ಸುರಪುರ: ನಗರದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ವರ್ಷದ ಪಿಯುಸಿ ವಿದ್ಯಾರ್ಥಿನಿಯರ ಸ್ವಾಗತ ಸಮಾರಂಭ ಜರುಗಿತು.
ಕಾರ್ಯಕ್ರಮವನ್ನು ಉಪ ಖಜಾನೆ ಅಧಿಕಾರಿ ಮೋನಪ್ಪ ಶಿರವಾಳ ಉದ್ಘಾಟಿಸಿ ಮಾತನಾಡಿ,ಪ್ರತಿಯೊಬ್ಬ ವ್ಯಕ್ತಿಗೆ ಶಿಕ್ಷಣ ಎಂಬುದು ಅವಶ್ಯವಾಗಿದೆ.ಇದನ್ನು ಮನಗಂಡು ಪೋಷಕರು ಅನೇಕ ಕನಸುಗಳನ್ನಿಟ್ಟುಕೊಂಡು ತಮ್ಮೆಲ್ಲರನ್ನು ಊರುಗಳಿಂದ ವಿದ್ಯಾಭ್ಯಾಸಕ್ಕಾಗಿ ಕಳುಹಿಸಿದ್ದಾರೆ.ಅವರ ಆಸೆಯನ್ನು ತಾವು ಈಡೇರಿಸುವ ನಿಟ್ಟಿನಲ್ಲಿ ಉತ್ತಮವಾದ ಶಿಕ್ಷಣ ಕಲಿತು ಹೆತ್ತವರಿಗೆ ಹೆಸರು ತನ್ನಿ ಜೊತೆಗೆ ಉಜ್ವಲ ಬದುಕು ರೂಪಿಸಿಕೊಳ್ಳುವಂತೆ ನೀತಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ವೆಂಕಟೇಶ ನಾಯಕ ಅರಕೇರಾ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕಾಲೇಜಿನ ಶೈಕ್ಷಣಿಕ ಸಮಿತಿ ಸದಸ್ಯರಾದ ಶ್ರೀನಿವಾಸ ಚಿದಳ್ಳಿ,ಭೀಮಣ್ಣ ಭೋಸಗಿ ಪ್ರಾಂಶುಪಾಲರು ಕಕ್ಕೇರಾ,ಸುವರ್ಣ ಅರ್ಜುನಿಗಿ ಪ್ರಾಂಶುಪಾಲರು ಸ.ಬಾ.ಪ.ಪೂ.ಕಾಲೇಜ ಸುರಪುರ ಹಾಗು ಬಸವರಾಜ ಇನಾಂದಾರ ಉಪನ್ಯಾಸಕರು ಚಾಮನಾಳ,ಯಲ್ಲಪ ಕಾಡ್ಲೂರ ಉಪ ಪ್ರಾಂಶುಪಾಲರು ಸ.ಬಾ.ಪ.ಪೂ.ಕಾಲೇಜ ಸುರಪುರ,ಶ್ರೀನಿವಾಸ ಜಾಲವಾದಿ ಉಪ ಪ್ರಾಂಶುಪಾಲರು ಸಿ.ಬಾ.ಪ.ಪೂ.ಕಾಲೇಜ ಸುರಪುರ,ಬಸವರಾಜ ಕೋಡೆಕಲ್ಲ ಪ್ರಾಂಶುಪಾಲರು ಸಿ.ಪ.ಪೂ ಕಾಲೇಜ ರಂಗಂಪೇಟ,ರವಿ ನಾಯಕ ಬೈರಿಮರಡಿ ವೇದಿಕೆ ಮೇಲಿದ್ದರು.
ಮಲ್ಲಪ್ಪ ಮುಷ್ಟಳ್ಳಿ ನಿರೂಪಿಸಿದರು.ಮಂಜುನಾಥ ಚಟ್ಟಿ ಸ್ವಾಗತಿಸಿದರು. ಉಪನ್ಯಾಸಕಿ ಶ್ವೇತಾ ಎಸ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಗದೀಶ ಪತ್ತಾರ ವಂದಿಸಿದರು.ಕಾಲೇಜಿನ ಹಲವಾರು ಜನ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.