ಬೆಳೆ ಹಾನಿ ಎಕರೆಗೆ 20 ಸಾವಿರ ಪರಿಹಾರಕ್ಕೆ ಸಿರಗಾಪೂರ ಆಗ್ರಹ

0
22

ಕಲಬುರಗಿ:ಸತತ ಮಳೆಯಿಂದಾಗಿ ಜಿಲ್ಲೆಯ ಹಲವೆಡೆ ಮುಂಗಾರು ಬೆಳೆಗಳು ಹಾನಿಯಾಗಿದ್ದು ರೈತರಿಗೆ ಕೂಡಲೇ ಪ್ರತಿ ಎಕರೆಗೆ 20 ಸಾವಿರ ರೂಪಾಯಿ ಪರಿಹಾರ ನೀಡಬೇಕು ಎಂದು ಕನ್ನಡ ಭೂಮಿ ಜಾಗೃತಿ ಸಮಿತಿ ರಾಜ್ಯಾಧ್ಯಕ್ಷ ಲಿಂಗರಾಜ ಸಿರಗಾಪೂರ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಆಗ್ರಹಿಸಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು ಈಗಾಗಲೇ ಕಲಬುರಗಿ ಜಿಲ್ಲೆಯ ಆಳಂದ, ಕಮಲಾಪುರ, ಚಿಂಚೋಳಿ ಮತ್ತು ಚಿತ್ತಾಪೂರ ತಾಲ್ಲೂಕುಗಳಲ್ಲಿ ಬಿತ್ತನೆ ಮಾಡಿದ್ದ ಬೆಳೆಗಳು ನಿರಂತರವಾಗಿ ಸುರಿದ ಮಳೆಗೆ ಸಂಪೂರ್ಣ ಹಾಳಾಗಿದ್ದು ಇದರಲ್ಲಿ ಈ ಜಿಲ್ಲೆಯ ಪ್ರಮುಖ ವಾಣಿಜ್ಯ ತೊಗರಿ ಬೆಳೆಗೆ ಹಾನಿ ಹೆಚ್ಚಾಗಿರುವುದರಿಂದ ರೈತರು ಕಂಗಾಲಾಗಿದ್ದಾರೆ.

Contact Your\'s Advertisement; 9902492681

ರೈತರಿಗೆ ಆರ್ಥಿಕವಾಗಿ ನೆರವಾಗಿದ್ದ ತೊಗರಿ ಬಿತ್ತನೆಗೆ ಎಕರೆಗೆ ಸುಮಾರು 10 ರಿಂದ 15 ಸಾವಿರ ಖರ್ಚಾಗಿದೆ.ಸಾಲ ಸೊಲ ಮಾಡಿ ಬಿತ್ತನೆ ಮಾಡಿರುವ ರೈತರು ಮಳೆಗೆ ಬೆಳೆ ನಷ್ಟವಾಗಿದ್ದರಿಂದ ತೊಂದರೆ ಅನುಭವಿಸುವಂತಾಗಿದೆ. ಕೆಲವೆಡೆ ರಸಗೊಬ್ಬರ ಕೊರತೆ ಇರುವುದರಿಂದ ದುಪ್ಪಟ್ಟು ಹಣ ನೀಡಿ ಖರೀದಿಸಿದ್ದಾರೆ.ಇದು ರೈತರಿಗೆ ಮತ್ತಷ್ಟು ‌ಹೊರೆಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಮುಖ್ಯಮಂತ್ರಿಗಳು ಕೂಡಲೇ ಬೆಳೆ ಹಾನಿ ಸಮೀಕ್ಷೆ ನಡೆಸಿ ಶೀಘ್ರದಲ್ಲೇ ಪರಿಹಾರ ನೀಡುವಂತೆ ಜಿಲ್ಲಾಡಳಿತಕ್ಕೆ ಸೂಚಿಸಬೇಕು.ರಸಗೊಬ್ಬರಗಳ ಅಭಾವ ತಲೆದೋರಿದೆ.ರೈತ ಸಂಪರ್ಕ ಕೇಂದ್ರಗಳಲ್ಲಿ ಸಿಗುತ್ತಿಲ್ಲ. ಮಾರುಕಟ್ಟೆಯಲ್ಲಿ ಹೆಚ್ಚಿನ ಹಣವನ್ನು ನೀಡಿ ಖರೀದಿಸುತ್ತಿದ್ದಾರೆ.

ರಸಗೊಬ್ಬರ ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ.ಇದನ್ನು ತಡೆಗಟ್ಟಲು ಸರಕಾರ ಮುಂದಾಗಬೇಕು.ಮಳೆಗೆ ನಷ್ಟವಾಗಿರುವ ಬೆಳೆಗಳನ್ನು ಮತ್ತೆ ಪುನಃ ಬೀತ್ತನೆಗೆ ರೈತರಿಗೆ ಬೀಜಗಳು ಮತ್ತು ರಸಗೊಬ್ಬರ ಉಚಿತವಾಗಿ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here