ಬಿಚ್ಚಿದ ಜೋಳಿಗೆ ಪುಸ್ತಕ ಲೋಕಾರ್ಪಣೆ: ಜೋಳಿಗೆ ಬಿಚಿದ ಜನಾನುರಾಗಿ ವೈದ್ಯ ನಾಗಲೋಟಿಮಠ

0
43

ಕಲಬುರಗಿ: ಅತ್ಯಂತ ಬಡತನದ ಕುಟುಂಬದಲ್ಲಿ ಜನಿಸಿ, ಕಷ್ಟ ಕಾರ್ಪಣ್ಯಗಳಿಯೇ ಬೆಳೆದು ಜನಪ್ರಿಯ ವೈದ್ಯರಾಗಿ, ಉತ್ತಮ ಆಡಳಿತಗಾರಾಗಿ, ಹಲವು ಮೆಡಿಕಲ್ ಕಾಲೇಜುಗಳ ಉನ್ನತಿಗೆ ಶ್ರಮಿಸಿ, ನೂರಾರು ವೈದ್ಯರನ್ನು ರೂಪಿಸಿದ ಸಜನಾ ಎಂದೇ ಜನಪ್ರಿಯರಾದ ಡಾ. ಎಸ್.ಜಿ. ನಾಗಲೋಟಿಮಠ ಅವರ ಆತ್ಮಕಥೆ ಅಪರೂಪದ್ದು ಎಂದು ರಂಗಾಯಣ ನಿರ್ದೇಶಕ ಪ್ರಭಾಕರ ಜೋಶಿ ಹೇಳಿದರು.

ಇಲ್ಲಿನ ಜ್ಞಾನ ಸಿಂಚನ ಪಿಯು ಕಾಲೇಜಿನಲ್ಲಿ ಡಾ. ಸ.ಜ. ನಾಗಲೋಟಿಮಠ ಇಂಟರ್‌ನ್ಯಾಷನಲ್ ಫೌಂಡೇಷನ್ ಹಾಗೂ ಷಡಕ್ಷರಿ ಸ್ವಾಮಿ ದಿಗ್ಗಾಂವಕರ್ ಟ್ರಸ್ಟ್ ಆಶ್ರಯದಲ್ಲಿ ಬುಧವಾರ ನಡೆದ ಸಜನಾ ೮೧ ಸ್ಮರಣೋತ್ಸವ ಅಂಗವಾಗಿ ಬಿಚ್ಚಿದ ಜೋಳಿಗೆ ಪುಸ್ತಕ ಲೋಕಾರ್ಪಣೆ ಹಾಗೂ ಅಮೃತ ಭಾರತಿಗೆ ಕನ್ನಡಾದರತಿ ಕುರಿತು ವಿಶೇಷ ಉಪನ್ಯಾಸ ಹಾಗೂ ಗ್ರಂಥ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

Contact Your\'s Advertisement; 9902492681

ಸಮಾಜದಿಂದ ಪಡೆದ ಸಹಾಯವನ್ನು ತನ್ನ ಜೋಳಿಗೆಯಲ್ಲಿ ಹಾಕಿಕೊಂಡು, ಗುರಿ ತಲುಪಿದ ಮೇಲೆ ಅದನ್ನು ಬಿಚ್ಚಿ ಬಯಲಾಗಿಸಿದ ಮಹಾನ್ ಮಾನವತಾವಾದಿಯಾಗಿದ್ದರು ಎಂದು ಸ್ಮರಿಸಿದರು. ಸಾರ್ವಜನಿಕ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಜಿ.ಎಂ. ವಿಜಯಕುಮಾರ ಉಪನ್ಯಾಸ ನೀಡಿದರು. ಕಾಲೇಜಿನ ಪ್ರಾಚಾರ್ಯ ಎಚ್.ಸಿ. ಪಾಟೀಲ್ ಅಧ್ಯಕ್ಷತೆವಹಿಸಿ ಮಾತನಾಡಿದರು.

ದೀಪಾ ಪ್ರಾರ್ಥಿಸಿದರು. ಮಹಾನಂದಾ ಹಿರೇಮಠ ಸ್ವಾಗತಿಸಿದರು. ಚೇತನಾ ನಾಯ್ಕ್ ನಿರೂಪಿಸಿದರು. ವಿಜಯಲಕ್ಷ್ಮೀ ಪಾಟೀಲ್ ವಂದಿಸಿದರು. ಉಪನ್ಯಾಸಕರಾದ ಮಧುಮತಿ ಗುಡ್ಡಾ, ಭಾಗೋಡಿ, ಬಸವರಾಜ್ ಪುರಾಣೆ, ಭಾಗ್ಯಲಕ್ಷ್ಮೀ, ಶರಣಮ್ಮ ಸೇರಿದಂತೆ ಬೋಧಕ ಬೋಧಕೇತರ ಸಿಬ್ಬಂದಿ ವರ್ಗ ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here