ಸುರಪುರ: ಭಾರತೀಯ ವೈದ್ಯಕೀಯ ಸಂಘ ಅಧ್ಯಕ್ಷರಾಗಿ ಡಾ.ಸುವರ್ಣಾ ನಾಯಕ ಆಯ್ಕೆ

0
13

ಸುರಪುರ: ಭಾರತೀಯ ವೈದ್ಯಕೀಯ ಸಂಘವು ಭಾರತದ ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಶಾಖೆಗಳನ್ನು ಹೊಂದಿದ್ದು ಇದು ವೈದ್ಯರ ರಾಷ್ಟ್ರೀಯ ಸ್ವಯಂ ಸೇವಾ ಸಂಸ್ಥೆಯಾಗಿದ್ದು ದೇಶದಲ್ಲಿಯೇ ವೈದ್ಯರ ದೊಡ್ಡ ಸಂಘವಾಗಿದ್ದು ಸಾರ್ವಜನಿಕ ಆರೋಗ್ಯ, ಆರೋಗ್ಯ ಶಿಕ್ಷಣ, ಮುಂದುವರಿದ ವೈದ್ಯಕೀಯ ಸೇವೆ ಮತ್ತು ಶಿಕ್ಷಣ ಹಾಗೂ ಸಮುದಾಯ ಆರೋಗ್ಯ ಕಾರ್ಯಕ್ರಮಗಳ ಬಗ್ಗೆ ಸಲಹೆ ನೀಡುವುದು ಸಂಘದ ಪ್ರಮುಖ ಉದ್ದೇಶ ಎಂದು ಸಂಘದ ವಲಯ ಸಮನ್ವಯಾಧಿಕಾರಿ ಡಾ.ಪ್ರಸನ್ನ ಪಾಟೀಲ ಹೇಳಿದರು.

ನಗರದ ಅದಿತಿ ಹೋಟೆಲ್‌ನಲ್ಲಿ ಹಮ್ಮಿಕೊಂಡಿದ್ದ ಭಾರತೀಯ ವೈದ್ಯಕೀಯ ಸಂಘದ(ಐಎಮ್‌ಎ) ತಾಲೂಕು ಶಾಖೆಯ ಉದ್ಘಾಟಿಸಿ ಅವರು ಮಾತನಾಡಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿ ರಾಜ್ಯದಲ್ಲಿ ೧೯೨೮ರಲ್ಲಿ ಆರಂಭಗೊಂಡ ಈ ಸಂಸ್ಥೆಯು ವೈದ್ಯಕೀಯ ಹಾಗೂ ವೈದ್ಯಕೀಯಕ್ಕೆ ಸಂಬಂಧಪಟ್ಟ ವಿಜ್ಞಾನಗಳ ಎಲ್ಲಾ ಶಾಖೆಗಳಲ್ಲಿ ಉತ್ತೇಜನ ಹಾಗೂ ಪ್ರಗತಿ ಸಾಧಿಸುವುದು ಮತ್ತು ವೈದ್ಯರುಗಳಲ್ಲಿ ಪರಸ್ಪರ ಸೌಹಾರ್ದವನ್ನು ಬೆಳೆಸುತ್ತದೆ ಎಂದು ಹೇಳಿದರು.

Contact Your\'s Advertisement; 9902492681

ತಾಲೂಕು ಶಾಖೆಯ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡ ನಗರದ ಪ್ರಸಿದ್ಧ ಸ್ತ್ರೀ ರೋಗ ತಜ್ಞೆ ಡಾ.ಸುವರ್ಣಾ ನಾಯಕ ಮಾತನಾಡಿ ಸಾರ್ವಜನಿಕರಿಗೆ ವಿವಿಧ ರೀತಿಯ ಶಿಬಿರಗಳಲ್ಲಿ ಸರಕಾರದಿಂದ ದೊರೆಯುವ ಉಚಿತ ಸೌಲಭ್ಯಗಳನ್ನು ಒದಗಿಸುವುದು ಹಾಗೂ ವೈದ್ಯಕೀಯ ಸೇವೆಯಲ್ಲಿ ಆಗುವಂತಹ ವಿವಿಧ ರೀತಿಯ ತೊಂದರೆಗಳ ನಿರ್ವಹಣೆ ಮಾಡುವುದು ನೂತನವಾಗಿ ಅಸ್ತಿತ್ವಕ್ಕೆ ತರಲಾಗಿರುವ ಭಾರತೀಯ ವೈದ್ಯಕೀಯ ಸಂಘದ ತಾಲೂಕು ಶಾಖೆಯ ಪ್ರಮುಖ ಉದ್ದೇಶ ಎಂದು ತಿಳಿಸಿದರು.

ಹಿರಿಯ ವೈದ್ಯರಾದ ಡಾ.ಸತ್ಯನಾರಾಯಣ ಆಲದಾರ್ತಿ, ತಾಲೂಕು ಆರೋಗ್ಯಾಧಿಕಾರಿ ಡಾ.ಆರ್.ವಿ.ನಾಯಕ ಉಪಸ್ಥಿತರಿದ್ದರು, ಸಂಘದ ಅಧ್ಯಕ್ಷರಾಗಿ ಸ್ತ್ರೀರೋಗ ತಜ್ಞೆ ಡಾ.ಸುವರ್ಣಾ ನಾಯಕ, ಪ್ರಧಾನ ಕಾರ್ಯದರ್ಶಿಯಾಗಿ ಅರವಳಿಕೆ ತಜ್ಞೆ ಡಾ.ಅರ್ಶಿ ಅಂಜುಮ್ ಹಾಗೂ ಖಜಾಂಚಿಯಾಗಿ ರೇಡಿಯೋಲಾಜಿಸ್ಟ್ ಡಾ.ಶಫೀ ಉಜ್ಜುಮಾ ಅವರನ್ನು ಆಯ್ಕೆಗೊಳಿಸಲಾಯಿತು, ಕಾರ್ಯಕ್ರಮದಲ್ಲಿ ಸುರಪುರ ಮತ್ತು ಹುಣಸಗಿ ತಾಲೂಕುಗಳ ೨೦ಜನ ಎಂಬಿಬಿಎಸ್ ಮತ್ತು ತಜ್ಞ ವೈದ್ಯರುಗಳು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here