ಪತ್ರಿಕೆಗಳ ಸಂಪಾದಕರ ಸಂಘಕ್ಕೆ ಜಿಡಗಾ: ನೈಕೋಡಿ ಸಾರಥ್ಯ

0
48

ಕಲಬುರಗಿ; ಕರ್ನಾಟಕ ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳ ಸಂಪಾದಕರ ಸಂಘದ ಜಿಲ್ಲಾ ಘಟಕದ ಸಭೆ ನಡೆದು ಸಭೆಯಲ್ಲಿ ಜಿಲ್ಲಾ ಅಧ್ಯಕ್ಷರನ್ನಾಗಿ ಜನತಾ ಟೈಮ್ಸ್ ಪತ್ರಿಕೆಯ ಸಂಪಾದಕ ಶರಣಬಸಪ್ಪ ಜಿಡಗಾ, ಪ್ರಧಾನ ಕಾರ್ಯದರ್ಶಿಯಾಗಿ ಫ್ಯಾಷನ್ ಪೀಪಲ್ ಪತ್ರಿಕೆಯ ಸಂಪಾದಕ ಮಲ್ಲಿಕಾರ್ಜುನ ವ್ಹಿ. ನೈಕೋಡಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಪತ್ರಿಕಾ ಭವನದಲ್ಲಿ ನಡೆದ ಸಭೆಯ ಅಧ್ಯಕ್ಷತೆಯನ್ನು ರಾಜ್ಯ ಪ್ರಧಾನ ಕಾರ್ಯದರ್ಶಿ ಗಿರೀಶ ಕುಲ್ಕರ್ಣಿ, ಅತಿಥಿಗಳಾಗಿ ರಾಜ್ಯ ಸಮಿತಿ ಸದಸ್ಯ ಅರವಿಂದ ಕುಲ್ಕರ್ಣಿ, ಹರೀಶ ಹೆಚ್.ಎಸ್. ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯ ದೇವೇಂದ್ರಪ್ಪ ಕಪನೂರ, ವಿ. ಬಿ. ದೇಸಾಯಿ ಅವರು ವೇದಿಕೆ ಮೇಲಿದ್ದರು.

Contact Your\'s Advertisement; 9902492681

ಅಧ್ಯಕ್ಷತೆ ವಹಿಸಿದ ಗಿರೀಶ ಕುಲ್ಕರ್ಣಿ ಅವರು ಮಾತನಾಡಿ ಜಿಲ್ಲಾ ಮಟ್ಟದ ಹಾಗೂ ಪ್ರದೇಶಿಕ ಮಟ್ಟದ ಪತ್ರಿಕೆಗಳು ಅತ್ಯಂತ ಕಠಿಣ ಪರಿಸ್ಥಿಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಅಂತರಜಾಲದ ಪರಿಣಾಮದಿಂದಾಗಿ ಮೋಬೈಲ್‌ಗಳಲ್ಲಿ ಇಂದು ಕ್ಷಣಕ್ಷಣ ಸುದ್ದಿಗಳು ಬಿತ್ತರವಾಗುತ್ತಿವೆ. ಬೆಳಗಿನ ಪತ್ರಿಕೆಗಳು ಮುದ್ರಣವಾಗಿ ಓದುಗರ ಕೈಸೇರುವಷ್ಟರಲ್ಲಿಯೇ ಸುದ್ದಿಗಳ ಪ್ರಸಾರ ತೀವ್ರವಾಗಿ ಆಗುತ್ತಿದೆ. ಒಳ್ಳೆಯ ಬೆಳ ವಣಿಗೆ ಆದರೂ ಮುದ್ರಣ ಪತ್ರಿಕೆಗಳಿಗೆ ಮಾರಕ ವಾಗುತ್ತಿದೆ ಎಂದು ಬೇಸರ ವ್ಯಕ್ತ ಪಡಿಸಿದರು.

ಮಾಧ್ಯಮ ಕ್ಷೇತ್ರ ಇಂದು ವಿಶಾಲವಾಗಿ ಬೆಳೆಯುತ್ತಿದೆ. ಆಧುನಿಕ ತಂತ್ರಜ್ಞಾನದಿಂದ ಪತ್ರಿಕೆಗಳ ಮುದ್ರಣದಲ್ಲಿ ಅನೇಕ ಬದಲಾವಣೆಗಳನ್ನು ಕಾಣುತ್ತಿದ್ದೇವೆ. ಜಿಲ್ಲಾ ಮಟ್ಟದ ಪತ್ರಿಕೆಗಳು ಆಧುನಿಕ ತಂತ್ರಜ್ಞಾನಕ್ಕೆ ಬದಲಾಗುವ ಅನಿವಾರ್ಯತೆ ಇದೆ. ಆದರೆ ಏರುತ್ತಿರುವ ಬೆಲೆಯಿಂದಾಗಿ ಮುದ್ರಣ ವೆಚ್ಚ ದಿನದಿಂದ ದಿನಕ್ಕೆ ಅಧಿಕವಾಗುತ್ತಿದೆ. ಈ ನಿಟ್ಟಿನಲ್ಲಿ ಪತ್ರಿಕೆ ನಡೆಸುವುದು ಕಷ್ಟಕರವಾಗಿದೆ. ಅದಕ್ಕಾಗಿ ಇನ್ನೂ ಹೆಚ್ಚಿನ ಸವಲತ್ತುಗಳಿಗೆ ಮಹತ್ವ ನೀಡಲು ಸಂಘದಿಂದ ಸರಕಾರದೊಂದಿಗೆ ನಿರಂತರ ಸಂಪರ್ಕ ಸಾಧಿಸಬೇಕು ಎಂದು ಸಲಹೆ ನೀಡಿದರು.
ನಂತರ ನಡೆದ ಪದಾಧಿಕಾರಿಗಳ ಆಯ್ಕೆಯಲ್ಲಿ ಜಿಲ್ಲಾ ಘಟಕದ ಅಧ್ಯಕ್ಷರನ್ನಾಗಿ ಶರಣಬಸಪ್ಪ ಜಿಡಗಾ, ಪ್ರಧಾನ ಕಾರ್ಯದರ್ಶಿಯಾಗಿ ಮಲ್ಲಿಕಾರ್ಜುನ ವ್ಹಿ. ನೈಕೋಡಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಸಭೆಯಲ್ಲಿ ಹಿರಿಯ ಸಂಪಾದಕರಾದ ಪಿ.ಎಂ. ಮಣ್ಣೂರ, ಶಂಕರ ಕೋಡ್ಲಾ, ವಿಶ್ವನಾಥ ಸ್ವಾಮಿ, ಶಿವರಾಯ ದೊಡ್ಮನಿ, ಸಿದ್ರಾಮಪ್ಪ ಮಾಲೀಬಿರಾದರ, ಸಿದ್ದಣ್ಣ ಮಾಲಗಾರ, ಸುರೇಶ ಶಿಂಧೆ, ಬಿ. ವಿ. ಚಕ್ರವರ್ತಿ, ಭರತ ಖಮೀತಕರ, ಬಾಲಾಜಿ ಚಿತ್ತೇಕರ, ಗುರುರಾಜ ಕುಲಕರ್ಣಿ, ಮಲ್ಲಿಕಾರ್ಜುನ ಜೋಗ, ಚಂದ್ರಕಾಂತ ಹಾವನೂರ, ವಿಜಯಕುಮಾರ ಜಿಡಗಿ, ಸುರೇಶ ಗೌರೆ, ಅಶೋಕ ಪಾಟೀಲ, ಸತೀಶ ಜೇವರ್ಗಿ, ಅಜೀ ಜುಲ್ಲಾ ಸರಮಸ್ತ, ಸಚೀನ ಕಡ ಗಂಚಿ, ಸಿದ್ದಣ್ಣ ಯಡ್ಡಳ್ಳಿ, ನಾಗರಾಜ ಖಮೀತಕರ, ರಮೇಶ ಖಮೀತಕರ, ತಮ್ಮಣ್ಣ ಭಾಗೇವಾಡಿ, ಬೌದ್ಧಪ್ರೀಯ ನಾಗಸೇನ ಸೇರಿದಂತೆ ಸಂಪಾದಕರು ಉಪಸ್ಥೀತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here