ಕಲಬುರಗಿ: ನಗರದ ಕೆಪಿಎಸ್ ಉರ್ದು ಶಾಲೆಯಲ್ಲಿ ಬಾರಿಸು ಕನ್ನಡ ಡಿಂಡಿಮವ ಕನ್ನಡ ಭಾಷೆಯ ಬೆಳವಣಿಗೆ ಕುರಿತು ವಿಶೇಷ ಉಪನ್ಯಾಸ, ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಜೆಡಿಎಸ್ ರಾಜ್ಯ ಕೋರ ಕಮಿಟಿಯ ಸದಸ್ಯರಾದ ನಾಸೀರ ಹುಸೇನ್ ಉಸ್ತಾದ್, ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ತೆಗಲತಿಪ್ಪಿ, ಕಾಲೇಜಿನ ಪ್ರಚಾರ್ಯ ಡಾ. ಗೌಸುದ್ದೀನ್, ಜಿ.ಪಂ.ಅಕ್ಷರ ದಾಸೋಹ ಶಿಕ್ಷಣಾಧಿಕಾರಿ ಭರತರಾಜ ಸಾವಳಗಿ, ಕಸಾಪ ಉತ್ತರ ವಲಯದ ಅಧ್ಯಕ್ಷ ಪ್ರಭುಲಿಂಗ ಮುಲಗೆ, ಗುರುಜಿ ಡಿಗ್ರಿ ಕಾಲೇಜಿನ ಅಧ್ಯಕ್ಷ ಕಲ್ಯಾಣಕುಮಾರ ಶೀಲವಂತ, ಕಾಲೇಜಿನ ಉಪ ಪ್ರಚಾರ್ಯ ಶಿವಾನಂದ ಬಿರಾದಾರ, ಕೌಸರ್ ಸುಲ್ತಾನ, ನವಾಬ್ ಖಾನ್, ಮಹೇಶ ಹೂಗಾರ, ಸೈಯದ್ ಅಹ್ಮದ್ ಅಲಿ, ಸದಾಶಿವ ಮಿರ್ಜಿ, ಓಂಕಾರ ಸ್ವಾಮಿ, ಹಣಮಂತರಾಯ ದಿಂಡೂರೆ, ನಾಗೇಶ ತಿಮ್ಮಾಜಿ, ಶ್ರೀಕಾಂತ ಪಾಟೀಲ ದಿಕ್ಷಂಗಿ ಇದ್ದರು.