆ ಉಳಿಸಬೇಕು ಎಂದು ಮಾಜಿ ಎಂಎಲ್ಸಿ ಅಲ್ಲಮಪ್ರಭು ಪಾಟೀಲ್ ಹೇಳಿದರು.

ನಗರದ ಡಾ.ಎಸ್.ಎಂ.ಪಂಡಿತರಂಗ ಮಂದಿರದಲ್ಲಿ ಸಾಗರ ಗಾಯಕರ ಕಲಾವಿದರ ಸಂಘ ಶಹಾಬಾದ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಹಮ್ಮಿಕೊಂಡ ಜಾನಪದ ವೈಭವ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಸಾಗರದ ಕೋಗಿಲೆ ರಾಜ್ಯ ಮಟ್ಟದ ಗಾಯನ ಸ್ಫರ್ಧೆ ಕಾರ್ಯಕ್ರಮಕ್ಕೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂಸಾರದ ಜಂಜಾಟದಲ್ಲಿ ಬಳಲುತ್ತಿರುವ ಜೀವಿಗೆ ಶಾಂತಿ, ನೆಮ್ಮದಿ ಅತ್ಯವಶ್ಯಕವಾಗಿದೆ. ಶಾಂತಿ, ನೆಮ್ಮದಿ ಸಿಗಬೇಕಾದರೆ ಗ್ರಾಮೀಣ ಕಲೆಗಳಿಂದ ಮಾತ್ರ ಸಾಧ್ಯ. ನಮ್ಮಲ್ಲಿ ಕಲಾವಿದರ ಕೊರತೆಯಿಲ್ಲ, ಆದರೆ,ಆ ಕಲಾವಿದರಿಗೆ ಸೂಕ್ತ ವೇದಿಕೆ ಸಿಗುತ್ತಿಲ್ಲ. ಹೀಗಾಗಿ ಕಲಾವಿದರನ್ನು ನಾವೆಲ್ಲ ಬೆಳಸಬೇಕು ಎಂದು ಸಲಹೆ ನೀಡಿದರು.

Contact Your\'s Advertisement; 9902492681

ಗಂಗಾಧರ ಬಿ.ಎಂ(ಕಾಯಕರತ್ನ), ಗುರುಶಾಂತಯ್ಯ ಸ್ಥಾವರಮಠ( ಕಲಾ ಸಾಗರ), ಬಾಬುರಾವ್ ಕೋಬಾಳ(ಕಲಾ ಸಾಗರ), ಭೀಮಾಂಶಕರ ಫಿರೋಜಾಬಾದ್( ಮಾಧ್ಯಮ ರತ್ನ), ಚಂದ್ರು ಹಿರೇಮಠ( ಮಾಧ್ಯಮ ರತ್ನ), ರಾಕೇಶ ಅಲಂಕಾರ( ಕಾಯಕ ರತ್ನ), ಪವಿತ್ರಾ ರಾಜನಾಳ(ಕಲಾ ಸಾಗರ), ಶಿವಶರಣಪ್ಪ ಮಾಡ್ಯಾಳ್‌ಕರ್(ಕಲಾ ಸಾಗರ), ಸುಭಾಷ ತೇಲಿ(ಕಲಾ ಸಾಗರ), ಬಲಭೀಮ ನೆಲೋಗಿ(ಕಲಾ ಸಾಗರ), ಚೇತನ ಕೋಬಾಳ (ಕಲಾ ಸಾಗರ), ನಾಗಲಿಂಗಯ್ಯ ಸ್ಥಾವರಮಠ(ಕಲಾ ಸಾಗರ), ಜೈಭೀಮ ಸಾವಳಗಿ(ಕಲಾ ಸಾಗರ) ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನೀಲಕಂಠರಾವ್ ಮೂಲಗೆ ಮಾತನಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ ಕೃಷ್ಣಾ ರೆಡ್ಡಿ, ಅಲೀಂ ಇನಾಂದಾರ್, ಗಂಗಾಧರ ಜಿ.ಎಂ., ಕನಕಪ್ಪ ದಂಡಗುಲಕರ್, ನಾಗಮ್ಮ, ಶಿವರಾಜ ಕೋರೆ, ರಾಕೇಶ ಅಲಂಕಾರ, ನಾಗಮೂರ್ತಿ ಗುತ್ತೇದಾರ, ಋಷಿಕೇಶ ನಾಗಪ್ಪ ಕರದಾಳ, ರಿಯಾಜ್ ಬಮಾದಾರ, ವೆಂಕಟೇಶ ದಂಡಗುಲಕರ್, ನೀಲಂ ಪ್ರತಾಪೇ ಇತರರಿದ್ದರು. ಅನೇಕ ಕಲಾವಿದರು ಗಾಯನ ಪ್ರಸ್ತುತ ಪಡಿಸಿದರು. ಜೈಭೀಮ ಸಾವಳಗಿ ನಿರ್ವಹಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here