ನೇಕಾರ ಉಪಜಾತಿಗಳಿಗೆ 2A ನಲ್ಲಿ ಮೀಸಲಾತಿ ಕಲ್ಪಿಸಲು ಹಿಂದುಳಿದ ಆಯೋಗದ ಅಧ್ಯಕ್ಷರಿಗೆ ಮನವಿ

0
356

ಕಲಬುರಗಿ: ಇಂದು ಅತಿಥಿ ಗೃಹದಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ಆಯೋಗದ ಅಧ್ಯಕ್ಷರು ಹಾಗೂ ಸದಸ್ಯರಿ ಗೆ ಭೇಟಿ ನೀಡಿ ನೇಕಾರ ಸಮುದಾಯದ ಪರವಾಗಿ ಮನವಿ ಸಲ್ಲಿಸಲಾಯಿತು.

ನಿಯೋಗದಲ್ಲಿ ಸಪ್ತ ನೇಕಾರ ಜನಾಂಗದ, ದೇವಸಾಲಿ, , ಪಟ್ಟಸಾಲಿ, ಪದ್ಮಸಾಲಿ , ಸ್ವಕುಲಸಾಲಿ,   ಕುರಹಿನಶೆಟ್ಟಿ, ದೇವಾಂಗ, ಹಟಗಾರ, ಕೋಷ್ಠಿ, ತೊಗಟವೀರ, ಸಮಾಜದ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ಸೇರಿ, ರಾಜ್ಯದ ಒಟ್ಟು ನೇಕಾರ ಉಪಜಾತಿಗಳನ್ನು ಒಂದೇ ಅಡಿಯಲ್ಲಿ ಪರಿಗಣಿಸಿ, 2A ನಲ್ಲಿ ಇಂಡೀಕರಿಸಿ, ಮೀಸಲಾತಿ ದೊರಕುವಂತೆ ಆಯೋಗ ಸರಕಾರಕ್ಕೆ ವರಧಿ ಮಾಡುವಾಗ ಏಕೀಕರಣಗೊಳಿಸಿ ಸಲ್ಲಸಬೇಕು ಎಂದು ಕೊರಲಾಯಿತು.

Contact Your\'s Advertisement; 9902492681

ಇದನ್ನೂ ಓದಿ: ಆಲಸ್ಯತನ ಬಿಟ್ಟು ಸರ್ಕಾರಿ ಸೌಲಭ್ಯ ಪಡೆಯಲು ಮುಂದಾಗಿ: ಕಲಬುರಗಿ ಡಿಸಿ ಯಶವಂತ ವಿ. ಗುರುಕರ್

ಮನವಿ ಸ್ವೀಕರಿಸಿ ಮಾತಾನಾಡುತ ಇಂದು ಒಂದು ಒಳ್ಳೆಯ ಸಲಹೆ ನೀಡಿದ್ದು, ಸೂಕ್ತ ರೀತಿಯಲ್ಲಿ ಪರಿಗಣಿಸಲಾಗುವುದು ಎಂದು ತಿಳಿಸಿದರು, ಅಲ್ಲದೆ ನಿಮ್ಮಹಾಗೆ ಇತರೆ ಜಾತಿಗಳು ಕೂಡಾ ಕೋರಿದರೆ ಹಿಂದುಳಿದ ವರ್ಗಗಳ ಸಂಖ್ಯೆಕಡಿಮೆಯಾಗಿ ಒಗ್ಗಟ್ಟು ಮೂಡತದೆ ಎಂದು ಹರ್ಷ ವ್ಯಕ್ತಪಟ್ಟರು.

ಹಟಗಾರ ಸಮಾಜದ ಅಧ್ಯಕ್ಷರಾದ  ನಿಂಬೆನ್ನಿ ಮತ್ತು ಕಾರ್ಯದರ್ಶಿ ಸೂರ್ಯಕಾಂತ ಸೊನ್ನದ, ಕುರವಿನ ಶೆಟ್ಟಿ ಸಮಾಜದ ಕಾರ್ಯದರ್ಶಿ ಚಂದ್ರಶೇಖರ್ ಮ್ಯಾಳಗಿ, ದೇವಾಂಗ ಸಮಾಜದ ಸಂತೋಷ್ ಗುರಮೀಟಕಲ, ತೊಗಟವೀರ ಸಮಾಜದ ಶ್ರೀನಿವಾಸ ಬಲಪೂರ್, ದೇವಸಾಲಿ ಹಟಗಾರ ನ್ಯಾಯವಾದಿ ಜೇನವೆರಿ ವಿನೋದ ಕುಮಾರ, ಜಿಲ್ಲಾ ಹಟಗಾರ ಸಮಾಜದ ಅಧ್ಯಕ್ಷ ಹಾಗೂ  ವಕೀಲರಾದ ಶಿವಲಿಂಗಪ್ಪಾ ಅಷ್ಟಗಿ, ಕೋಷ್ಠಿ ಸಮಾಜದ, ಛಾಯಾಗ್ರಾಹಕ ರಾಜು ಕೋಷ್ಠಿ ಸೇರಿದಂತೆ ಹಲವರು ಇದ್ದರು.

ಇದನ್ನೂ ಓದಿ: ಮಳೆಗೆ ದೇವಸ್ಥಾನ ಗೊಡೆ ಕುಸಿತ: ಪ್ರಾಣಾಪಯದಿಂದ ಪಾರದ ಅರ್ಚಕ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here