ಆನೇಕಲ್: ತಾಲ್ಲೂಕು ಕಾನೂನು ಸೇವಾ ಪ್ರಾಧಿಕಾರ ಮತ್ತು ಆನೇಕಲ್ ಅರಣ್ಯ ಇಲಾಖೆಯ ವತಿಯಿಂದ ಇಂದು ಇಲಾಖೆಯ ಕಚೇರಿಯಲ್ಲಿ ಪರಿಸರ ಕಾನೂನುಗಳ ಬಗ್ಗೆ ಅರಿವಿನ ಕಾರ್ಯಾಗಾರ ನಡೆಸಲಾಯಿತು.
ಈ ವೇಳೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ನ್ಯಾ. ಸಂದೀಪ್ ಮಾತನಾಡಿ, ರಾಜ್ಯದಲ್ಲಿ ಫಾರೆಸ್ಟ್ ಕನ್ಜರ್ ವೇಷನ್ ಕಾಯ್ದೆ ಇದ್ರೂ ಕಾಡಿನಲ್ಲಿ ಕಲ್ಲಿನ ಕ್ವಾರಿಗಳಿಗೆ ಪರವಾನಿಗೆ ನೀಡುವುದು ನಡೆಯುತ್ತಿದೆ. ಇಂತಹ ದೃಷ್ಕೃತ್ಯಗಳು ಕೂಡಲೇ ನಿಲ್ಲಬೇಕೆಂದು ತಿಳಿಸಿದರು.
ಅನಧಿಕೃತ ಗಣಿಗಾರಿಕೆ ಕುರಿತು ಮಾನ್ಯ ನ್ಯಾಯಾಧೀಶರಾದ ಜಸ್ಟಿಸ್ ಎನ್ ಕುಮಾರ್, ಪ್ರಕರಣವೊಂದರ ಹೇಳಿಕೆಯಲ್ಲಿ ಗಣಿಗಾರಿಕೆಯ ಅಪಾಯಗಳ ಕುರಿತು ವಿವರಿಸಿದ್ದಾರೆ. ಹಾಗೂ ಪರಿಸರ ಸಂರಕ್ಷಣೆಯ ಕುರಿತು ಕಾನೂನುಗಳನ್ನು ರೂಪಿಸಿದ್ದಾರೆ. ಅವುಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾದ ಕರ್ತವ್ಯ ನಮ್ಮೆಲ್ಲರದೆಂದು ಅವರು ಹೇಳಿದ್ದಾರೆ.
ಅರಣ್ಯ ವಲಯ ಉಪ ಅಧಿಕಾರಿ ಬಾಲರಾಜ್ ಮಾತನಾಡಿ, ನ್ಯಾಯಾಲಯ ಪರಿಸರವನ್ನು ಕಾಪಾಡಲು ಆನೇಕ ಆದೇಶಗಳು ಬರುತ್ತಿವೆ. ಅವೆಲ್ಲ ಆದೇಶಗಳನ್ನು ಪಾಲಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆಂದು ತಿಳಿಸಿದರು.
ವಕೀಲರಾದ ಎಂ.ಎ.ಶಿವಾರಾಜ್ ಮಾತನಾಡಿ, ಪರಿಸರದ ರಕ್ಷಣೆ ನಮ್ಮ ಜವಾಬ್ದಾರಿ. ಇದನ್ನು ಸಂವಿಧಾನದ ಮೂಲಭೂತ ಕರ್ತವ್ಯದಲ್ಲಿ ಸೇರಿಸಲಾಗಿದೆ. ಅದನ್ನು ಸ್ವಯಂ ಪ್ರೇರಿತವಾಗಿ ಪ್ರತಿಯೊಬ್ಬರು ಪಾಲಿಸಬೇಕೆಂದು ತಿಳಿಸಿದರು.
ವಕೀಲ ದುಶ್ಯಂತ ಆರಾಧ್ಯ ಮಾತನಾಡಿ, ಕಾನೂನುಗಳು ಎಷ್ಟೇ ಇದ್ದರೂ ಮನುಷ್ಯರು ಚಿಂತನೆಗಳು ಬದಲಾಗದೆ ಏನನ್ನು ಮಾಡಲು ಸಾಧ್ಯವಿಲ್ಲವೆಂದರು.
ಈ ವೇಳೆ ಸುಶೀಲ, ಹಿನ್ನಕ್ಕಿ ಮುನಿರಾಜು, ನೀಲಮ್ಮ, ಅರಣ್ಯವಲಯದ ಅಧಿಕಾರಿಗಳು ಭಾಗವಹಿಸಿದರು,