ವೇದಗಳು ಮನುಷ್ಯ ಜೀವನ ಹಸನುಗೋಳಿಸುತ್ತವೆ: ಕಂಬಳೇಶ್ವರ ಶ್ರೀಗಳು

0
75
ಋಗ್ವೇದ ಟ್ರಸ್ಟ್ ವತಿಯಿಂದ ಗುರುವಂದನಾ ಕಾರ್ಯಕ್ರಮ

ಚಿತ್ತಾಪುರ:ವೇದಗಳಿಗೆ ಅತಿ ಮಹತ್ವವಿದ್ದು ಅವುಗಳು ಮನುಷ್ಯನ ಜೀವನವನ್ನು ಹಸನುಗೋಳಿಸುತ್ತವೆ ಎಂದು ಕಂಬಳೇಶ್ವರ ಸಂಸ್ಥಾನ ಮಠದ ಸೋಮಶೇಖರ ಶಿವಾಚಾರ್ಯರು ಹೇಳಿದ್ದಾರೆ.

Contact Your\'s Advertisement; 9902492681

ಪಟ್ಟಣದ ಅಕ್ಕಮಹಾದೇವಿ ಮಂದಿರದಲ್ಲಿ ಭಾನುವಾರ ಸಂಜೆ ಶ್ರೀ ಋಗ್ವೇದ ವೈಧಿಕ ಪುರೋಹಿತರ ಟ್ರಸ್ಟ್ ವತಿಯಿಂದ ಗುರು ಪೂರ್ಣಿಮೆ ಪ್ರಯುಕ್ತ ನಡೆದ ಗುರುವಂದನಾ ಕಾರ್ಯಕ್ರಮ ನೇತೃತ್ವ ವಹಿಸಿ ಮಾತನಾಡಿದರು.

ಭಾರತವು ತನ್ನದೇ ಆದ ಸಂಸ್ಕೃತಿಯನ್ನು ಹೊಂದಿದೆ.ಪುರಾಣಗಳು ವೇದಗಳು ಮನುಷ್ಯನ ಸರಳ ಹಾಗೂ ಸುಖಿ ಜೀವನ್ನಕ್ಕೆ ದಾರಿದೀಪವಾಗಿವೆ.ಗುರುಪುರ್ಣಿಮೆಗೆ ವಿಶೇಷವಾದ ಮಹತ್ವವಿದೆ ಎಂದರು.

ಕಾರ್ಯಕ್ರಮದಲ್ಲಿ ಗುರುಮೂರ್ತಿ ಶಿವಾಚಾರ್ಯರು,ಅಭಿನವ ಪರ್ವತೇಶ್ವರ ಶಿವಾಚಾರ್ಯರು,ಚನ್ನರುದ್ರಮುನಿ ಶಿವಾಚಾರ್ಯರು,ಚಂದ್ರಶೇಖರ ಅವಂಟಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಶಿವಶಂಕರ ಶಿವಾಚಾರ್ಯರ,ಮುನೀಂದ್ರ ಶಿವಾಚಾರ್ಯರ,ಶಾಂತಸೋಮನಾಥ ಶಿವಾಚಾರ್ಯರ,ಡಾ.ತ್ರಿಮೂರ್ತಿ ಶಿವಾಚಾರ್ಯರ,ಸದ್ಯೋಜಾತ ಮಹಾಸ್ವಾಮಿ,ರಾಜಶೇಖರ ಸ್ವಾಮಿ,ಚನ್ನಬಸವ ಶರಣರು,ಶಿವಕುಮಾರ್ ಶಾಸ್ತ್ರೀ ಹಿರೇಮಠ,ಮಂಜುನಾಥ್ ಶಾಸ್ತ್ರೀ,ಕರಿಬಸವಯ್ಯ ಶಾಸ್ತ್ರೀ,ಶಿವಕುಮಾರ ಪುರಂದರಮಠ,ಬಸವರಾಜ ಪಾಟೀಲ್ ಬೆಳಗುಂಪಾ,ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಆನಂದ ಪಾಟೀಲ್ ನರಬೋಳಿ,ರವೀಂದ್ರ ಸಜ್ಜನಶೆಟ್ಟಿ,ನಾಗರಾಜ್ ಪರಂಡೆ, ಮಹಾದೇವಪ್ಪ ಪಾಲಪ್,ರಾಜಶೇಖರ ಬಳ್ಳಾ,ನಾಗರಾಜ ರೇಷ್ಮೀ,ವೀರಭದ್ರಪ್ಪ ಹುಮನಾಬಾದ ಸೇರಿದಂತೆ ಅನೇಕ ಗಣ್ಯರು ಇದ್ದರು.ಬಸವರಾಜ ಹೊನ್ನಾಳ,ಡಾ.ಶ್ರೀನಿವಾಸರೆಡ್ಡಿ,ಶರಣಕುಮಾರ ಪೊಲೀಸ್ ಪಾಟೀಲ್,ಶರಣಬಸಪ್ಪ,ಬೊಮ್ಮನಹಳ್ಳಿ, ಸಿದ್ದಲಿಂಗಯ್ಯ ಸ್ವಾಮಿ ಮಲಕೂಡ ಅವರಿಗೆ ಶ್ರೀ ಗುರುರಕ್ಷೆ ನೀಡಲಾಯಿತ್ತು. ವೀರೇಶ ಶಾಸ್ತ್ರಿ ಸ್ವಾಗತಿಸಿದರು, ಕಲ್ಯಾಣಕುಮಾರ್ ನಿರೂಪಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here