ಟೇಂಗಳಿ ಗ್ರಾಮದ ರಾಷ್ಟ್ರಕೂಟರ ಕೋಟೆ ಮಹಾದ್ವಾರ ನವೀಕರಿಸಲು ಮನವಿ

0
9

ಕಲಬುರಗಿ: ಕಾಳಗಿ ತಾಲ್ಲೂಕಿನ ಟೇಂಗಳಿ ಗ್ರಾಮದಲ್ಲಿ “ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ” ಎಂಬ ಕಾರ್ಯಕ್ರಮದಡಿಯಲ್ಲಿ ತಹಸೀಲ್ದಾರರು ಗ್ರಾಮ ವಾಸ್ತವ್ಯ ಸ್ಪಂದನಾ ಕಾರ್ಯಕ್ರಮದಲ್ಲಿ ಟೇಂಗಳಿ ಗ್ರಾಮದ ರಾಷ್ಟ್ರಕೂಟರ ಕೋಟೆಯ ಮಹಾದ್ವಾರ ನವೀಕರಿಣ ಹಾಗೂ ಸೌಂದರ್ಯಿಕರಣ ಗೊಳಿಸಲು ತಹಸೀಲ್ದಾರ ನಾಗನಾಥಗೆ ವಚನೋತ್ಸವ ಪ್ರತಿಷ್ಠಾನ ಯುವ ಘಟಕ ಅಧ್ಯಕ್ಷರಾದ ಶಿವರಾಜ ಅಂಡಗಿಯವರು ಮನವಿಸಲ್ಲಿಸಿದರು.

ಗತವೈಭವ ಇತಿಹಾಸ ಹೊಂದಿರುವ ಅನೇಕ ಊರುಗಳಲ್ಲಿ ಟೇಂಗಳಿ ಗ್ರಾಮವು ಒಂದು. ರಾಷ್ಟ್ರಕೂಟರ ಆಳ್ವಿಕೆಯಲ್ಲಿ ಮಾನ್ಯಖೇಟದ ಪಕ್ಕದಲ್ಲಿರುವ ಟೇಂಗಳಿಗ್ರಾಮವು ಒಂದು ಪ್ರಮುಖ ಕೇಂದ್ರವಾಗಿತ್ತು. ಗ್ರಾಮದಲ್ಲಿ ಅನೇಕ ರೀತಿ ಐತಿಹಾಸಿಕ ಸ್ಮಾರಕಗಳು ದೇವಾಲಯಗಳು ಇದ್ದು, ವಿಶೇಷವೆಂದರೆ ಗ್ರಾಮಕ್ಕೆ ಒಂದು ದೊಡ್ಡ ಕೋಟೆ ಇದ್ದು ಸುತ್ತಲೂ ಅನೇಕ ದೊಡ್ಡ ದೊಡ್ಡ ಹೂಡೆಗಳಿಂದ ಆವರಿಸಿದ್ದು, ಗ್ರಾಮಕ್ಕೆ ಹೋಗಬೇಕಾದರೆ ಕೇವಲ ಒಂದೇ ಒಂದು ಮಹಾ ದ್ವಾರವಿತ್ತು ಎಂದು ಹಿರಿಯರು ಹೇಳುವ ಮಾತು ಅಂತ ಗತವೈಭವ ಇತಿಹಾಸ ಹೊಂದಿರುವಂತಹ ಗ್ರಾಮದ ಮಹಾದ್ವಾರ ಈಗ ಅವನತಿ ಹಂತದಲ್ಲಿ ಇದ್ದು ಆ ದ್ವಾರದ ಮಧ್ಯ ಭಾಗದಲ್ಲಿ ಬಿರುಕು ಬಿಟ್ಟಿದ್ದು ಅಲ್ಲಲ್ಲಿ ಕಂಠಿಗಳು ಬೆಳೆದು ಬೀಳುವಂತ ಪರಿಸ್ಥಿತಿಯಲ್ಲಿದೆ.

Contact Your\'s Advertisement; 9902492681

ಕಾಳಜಿ ವಹಿಸಿ ಊರಿನ ಇತಿಹಾಸ ಬಿಂಬಿಸುವಂತಹ ಮಹಾದ್ವಾರದ ರಿಪೇರಿ ಹಾಘೂ ನವೀಕರಣ ಕುರಿತು ಈ ಸ್ಪಂಧನ ಸಭೆಯಲ್ಲಿ ಪ್ರಮುಖ ವಿಷಯ ಎಂದು ಭಾವಿಸಿ ನಿರ್ಧಾರ ಕೈಗೊಳ್ಳಬೇಕು. ಐತಿಹಾಸಿಕ ದೇವಾಲಯಗಳು ಸ್ಮಾರಕಗಳು ಕೂಡ ಹಾಳಾಗದಂತೆ ಉತ್ತಮ ರೀತಿಯಲ್ಲಿ ರಕ್ಷಣೆ ಮಾಡಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಇಲಾಖೆಯಲ್ಲಿರುವ ಯೋಜನೆಗಳು ರೈತರಿಗೆ ಅದರ ಅನುಕೂಲತೆಗಳ ಬಗ್ಗೆ ವಿವರವಾಗಿ ಮಾಹಿತಿ ನೀಡುವುದರೊಂದಿಗೆ, ಜನರ ಬೇಡಿಕೆಗಳಿಗೆ ಸ್ಪಂದಿಸಿದ್ದು ಶ್ಲಾಘನೀಯ, ಎನ್ನುತ್ತ ಜನಸ್ಪಂಧನ ಕಾರ್ಯಕ್ರಮ ಪುನರ್‌ ಪ್ರಾರಂಭಿಸಿದ ನೂತನ ಜಿಲ್ಲಾಧಿಕಾರಿಗಳಾದ ಯಶವಂತ್‌ ವಿ ಗುರುಕರ್‌ ರವರಿಗೆ ಗ್ರಾಮದ ವತಿಯಿಂದ ಅಭಿನಂದಿಸಲಾಯಿತು.

ಈ ಸಂಧರ್ಭದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷರಾದ ಮೆಹಬೂಬ ಪಟೇಲ್‌,‌ ಪಂಚಾಯತ ಅಭಿವೃದ್ಧಿ ಅಧಿಕಾರಿ ಯೋಗೇಶ ಹಿರೇಮಠ, ಗ್ರಾ,ಪ ಸದಸ್ಯರಾದ ವಿಜಯಕುಮಾರ ತುಪ್ಪದ, ಶರತಚಂದ್ರ ಮಾಲಿಪಾಟೀಲ, ಹನೀಫ್‌ಸಾಬ್‌ ಆಪಖಾನ್‌, ಭೀಮಾಶಂಕರ ಅಂಕಲಗಿ, ರವೂಫ್‌ ಆಪಖಾನ್, ಗುಂಡಪ್ಪ ಪಟ್ಟೆದ, ರಾಜು ಪಟ್ಟೆದ, ವಿವೇಕಾನಂದ ಬುಳ್ಳ, ಮಲ್ಲಿಕಾರ್ಜುನ ಹರಸೂರ, ಚಂದ್ರು ಬೇರನ್ ಹಾಗೂಇತರರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here