ಶ್ರೀ ಹವಾ ಮಲ್ಲಿನಾಥ ನೇತೃತ್ವದಲ್ಲಿ  ಜುಲೈ 26ಕ್ಕೆ ಜೇವರ್ಗಿಯಲ್ಲಿ ಕಾರ್ಗಿಲ್ ವಿಜಯ ದಿವಸ

0
9

ಜುಲೈ 26ಕ್ಕೆ ಜೇವರ್ಗಿಯಲ್ಲಿ ಕಾರ್ಗಿಲ್ ವಿಜಯ ದಿವಸ

ಕಲಬುರಗಿ: ಭಾರತ ದೇಶದ ಹೆಮ್ಮೆಯ ವೀರಯೋಧರ ಅಪ್ರತಿಮ ಹೋರಾಟ, ತ್ಯಾಗ, ಬಲಿದಾನದಿಂದ ಭಾರತದೇಶವು ೨೬ ಜುಲೈ, ೧೯೯೯ ರಂದು ಪಾಕಿಸ್ತಾನದ ವಿರುದ್ಧ ನಡೆದ ಕಾರ್ಗಿಲ್ ಯುದ್ಧದಲ್ಲಿ ವಿಜಯಸಾಧಿಸಿದ ಪ್ರತಿಕವಾಗಿ ಪ್ರತಿ ವರ್ಷ ದೇಶದಲ್ಲಿ ಕಾರ್ಗಿಲ್ ವಿಜಯೋತ್ಸವವನ್ನು ದೇಶ ಬಾಂಧವರು ಹೆಮ್ಮೆಯಿಂದ ಆಚರಿಸುತ್ತಾ ಬಂದಿದ್ದು ಈ ಬಾರಿ ಸಮಿತಿಯೂ ೨೩ ನೇ ವರ್ಷದ ಕಾರ್ಗಿಲ್ ವಿಜಯ ದಿವಸವನ್ನು ಜುಲೈ ೨೬ ರಂದು ಬೆಳ್ಳಿಗೆ ೧೦.೩೦ ಕ್ಕೆ ಜೇವರ್ಗಿ ಪಟ್ಟಣದ ಆಚರಿಸಲಿದ್ದಾರೆ.

Contact Your\'s Advertisement; 9902492681

ಬಸ್ ನಿಲ್ದಾಣದಿಂದ ಭೂತಪೂರ ಕಲ್ಯಾಣ ಮಂಟಪದ ವರೆಗೆ ವೀರಯೋಧರ ಭಾವಚಿತ್ರಗಳ ಮೆರವಣಿಗೆ ಹಾಗೂ ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರಗಳ ಭವ್ಯ ಮೆರವಣಿಗೆಯನ್ನು ಜೈ ಭಾರತ ಮಾತಾ ಸೇವಾ ಸಮಿತಿ (ರಿ) ನವ ದೆಹಲಿಯ  ಸಂಸ್ಥಾಪಕ ರಾಷ್ಟ್ರೀಯ ಅಧ್ಯಕ್ಷರಾದ ಪರಮ ಪೂಜ್ಯ ಶ್ರೀ ಹವಾ ಮಲ್ಲಿನಾಥ ಮಹಾರಾಜ ನಿರಗುಡಿ ಅವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದೆ.

ನಂತರ ಜೇವರ್ಗಿ ಪಟ್ಟಣದ ಹೊರವಲಯದಲ್ಲಿರುವ ಭೂತಪೂರ ಕಲ್ಯಾಣ ಮಂಟಪದಲ್ಲಿ ಮಧ್ಯಾಹ್ನ ೧೧.೩೦ ಕ್ಕೆ ಕಾರ್ಗಿಲ್ ವಿಜಯ ದಿವಸದ ಅಂಗವಾಗಿ ಭಾರತ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಹಾಗೂ ಸೇವೆ ಸಲ್ಲಿಸಿ ನಿವೃತ್ತರಾದ ಯೋಧರಿಗೆ ಗೌರವ ಸನ್ಮಾನ ಹಮ್ಮಿಕೊಳ್ಳಲಾಗಿದೆ.

ಶಾಲಾ ಮಕ್ಕಳಿಂದ ದೇಶಭಕ್ತಿಯ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ, ಈ ವಿಜಯೋತ್ಸವ ಕುರಿತು ಭಾರತ ದೇಶದ ಹೆಮ್ಮೆಯ ವೀರಯೋಧರ ಅಪ್ರತಿಮ ಹೋರಾಟ, ತ್ಯಾಗ, ಬಲಿದಾನದ ಬಗ್ಗೆ ಕಾರ್ಯಕ್ರಮದಲ್ಲಿ ಭಾಗವಹಿಸುವ ಅನೇಕ ವಾಗ್ಮಿಗಳು ಮಾತನಾಡಲಿದ್ದಾರೆ ಹಾಗೂ ಖ್ಯಾತ ಸಂಗೀತಗಾರಿಂದ ದೇಶಭಕ್ತಿ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದು. ಸಮಸ್ತ ದೇಶ ಬಾಂಧವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾಗಿ ಜೈ ಭಾರತ ಮಾತಾ ಸೇವಾ ಸಮಿತಿ ವಕ್ತಾರ ವೈಜನಾಥ ಎಸ್.ಝಳಕಿ ಪ್ರಕಟಣೆ ಮೂಲಕ ಕೋರಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here