ಎಡಿಜಿಪಿ ಅಲೋಕ ಕುಮಾರರಿಗೆ ಬೀದಿಬದಿ ವ್ಯಾಪಾರಿಗಳಿಂದ ಮನವಿ

0
26

ಕಲಬುರಗಿ: ಬೀದಿಬದಿ ವ್ಯಾಪಾರಿಗಳಿಗಾಗಿ ಮಹಾನಗರ ಪಾಲಿಕೆ ಗುರುತಿಸಿರುವ ಸುಪರ ಮಾರುಕಟ್ಟೆಹಳೆಜೈಲು ಚೌಪಾಟಿಯಲ್ಲಿ ತಮ್ಮ ವ್ಯಾಪಾರ ನಡೆಸುವಂತೆ ಹಾಗೂ ಇಲ್ಲಿ ಅಗತ್ಯ ಮೂಲ ಸೌಕರ್ಯ ಕಲ್ಪಿಸಲು ಸಂಬಂಧಪಟ್ಟ ಇಲಾಖೆಗೆ ನಿರ್ದೇಶನ ನೀಡುವಂತೆ ಅಖಿಲ ಕರ್ನಾಟಕ ಬೀದಿಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಜಗನ್ನಾಥ ಎಸ್.ಸೂರ್ಯವಂಶಿ ಅವರು ಎಡಿಜಿಪಿ ಅಲೋಕ ಕುಮಾರ್ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಕಾನೂನು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾಗಿ ಮೊದಲಬಾರಿಗೆ ಕಲಬುರಗಿ ನಗರಕ್ಕೆ ಆಗಮಿಸಿದ ಅಲೋಕ ಕುಮಾರ್ ಅವರು, ಇಲ್ಲಿನ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು. ಸರ್ಕಾರದ ಆದೇಶದಂತೆ ಬೀದಿಬದಿ ವ್ಯಾಪಾರಿಗಳ ಜೀವನೋಪಾಯ ಸಂರಕ್ಷಣೆ ಮತ್ತು ವ್ಯಾಪಾರ ನಿಯಂತ್ರಣ ಅಧಿನಿಯಮದಡಿ ಇಲ್ಲಿನ ಬೀದಿಬದಿ ವ್ಯಾಪಾರಿಗಳಿಗೆ ಕುಡಿಯುವ ನೀರು, ಶೌಚಾಲಯ ಸೇರಿದಂತೆ ಅಗತ್ಯ ಮೂಲ ಸೌಲಭ್ಯ ಕಲ್ಪಿಸಲು ಮಹಾನಗರ ಪಾಲಿಕೆಗೆ ಸೂಚಿಸುವಂತೆ ಸಂಘದ ಅಧ್ಯಕ್ಷ ಸೂರ್ಯವಂಶಿ ಅವರು ಸಲ್ಲಿಸಿರುವ ಮನವಿಯಲ್ಲಿ ವಿನಂತಿಸಿದ್ದಾರೆ.

Contact Your\'s Advertisement; 9902492681

ಮಹಾನಗರದ ೨೫೦ ಜನಬೀದಿಬದಿ ವ್ಯಾಪಾರಿಗಳಿಗೆ ಚೌಪಾಟಿಯಲ್ಲಿ ೪ ಮತ್ತು ೬ ಅಡಿ ಅಳತೆಯ ಸ್ಥಳವನ್ನು ಹಂಚಿಕೆ ಮಾಡಲಾಗಿದೆ. ಆದರೆ ಇಲ್ಲಿ ಮೂಲ ಸೌಕರ್ಯ ಕಲ್ಪಿಸಿಲ್ಲ. ಈ ಹಿನ್ನಲೆಯಲ್ಲಿ ಇಲ್ಲಿನ ಬೀದಿಬದಿ ವ್ಯಾಪಾರಿಗಳು, ಸುಪರ್ ಮಾರುಕಟ್ಟೆಯ ಜನತಾ ಬಜಾರದಿಂದ ಸಿಟಿಬಸ್ ನಿಲ್ದಾಣ, ಹಳೆ ಮಾರ್ಕೀಟದಿಂದ ಚಪಲ ಬಜಾರ್ ಕ್ರಾಸ್, ಚೌಕ್ ಪೊಲೀಸ ಠಾಣೆಯಿಂದ ಕ್ಲಾಥಬಜಾರ್ ಮತ್ತು ಫೋಟ್ ರಸ್ತೆ, ಭಾಂಡೆ ಬಜಾರ ಈ ಪ್ರದೇಶಗಳಲ್ಲಿ ಬೀದಿಬದಿಯ ವ್ಯಾಪಾರಗಳನ್ನು ನಡೆಸುತ್ತಿದ್ದಾರೆ. ಇದರಿಂದ ರಸ್ತೆ ಸಂಚಾರ ಸೇರಿದಂತೆ ಪಾದಾಚಾರಿ ಮಾರ್ಗ ಗುರುತಿಸಲು ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಹೀಗಾಗಿ ಇವರೆಲ್ಲರನ್ನು ಚೌಪಾಟಿಯಲ್ಲಿ ವ್ಯಾಪಾರ ನಡೆಸಲು ಅಲ್ಲಿ ಅಗತ್ಯ ಮೂಲ ಸೌಕರ್ಯ ಕಲ್ಪಿಸುವುದು ಅಗತ್ಯವಾಗಿದೆ ಎಂದು ತಮ್ಮ ಮನವಿಯಲ್ಲಿ ಅವರು ತಿಳಿಸಿದ್ದಾರೆ.

ಸಾರ್ವಜನಿಕರ ಅಹವಾಲು ಸ್ವೀಕಾರ ಸಭೆಗೂ ಮುನ್ನ ಎಡಿಜಿಪಿ ಅಲೋಕ ಕುಮಾರ್ ಅವರನ್ನು ಮಹಾನಗರದ ವಿಮಾನನಿಲ್ದಾಣದಲ್ಲಿ ಬೀದಿಬದಿ ವ್ಯಾಪಾರಿಗಳ ಸಂಘದ ವತಿಯಿಂದ ಅವರನ್ನು ಸನ್ಮಾನಿಸಿ ಸ್ವಾಗತಿಸಲಾಯಿತು. ಈ ಸಂದರ್ಭದಲ್ಲಿ ಗುರುರಾಜ ತಿಳಗೋಳ, ಡಾ.ಎಂ.ವೇದರ್ಮೂತಿ, ಬಾಬು ಪರಿಟ್, ದತ್ತು ಎಚ್. ಭಾಸಗಿ, ವೆಂಕಟೇಶ ಕಾಂಬಳೆ, ಸವಿತಾ ಜಿಂಗಾಡೆ, ಸುಭಾಷ ಡರಬಿ, ಮಾಣಿಕ್ ಪವಾರ, ನವೀನ್ ತೇಲ್ಕೂರ, ವಿಷ್ಣುಕಾಂತ ಹಂಚಾಟೆ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here