ಪ್ರೊ.ಎಚ್.ಟಿ ಪೋತೆ ಜೀವನ ಕಥನ ಗ್ರಂಥ ಬಿಡುಗಡೆ

0
45

ಕಲಬುರಗಿ: ಬೆಂಗಳೂರಿನ ಗಾಂಧಿ ಸ್ಮಾರಕ ನಿಧಿ ಭವನದ ಕಸ್ತೂರಬಾ ಸಭಾಂಗಣದಲ್ಲಿ ಕುಟುಂಬ ಪ್ರಕಾಶನವು  ಪ್ರಕಟಿಸಿದ ಕನ್ನಡ ಸಂವೇದನಾಶೀಲ ಕಥೆಗಾರ ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರಾದ ಪ್ರೊ. ಎಚ್ ಟಿ ಪೋತೆ ಅವರ  ಜೀವನ ಕಥನ ಗ್ರಂಥ ಬಿಡುಗಡೆ ಸಮಾರಂಭ ಜರುಗಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ಮತ್ತು ಸಂಸ್ಕೃತ ಬಹುಶ್ರುತ ವಿದ್ವಾಂಸರು ನ್ರಪತುಂಗ ಪ್ರಶಸ್ತಿ ಪುರಸ್ಕೃತರು ಶಾಸ್ತ್ರ ಚೂಡಾಮಣಿ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಪ್ರಥಮ ಕುಲಪತಿ ಪ್ರೊ ಮಲ್ಲೇಪುರಂ ಜಿ ವೆಂಕಟೇಶ ಅವರು ವಹಿಸಿದ್ದರು

Contact Your\'s Advertisement; 9902492681

ನವದೆಹಲಿ ಯುಜಿಸಿಯ ನ್ಯಾಕ್ ಸಂಸ್ಥೆಯ ನಿರ್ದೇಶಕರು ಡಾ ಎಸ್ ಸಿ ಶರ್ಮಾ  ಅವರು ಮಲ್ಲಿಕಾರ್ಜುನ ಖರ್ಗೆ ಜೀವನ ಕಥನ ಗ್ರಂಥ ಬಿಡುಗಡೆ ಮಾಡಿದರು. ತುಮಕೂರು ವಿಶ್ವವಿದ್ಯಾಲಯ ದ ಕನ್ನಡ ವಿಭಾಗದ ಪ್ರಾಧ್ಯಾಪಕರು ಡಾ ಅಂಜನಪ್ಪ ಚಳ್ಳಕೆರೆ ಅವರು ಗ್ರಂಥ ಪರಿಚಯ ಮಿಡಿದರು ಕರ್ನಾಟಕ ರಾಜ್ಯ ಸರ್ಕಾರ ಸಾರ್ವಜನಿಕ ಗ್ರಂಥಾಲಯ ಇಲಾಖೆ ನಿರ್ದೇಶಕರು ಡಾ ಸತೀಶ ಕುಮಾರ ಹೊಸಮನಿ ಅವರು ಮುಖ್ಯ ಅತಿಥಿಗಳಾಗಿದ್ದರು.

ವೇದಿಕೆಯಲ್ಲಿ ಲೇಖಕ ಪ್ರೊ ಎಚ್ ಟಿ ಪೋತೆ ಮತ್ತು ಪ್ರಕಾಶಕ ಡಾ ರಮೇಶ್ ಪೋತೆ ಉಪಸ್ಥಿತರಿದ್ದರು.ಡಾ ಶ್ರೀಶೈಲ ನಾಗರಾಳ ಸರ್ವರನ್ನು ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ತಮ್ಮ ಸಂತೋಷ ಕಂಬಾರ ಅವರು ನಿರ್ವಹಿಸಿದರೆ ಡಾ ಎಂ ಬಿ ಕಟ್ಟಿ ವಂದಿಸಿದರು.

ಕವಿ ವಿಮರ್ಶಕ ಡಾ ಬಸವರಾಜ ಸಬರದ ಪ್ರಿನ್ಸಿಪಾಲ್ ಡಾ ಎಸ್ ಎಚ್ ಹೊಸಮನಿ, ನಾಟಕಕಾರರು ಈಶ್ವರ ಇಂಗನ್, ಶಾಂತವೇರಿ ಗೋಪಾಲಗೌಡ, ಪ್ರತಿಷ್ಠಾನದ ಅಧ್ಯಕ್ಷ ವ ಚ. ಚನ್ನೇಗೌಡ, ಬಾಗಲಕೋಟ ಜಿಲ್ಲೆಯ ವಿಶೇಷ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ, ಚಿಂತಕ ಡಾ.ಕೆ ಈ ರಾಧಾಕೃಷ್ಣ, ಡಾ. ಸೂರ್ಯಕಾಂತ ಸುಜ್ಯಾತ, ಕನ್ನಡ ಪ್ರಾಧ್ಯಾಪಕ ಡಾ. ಶಿವರಾಜ ಬ್ಯಾಡರಹಳ್ಳಿ, ಗುಲಬರ್ಗಾ ವಿಶ್ವವಿದ್ಯಾಲಯದ ಕ್ರಿಡಾ ವಿಭಾಗದ ಪ್ರಾಂಶುಪಾಲ ಡಾ. ಹನುಮಂತ ಜಂಗೆ. ಸುಬೇದಾರ್ ಅಪ್ಪಾಸಾಹೇಬ. ಹೋಳಿನ ಕವಿ ಟಿ ಯಲ್ಲಪ್ಪ, ಡಾ. ಮಹಾದೇವ ಸತ್ಯಮಂಗಲ, ಡಾ. ಪೀರಪ್ಪ, ಡಾ. ಪ್ರಕಾಶ, ಡಾ. ಹಣಮಂತ ಮೇಲ್ಕೇರಿ, ಕಾಂಗ್ರೆಸ್ ಪಕ್ಷದ ರಾಜ್ಯ ಕಾರ್ಯಕಾರಣಿ ಸದಸ್ಯ ರಾಜು ಮಹಾಂತಪ್ಪ ಸಂಗಾವಿ ಹಾಗೂ ಕಲಬುರಗಿ ವಿಜಯಪುರ ಬಾಗಲಕೋಟೆ ಬೆಳಗಾವಿ ಬೆಂಗಳೂರುಗಳಿಂದ ಆಗಮಿಸಿದ ಅನೇಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here